ಶಾಲೆ ಮುಂದೆ ರೌಡಿಗಳ ಅಟ್ಟಹಾಸ: ಪುಟ್ಟ ಮಗನ ಮುಂದೆ ಅಪ್ಪನ ಮೇಲೆ ಭೀಕರ ದಾಳಿ: ವೀಡಿಯೋ
ಎರಡು ಬೈಕ್‌ನಲ್ಲಿ ಬಂದ ಆರು ಜನ ದುಷ್ಕರ್ಮಿಗಳು, ಮಗನನ್ನು ಶಾಲೆಗೆ ಬಿಡುತ್ತಿದ್ದ ತಂದೆಯ ಮೇಲೆ ಭೀಕರವಾಗಿ ದಾಳಿ ನಡೆಸಿ ಆತನ ಎರಡು ಕಾಲುಗಳನ್ನು ಮುರಿದು ಹಾಕಿರುವಂತಹ ಭೀಕರ ಘಟನೆ ಪಂಜಾಬ್‌ನ ಶಾಲೆಯೊಂದರ ಬಳಿ ನಡೆದಿದೆ.

ಪಂಜಾಬ್: ಎರಡು ಬೈಕ್‌ನಲ್ಲಿ ಬಂದ ಆರು ಜನ ದುಷ್ಕರ್ಮಿಗಳು, ಮಗನನ್ನು ಶಾಲೆಗೆ ಬಿಡುತ್ತಿದ್ದ ತಂದೆಯ ಮೇಲೆ ಭೀಕರವಾಗಿ ದಾಳಿ ನಡೆಸಿ ಆತನ ಎರಡು ಕಾಲುಗಳನ್ನು ಮುರಿದು ಹಾಕಿರುವಂತಹ ಭೀಕರ ಘಟನೆ ಪಂಜಾಬ್‌ನ ಶಾಲೆಯೊಂದರ ಬಳಿ ನಡೆದಿದ್ದು, ಘಟನೆಯ ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಬೈಕ್‌ನಲ್ಲಿ ಬಂದ ಆರು ಜನ ದುಷ್ಕರ್ಮಿಗಳು, ಮಗನನ್ನು ಶಾಲೆಗೆ ಬಿಡಲು ಬಂದ ತಂದೆಯ ಮೇಲೆ ಮಗನೆದರಲ್ಲೇ ಅಟ್ಯಾಕ್ ಮಾಡಿದ್ದಾರೆ. ಮಗನನ್ನು ಬೈಕ್‌ನಿಂದ ಇಳಿಸುವುದಕ್ಕೂ ಮೊದಲೇ ಆತನನ್ನು ಹಿಂಬಂದಿ ಕತ್ತನ್ನು ಲಾಕ್ ಮಾಡಿದ ದುಷ್ಕರ್ಮಿಗಳು ಬಳಿಕ ಆತನಿಗೆ ದೊಣ್ಣೆ ರಾಡು, ಲಾಂಗ್‌ಗಳಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇತ್ತ ತನ್ನ ತಂದೆಯನ್ನು ದುಷ್ಕರ್ಮಿಗಳು ಹಿಗ್ಗಾಮುಗ್ಗಾ ಥಳಿಸುವುದನ್ನು ನೋಡಿಯೂ ಏನೂ ಮಾಡಲಾಗದೇ ಅಸಹಾಯಕತೆ ಹಾಗೂ ಭಯದಿಂದ ಬಾಲಕ ಅಳುತ್ತಾ ನಿಂತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
