Asianet Suvarna News Asianet Suvarna News

ಪಿಲಿಭೀತ್‌ಗೆ ಬಂದ ಹುಲಿ ನೋಡಲು ಸೇರಿದ ಜನ ಸಾಗರ: ಕೊನೆಗೂ ಕಾಪೌಂಡ್‌ ಮೇಲೇ ಮಲಗಿದ್ದ ಹುಲಿ ಸೆರೆ

ಗ್ರಾಮಕ್ಕೆ ಹುಲಿಯೊಂದು ನುಗ್ಗಿದ ಪರಿಣಾಮ ಗ್ರಾಮಸ್ಥರೆಲ್ಲ ರಾತ್ರಿಯಿಡೀ ನಿದ್ದೆಗೆಟ್ಟು ಹುಲಿಯನ್ನೇ ಕಾದಿರುವ ಘಟನೆ ಉತ್ತರ ಪ್ರದೇಶದ ಪೀಲಿಭೀತ್‌ ಜಿಲ್ಲೆಯ ಅಟ್ಕೋನಾ ಗ್ರಾಮದಲ್ಲಿ ನಡೆದಿದೆ. ಭಾರಿ ಹರಸಾಹಸದ ಬಳಿಕ ಅರಣ್ಯಾಧಿಕಾರಿಗಳು ಹುಲಿಯನ್ನು ಸೆರೆ ಹಿಡಿದಿದ್ದಾರೆ.

The tiger that entered atkona village in Uttar pradesh Pilibheet and created panic akb
Author
First Published Dec 27, 2023, 7:31 AM IST | Last Updated Dec 27, 2023, 7:31 AM IST


ಲಖನೌ: ಗ್ರಾಮಕ್ಕೆ ಹುಲಿಯೊಂದು ನುಗ್ಗಿದ ಪರಿಣಾಮ ಗ್ರಾಮಸ್ಥರೆಲ್ಲ ರಾತ್ರಿಯಿಡೀ ನಿದ್ದೆಗೆಟ್ಟು ಹುಲಿಯನ್ನೇ ಕಾದಿರುವ ಘಟನೆ ಉತ್ತರ ಪ್ರದೇಶದ ಪೀಲಿಭೀತ್‌ ಜಿಲ್ಲೆಯ ಅಟ್ಕೋನಾ ಗ್ರಾಮದಲ್ಲಿ ನಡೆದಿದೆ. ಭಾರಿ ಹರಸಾಹಸದ ಬಳಿಕ ಅರಣ್ಯಾಧಿಕಾರಿಗಳು ಹುಲಿಯನ್ನು ಸೆರೆ ಹಿಡಿದಿದ್ದಾರೆ.

ಪೀಲಿಭೀತ್‌ ಹುಲಿ ಸಂರಕ್ಷಣಾ ಪ್ರದೇಶವಾಗಿದ್ದು, ಸೋಮವಾರ ರಾತ್ರಿ ಇಲ್ಲಿನ ಅಟ್ಕೋನಾ ಗ್ರಾಮಕ್ಕೆ ಹುಲಿಯೊಂದು ನುಗ್ಗಿತ್ತು. ಹುಲಿಯನ್ನು ಕಂಡು ನಾಯಿಗಳು ಬೊಗಳುತ್ತಿದ್ದಂತೆಯೇ ದಂಡು ದಂಡಾಗಿ ಗ್ರಾಮಸ್ಥರು ಹುಲಿಯ ಸುತ್ತ ನೆರೆದಿದ್ದಅರೆ. ಯಾವಾಗಲೂ ಅರಣ್ಯದಲ್ಲಿರುವ ಹುಲಿ, ಜನಸ್ತೋಮ ನೋಡಿ ಬೆದರಿದೆ ಹಾಗೂ ಮನೆಯೊಂದರ ಕಂಪೌಂಡ್‌ ಹತ್ತಿ ಮಲಗಿದೆ. ಮುಂಜಾನೆವರೆಗೂ ಹಲಿ ಕದಡದೆ ಅಲ್ಲಿಯೇ ಮಲಗಿದ್ದು, ಗ್ರಾಮಸ್ಥರೂ ಕೂಡ ಹುಲಿಯ ವಿಡಿಯೋ ಮಾಡುತ್ತ, ಅದಕ್ಕೆ ಟಾರ್ಚ್‌ ಬಿಡುತ್ತ ಅಲ್ಲಿಯೇ ಮುಂಜಾನೆವರೆಗೆ ಕಾದಿದ್ದಾರೆ.

ಹಾಡಹಗಲೇ ಸಾಕು ಪ್ರಾಣಿಗಳ ಬೇಟೆಯಾಡಲು ಮುಂದಾದ ವ್ಯಾಘ್ರ!

ಇದಾದ ಬಳಿಕ ಮುಂಜಾನೆ ಸ್ಥಳೀಯ ಅರಣ್ಯಾಧಿಕಾರಿಗಳು ಅರವಳಿಕೆ ಮದ್ದು ಚುಚ್ಚಿ ಹುಲಿಯನ್ನು ಸೆರೆಹಿಡಿದು ರಕ್ಷಿಸಿದ್ದಾರೆ. ಬಳಿಕ ಮತ್ತೆ ಕಾಡಿಗೆ ಬಿಟ್ಟಿದ್ದಾರೆ. ಅಧಿಕಾರಿಗಳು ಹುಲಿಯನ್ನು ಹಿಡಿಯುವ ವೇಳೆ ಅದರ ಬಾಲ ಹಿಡಿದಿರುವ ದೃಶ್ಯಾವಳಿಗಳು ಜಾಲತಾಣದಲ್ಲಿ ವೈರಲ್‌ ಆಗಿವೆ.

ಬಂಡೀಪುರದಲ್ಲಿ ಆನೆಗಳ ಹಿಂಡು, ಜಿಂಕೆಗಳ ದಂಡು: ಪ್ರವಾಸಿಗರನ್ನು ಆಕರ್ಷಿಸುತ್ತಿರುವ ವನ್ಯಮೃಗಗಳು..!

Latest Videos
Follow Us:
Download App:
  • android
  • ios