ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಮಾತನಾಡುವಾಗ ಲೋಕಸಭೆಯಲ್ಲಿ ಅವರ ಪ್ರತಿಯೊಂದು ವಿಷಯದ ಪ್ರಶ್ನೆಗೂ ಆ ಕ್ಷಣದಲ್ಲೇ ಸಚಿವರು ಉತ್ತರ ನೀಡಿದ ಅಪರೂಪದ ಪ್ರಸಂಗಗಳು ನಡೆದವು. 

ನವದೆಹಲಿ: ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಮಾತನಾಡುವಾಗ ಲೋಕಸಭೆಯಲ್ಲಿ ಅವರ ಪ್ರತಿಯೊಂದು ವಿಷಯದ ಪ್ರಶ್ನೆಗೂ ಆ ಕ್ಷಣದಲ್ಲೇ ಸಚಿವರು ಉತ್ತರ ನೀಡಿದ ಅಪರೂಪದ ಪ್ರಸಂಗಗಳು ನಡೆದವು. ಹಿಂದೂಗಳಿಗೆ ಸಂಬಂಧಿಸಿದಂತೆ ಬಿಜೆಪಿಯನ್ನು ರಾಹುಲ್‌ ಟೀಕಿಸಿದಾಗ 2 ಸಲ ಎದ್ದು ನಿಂತು ಪ್ರಧಾನಿ ನರೇಂದ್ರ ಮೋದಿ ಅವರೇ ಉತ್ತರಿಸಿದರು. ಇನ್ನು ರಾಹುಲ್‌ರ ಅನೇಕ ಟೀಕೆಗಳ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಲವು ಬಾರಿ ಎದ್ದು ನಿಂತು ಎದಿರೇಟು ನೀಡುವ ಯತ್ನ ಮಾಡಿದರು.

ಇನ್ನು ರಾಹುಲ್‌ ಅಗ್ನಿವೀರ ಯೋಜನೆ ಟೀಕಿಸಿದಾಗ ರಕ್ಷಣಾ ಸಚಿವ ರಾಜನಾಥ ಸಿಂಗ್‌, ರೈತರ ಸಾಲ ಮನ್ನಾ ಮಾಡುತ್ತಿಲ್ಲ ಎಂದಾಗ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಆಯಾ ಕ್ಷಣದಲ್ಲೇ ಉತ್ತರಿಸಿ ತಿರುಗೇಟು ನೀಡಿದರು.

ಮೋದಿ ನಗಲಿಲ್ಲ ಎಂದ ರಾಹುಲ್

ನವದೆಹಲಿ: ಸೋಮವಾರ ಬೆಳಗ್ಗೆ ನಾನು ಲೋಕಸಭೆಗೆ ಬಂದಾಗ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ನನ್ನನ್ನು ನೋಡಿ ಹಸನ್ಮುಖಿಯಾಗಿ ಗೌರವ ಸೂಚಿಸಿದರು. ಆದರೆ ಮೋದಿ ನನ್ನ ಕಡೆ ನೋಡಲಿಲ್ಲ. ನಸುನಗಲೂ ಇಲ್ಲ. ಗಂಭೀರವಾಗಿದ್ದರು. ಬಿಜೆಪಿಯ ಇತರ ಸಚಿವರೂ ನನ್ನ ಕಡೆ ನೋಡಿ ನಸುನಗಲಿಲ್ಲ. ಏಕೆಂದರೆ ಅವರಿಗೆ ಮೋದಿ ಏನೆಂದುಬಿಡುತ್ತಾರೋ ಎಂಬ ಭಯ. ನಿತಿನ್‌ ಗಡ್ಕರಿ ಅವರಿಗೂ ಇದೇ ಸಮಸ್ಯೆ ಎಂದು ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಬಿಜೆಪಿ ಹಾಗೂ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

ಪ್ರಧಾನಿಗೆ ತಲೆಬಾಗಿದ್ದೀರಿ ನನಗಿಲ್ಲ ಎಂದ ರಾಹುಲ್‌ಗೆ ಸ್ಪೀಕರ್ ಕೊಟ್ಟ ಉತ್ತರ ಹೇಗಿದೆ ನೋಡಿ?

ಇಂದು ರಾಷ್ಟ್ರಪತಿ ವಂದನಾ ನಿರ್ಣಯಕ್ಕೆ ಪ್ರಧಾನಿ ಮೋದಿ ಉತ್ತರ

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮಾಡಿದ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಇಂದು ಸಂಜೆ 4 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಿಸಲಿದ್ದಾರೆ. ಈ ಬಾರಿಯ ರಾಷ್ಟ್ರಪತಿ ಮುರ್ಮು ಅವರು ತುರ್ತು ಪರಿಸ್ಥಿತಿ, ದೇಶದ ಆರ್ಥಿಕತೆ, ಕೇಂದ್ರ ಸರ್ಕಾರದ ಸಾಧನೆಗಳ ಕುರಿತು ಮಾತನಾಡಿದ್ದರು. ಇದಕ್ಕೆ ಕಾಂಗ್ರೆಸ್‌ ಸೇರಿ ವಿಪಕ್ಷಗಳೆಲ್ಲವೂ ತೀವ್ರವಾಗಿ ತಮ್ಮ ಅಸಮಾಧಾನ ಹೊರಹಾಕಿವೆ. 

ಬರೆದಿಟ್ಟುಕೊಳ್ಳಿ, ಮುಂದಿನ ಚುನಾವಣೆಯಲ್ಲಿ ಗುಜರಾತ್‌ನಲ್ಲಿ ಬಿಜೆಪಿನಾ ಸೋಲಿಸುತ್ತೇವೆ: ರಾಹುಲ್ ಗಾಂಧಿ

ಅಲ್ಲದೆ ಮೋದಿ ವಿರುದ್ಧ ಲೋಕಸಭೆ ವಿಪಕ್ಷ ರಾಹುಲ್‌ ಗಾಂಧಿ ಸೇರಿ ಅನೇಕರು ಚರ್ಚೆಯ ವೇಳೆ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆಲ್ಲ ಮೋದಿ ಸವಿಸ್ತಾರ ಉತ್ತರ ನೀಡುವ ನಿರೀಕ್ಷೆಯಿದೆ.