ತನ್ನ ವಿರುದ್ಧವೇ ಕಿರುಚಿ ಕಿರುಚಿ ಪ್ರತಿಭಟನೆ ಮಾಡುತ್ತಿದ್ದ ವಿಪಕ್ಷದವರಿಗೆ ನೀರು ಕೊಟ್ಟ ಪ್ರಧಾನಿ: ವೀಡಿಯೋ ವೈರಲ್

ಪ್ರಧಾನಿ ಮೋದಿ ಭಾಷಣ ಮಾಡುತ್ತಿದ್ದ ವೇಳೆ ಸದನದ ಬಾವಿಗಿಳಿದು ಕಿರುಚಿ ಬೊಬ್ಬೆ ಹೊಡೆದು ತಮ್ಮ ವಿರುದ್ಧವೇ ಪ್ರತಿಭಟನೆ ಮಾಡುತ್ತಿದ್ದ ವಿಪಕ್ಷಗಳ ನಾಯಕರಿಗೆ ಮೋದಿ ಕುಡಿಯಲು ನೀರು ನೀಡಿದ ಅಪರೂಪದ ಘಟನೆ ನಡೆದಿದೆ. 

The Prime Minister gave water to the opposition party members who were screaming and protesting against him Video viral akb

ನವದೆಹಲಿ: ಪ್ರಧಾನಿ ಮೋದಿ ಭಾಷಣ ಮಾಡುತ್ತಿದ್ದ ವೇಳೆ ಸದನದ ಬಾವಿಗಿಳಿದು ಕಿರುಚಿ ಬೊಬ್ಬೆ ಹೊಡೆದು ತಮ್ಮ ವಿರುದ್ಧವೇ ಪ್ರತಿಭಟನೆ ಮಾಡುತ್ತಿದ್ದ ವಿಪಕ್ಷಗಳ ನಾಯಕರಿಗೆ ಮೋದಿ ಕುಡಿಯಲು ನೀರು ನೀಡಿದ ಅಪರೂಪದ ಘಟನೆ ನಡೆದಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಒಬ್ಬರು ನೀರು ನಿರಾಕರಿಸಿದರೆ, ಮತ್ತೊಬ್ಬರು ನೀರು ಕುಡಿದು ದಾಹ ತೀರಿಸಿಕೊಂಡರು. 

ಮೋದಿ ಭಾಷಣಕ್ಕೆ ಪದೇ ಪದೇ ವಿಪಕ್ಷಗಳ ಅಡ್ಡಿ
ನವದೆಹಲಿ: 18ನೇ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸುಮಾರು 2.5 ತಾಸಿನ ಭಾಷಣ ಮಾಡುವ ವೇಳೆ ವಿಪಕ್ಷ ನಾಯಕರು ಪದೇ ಪದೇ ಅಡ್ಡಿ ಮಾಡಿದರು. ಮಣಿಪುರ್‌ ಗೋ, ಮಣಿಪುರ್‌ ವಾಂಟ್‌ ಜಸ್ಟಿಸ್‌,ನೀಟ್‌ ಜಸ್ಟಿಸ್‌, ಅಗ್ನಿವೀರ್, ಚುನಾವಣಾ ಆಯೋಗ ಇತ್ಯಾದಿ ಘೋಷಣೆಗಳನ್ನು ಕೂಗುತ್ತಲೇ ತಮ್ಮ ಪ್ರತಿಭಟನೆ ಮುಂದುವರೆಸಿದರು. ಆದರೆ ಪ್ರಧಾನಿ ನರೇಂದ್ರ ಮೋದಿ ಮಾತ್ರ ಯಾವುದಕ್ಕೂ ಗಮನ ನೀಡದೇ ತಮ್ಮ ಪಾಡಿಗೆ ತಾವು ಭಾಷಣ ಮಾಡಿದರು. ಈ ನಡುವೆ, ಮೋದಿ ಭಾಷಣಕ್ಕೆ ವಿಪಕ್ಷಗಳ ಅಡ್ಡಿ ಖಂಡಿಸಿ ಕೊನೆಗೆ ಖಂಡನಾ ಗೊತ್ತುವಳಿಯನ್ನು ಸದನ ಅಂಗೀಕರಿಸಿತು.

18ನೇ ಲೋಕಸಭೆಯ ಮೊದಲ ಅಧಿವೇಶನ ಮುಂದೂಡಿಕೆ

ನವದೆಹಲಿ: ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದ ಮೇಲಿನ ವಂದನಾ ನಿರ್ಣಯದ ಅಂಗೀಕಾರದ ನಂತರ 18 ಲೋಕಸಭೆಯ ಮೊದಲ ಅಧಿವೇಶನವನ್ನು ಮಂಗಳವಾರ ಮುಂದೂಡಲಾಯಿತು. ಇನ್ನು ಬಜೆಟ್‌ ಅಧಿವೇಶನ ಜು.22ರಂದು ಆರಂಭವಾಗುವ ನಿರೀಕ್ಷೆ ಇದೆ. ಜೂ.24 ರಂದು ಆರಂಭವಾದ ಅಧಿವೇಶನವು 34 ಗಂಟೆಗಳ ಕಾಲ ಏಳು ಅಧಿವೇಶನಗಳಲ್ಲಿ ನಡೆದವು. ಸದನದ ಉತ್ಪಾದಕತೆ ಶೇ.103 ರಷ್ಟಿತ್ತು ಎಂದು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಹೇಳಿದರು. ವಂದನಾ ನಿರ್ಣಯದ ಮೇಲಿನ ಚರ್ಚೆಗಳು 18 ಗಂಟೆಗಳ ಕಾಲ ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ಚರ್ಚೆಯಲ್ಲಿ ಉತ್ತರಿಸಿದರು ಎಂದು ಬಿರ್ಲಾ ತಿಳಿಸಿದರು.

ರಾಹುಲ್‌ ಗಾಂಧಿ ಟೀಕೆಗಳಿಗೆ ಆ ಕ್ಷಣವೇ ಫಟಾಫಟ್ ಉತ್ತರ: ಲೋಕಸಭೆಯಲ್ಲಿ ಅಪರೂಪದ ಕ್ಷಣ

ಪ್ರಧಾನಿ ಮೋದಿ ವಿಪಕ್ಷಗಳಿಗೆ ನೀರು ಕುಡಿಸಿದ ವೀಡಿಯೋ ಇಲ್ಲಿದೆ ನೋಡಿ

 

Latest Videos
Follow Us:
Download App:
  • android
  • ios