ಮಹತ್ವದ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್‌ನಿಂದ ಉಚ್ಚಾಟಿತ ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಸಚಿನ್‌ ಪೈಲಟ್‌ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಸೋಮವಾರ ಭೇಟಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಪೈಲಟ್‌ರನ್ನು ರಾಉಲ್ ಹಾಗೂ ಪ್ರಿಯಾಂಕಾ ಗಾಂಧಿ ಮನವೊಲಿಸಲು ಯಶಸ್ವಿಯಾಗಿರುವುದಾಗಿಯೂ ತಿಳಿದು ಬಂದಿದೆ. ಹಾಗಾಧ್ರೆ ಇದ್ದಕ್ಕಿದ್ದಂತೆ ಪೈಲಲಟ್ ದಾರಿ ಬದಲಿಸಿದ್ದು ಯಾಕೆ? ಇಲ್ಲಿದೆ 5 ಕಾರಣ.

ಪ್ರಿಯಾಂಕಾ ತಂತ್ರಗಾರಿಕೆ: ಪೈಲಟ್‌ ಮತ್ತೆ ‘ಕೈ’ವಶ!

1. ಜತೆಯಲ್ಲಿ ಬರುತ್ತೇನೆ ಎಂದವರು ಗೆಹ್ಲೋಟ್‌ ಪಾಳಯಕ್ಕೆ ಹಾರಿದರು. ಬೆಂಬಲಕ್ಕೆ ನಿಂತದ್ದು 19 ಶಾಸಕರು ಮಾತ್ರ. ಹೀಗಾಗಿ ಸರ್ಕಾರ ಬೀಳಿಸಲು ಆಗದು ಎಂಬುದು ಸಚಿನ್‌ಗೆ ಖಾತ್ರಿ ಆಯಿತು

2. ಪೈಲಟ್‌ ಏನಾದರೂ ಬಿಜೆಪಿಗೆ ಸೇರಿದರೆ ಮಾಜಿ ಸಿಎಂ ವಸುಂಧರಾ ರಾಜೆ ಬೆಂಬಲಿಗ ಶಾಸಕರು ಅಡ್ಡಮತದಾನ ಮಾಡುವ ಸೂಚನೆ ದೊರಕಿತು

3. ಬಿಜೆಪಿ ಸೇರಬೇಕೋ? ಹೊಸ ಪಕ್ಷ ಕಟ್ಟಬೇಕೋ ಎಂಬ ವಿಚಾರದಲ್ಲಿ ಸ್ಪಷ್ಟನಿಲುವು ತಳೆಯಲು ಸಚಿನ್‌ ವಿಫಲರಾದರು

ರಾಹುಲ್-ಪ್ರಿಯಾಂಕಾ ಭೇಟಿ ಮಾಡಿ ಪೈಲಟ್ ನೀಡಿದ ವಾಗ್ದಾನ!

4. ಬಂಡಾಯ ಸಾರಿದರೂ ನೆಹರು-ಗಾಂಧಿ ಕುಟುಂಬ ಪೈಲಟ್‌ ವಿರುದ್ಧ ಒಂದು ಮಾತನ್ನೂ ಆಡಲಿಲ್ಲ. ಬದಲಿಗೆ ಮನವೊಲಿಕೆ ಕಸರತ್ತು ನಡೆಸಿತು

5. ಬಾಲ್ಯದಿಂದಲೂ ನೆಹರು- ಗಾಂಧಿ ಕುಟುಂಬದ ಜತೆ ಸಚಿನ್‌ಗೆ ಒಡನಾಟ ಹೆಚ್ಚು. ರಾಹುಲ್‌- ಪ್ರಿಯಾಂಕಾ ಜತೆ ಮಾತನಾಡಿದಾಗ ಎಲ್ಲವೂ ಸರಿಹೋಯಿತು