Asianet Suvarna News Asianet Suvarna News

ರಾಹುಲ್-ಪ್ರಿಯಾಂಕಾ ಭೇಟಿ ಮಾಡಿ ಪೈಲಟ್ ನೀಡಿದ ವಾಗ್ದಾನ!

ಕಾಂಗ್ರೆಸ್ ಅಗ್ರ ನಾಯಕರನ್ನು ಭೇಟಿ ಮಾಡಿದ ಸಚಿನ್ ಪೈಲಟ್/  ಕಾಂಗ್ರೆಸ್ ನೊಂದಿಗೆ ಕೆಲಸ ಮಾಡುವ ವಾಗ್ದಾನ/ ರಾಜಸ್ಥಾನ ಸರ್ಕಾರಕ್ಕೆ  ಬೆಂಬಲವಾಗಿ ನಿಲ್ಲಲಿದ್ದಾರೆ

Sachin Pilot meets Gandhis Panel To Tackle His Grievances
Author
Bengaluru, First Published Aug 10, 2020, 8:18 PM IST

ನವದೆಹಲಿ(ಆ.10)   ಕಾಂಗ್ರೆಸ್ ರೆಬಲ್ ನಾಯಕರಾಗಿ ಗುರುತಿಸಿಕೊಂಡು ರಾಜಸ್ಥಾನ ಸರ್ಕಾರಕ್ಕೆ ಆತಂಕ  ತಂದಿದ್ದ  ಸಚಿನ್ ಪೈಲಟ್  ಸೋಮವಾರ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಗಾಂಧಿ ಭೇಟಿ ಮಾಡಿದ್ದಾರೆ.

ರಾಹುಲ್ ಗಾಂಧಿ ಭೇಟಿ ಮಾಡಿ ಎಲ್ಲ ಬೆಳವಣಿಗೆಗಳ ಮಾಹಿತಿ ನೀಡಿದ್ದಾರೆ.  ತಮ್ಮ ಬೇಡಿಕೆಯನ್ನು ತಿಳಿಸಿದ್ದಾರೆ. ಇದಾದ  ಮೇಲೆ ನಾಯಕರು ಒಂದು ತೀರ್ಮಾನಕ್ಕೆ ಬಂದಿದ್ದು ಸಚಿನ್ ಪೈಲಟ್ ಕಾಂಗ್ರೆಸ್ ಜತೆಯೇ ಕೆಲಸ ಮಾಡುವ ವಾಗ್ದಾನ ಮಾಡಿದ್ದಾರೆ.  ರಾಜಸ್ಥಾನ ಸರ್ಕಾರಕ್ಕೆ ಬೆಂಬಲವಾಗಿ ನಿಲ್ಲಲಿದ್ದಾರೆ. 

ಸಚಿನ್ ಪೈಲಟ್ ಮುಂದಿನ ಹೆಜ್ಜೆ ಏನು?

ಈ ಸಭೆಯ ಬಳಿಕೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಸಚಿನ್ ಪೈಲಟ್ ಮತ್ತು ಅವರ ಬೆಂಬಲಿಗರು ರಾಜಸ್ಥಾನದಲ್ಲಿ ಎತ್ತಿದ್ದ ಪ್ರಶ್ನೆಗಳ ಬಗ್ಗೆ ಮಾಹಿತಿ ಪಡೆದು ವರದಿ ಸಲ್ಲಿಸಲು ಮೂರು ಜನರ ಸಮಿತಿಯನ್ನು ನೇಮಕ ಮಾಡುವ ತೀರ್ಮಾನ ಮಾಡಿದ್ದಾರೆ ಎಂದು ಕೆಸಿ ವೇಣುಗೋಪಾಲ್ ತಿಳಿಸಿದ್ದಾರೆ.

ಬಂಡಾಯದ ಬಾವುಟ ಹಾರಿಸಿದ್ದ ಕಾರಣಕ್ಕೆ ರಾಜಸ್ಥಾನ ಸರ್ಕಾರದ ಉಪ ಮುಖ್ಯಮಂತ್ರಿಯಾಗಿದ್ದ ಸಚಿನ್ ಪೈಲಟ್ ರನ್ನು ಆ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಅಲ್ಲದೆ ರಾಜಸ್ಥಾನ ಕಾಂಗ್ರೆಸ್ ಘಟಕದ ಅಧ್ಯಕ್ಷ ಸ್ಥಾನದಿಂದಲೂ ತೆಗೆದುಹಾಕಲಾಗಿತ್ತು. 

Follow Us:
Download App:
  • android
  • ios