ಪಂಜಾಬ್‌ನ ಮನ್ಸಾ ಸ್ಕೂಲ್ ಎದುರು ಈ ಭಯಾನಕ ಘಟನೆ ನಡೆದಿದೆ. ಶಾಲೆ ಎಂಬುದನ್ನು ಕೂಡ ಗಮನಿಸದೇ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಮೊದಲೇ ಯೋಜಿತ ದಾಳಿ ಇದಾಗಿದ್ದು, ಆರು ಜನರಲ್ಲಿ ಕೆಲವರು ಮೊದಲೇ ಬಂದು ಶಾಲೆಯ ಬಳಿ ನಿಂತಿದ್ದರು. ಉಳಿದ ಮೂವರು ಹಲ್ಲೆಗೊಳಗಾದ ವ್ಯಕ್ತಿಯ ಬೈಕ್ ಅನ್ನು ಹಿಂಬಾಲಿಸಿದ್ದಾರೆ. ಬೈಕ್ ಶಾಲೆಯ ಸಮೀಪ ಬರುತ್ತಿದ್ದಂತೆ ಮಗನನ್ನು ಬೈಕ್‌ನಿಂದ ಇಳಿಸುವುದಕ್ಕೂ ಮೊದಲೇ ದುಷ್ಕರ್ಮಿಗಳು ಆತನ ಮೇಲೆ ಮುಗಿಬಿದ್ದಿದ್ದು ದಾಳಿ ನಡೆಸಿದ್ದಾರೆ. ಪುಟ್ಟ ಮಗನ ಮುಂದೆಯೇ ರೌಡಿಗಳು ಆತನಿಗೆ ಹಿಗ್ಗಾಮುಗ್ಗಾ ಥಳಿಸುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
ಕಾಲರ್‌ನಿಂದ ಲಾಕ್ ಮಾಡಿದ ದುಷ್ಕರ್ಮಿಗಳು:
ಬೈಕ್ ನಿಲ್ಲಿಸಿ ಇನ್ನೇನು ಮಗನನ್ನುಬೈಕ್‌ನಿಂದ ಇಳಿಸಬೇಕು ಅನ್ನುವಷ್ಟರಲ್ಲಿ ದುಷ್ಕರ್ಮಿಗಳು ಅಟ್ಯಾಕ್ ಮಾಡಿದ್ದು, ವ್ಯಕ್ತಿಯ ಕಾಲರ್ ಹಿಡಿದು ಹಿಂಭಾಗದಿಂದಲೇ ದುಷ್ಕರ್ಮಿಗಳು ಲಾಕ್ ಮಾಡಿ ಕೆಳಗೆ ಬೀಳಿಸಿದ್ದಾರೆ. ದುಷ್ಕರ್ಮಿಗಳೊಬ್ಬ ಬಾಲಕನನ್ನು ಬೈಕ್‌ನಿಂದ ಇಳಿಸಿ ಪಕ್ಕಕ್ಕೆ ನಿಲ್ಲಿಸಿದ್ದಾನೆ. ಇತ್ತ ಒಮ್ಮಿಂದೊಮ್ಮೆಲೇ ನಡೆದ ಈ ದಾಳಿಯಿಂದ ಬಾಲಕ ಗಾಬರಿಯಾಗಿದ್ದಾನೆ. ದುಷ್ಕರ್ಮಿಗಳು ತನ್ನ ತಂದೆಯನ್ನು ಹಿಗ್ಗಾಮುಗ್ಗಾ ಥಳಿಸುತ್ತಿರುವುದನ್ನು ನೋಡಿ ಆತ ಅಸಹಾಯಕನಾಗಿ ಅಳಲು ಶುರು ಮಾಡಿದ್ದಾನೆ.
ಕ್ರಿಕೆಟರ್ ಶರ್ಮಾ ತಂದೆಯ ಮೇಲೆ ಹಲ್ಲೆ ಹಾಗೂ ಹಣ ದರೋಡೆ
ಶಿಕ್ಷಣ ಸಂಸ್ಥೆಯ ಮುಂದೆಯೇ ಈ ಗೂಂಡಾಗಿರಿ ನಡೆಸಿದ್ದು, ಮಕ್ಕಳು ಹಾಗೂ ಪೋಷಕರಲ್ಲಿ ಭಯ ಹುಟ್ಟಿಸಿದೆ. ಈ ವೀಡಿಯೋದಲ್ಲಿ ಕಾಣಿಸುವಂತೆ ಇದೇ ವೇಳೆ ಇತರ ಅನೇಕ ಪೋಷಕರು ಕೂಡ ತಮ್ಮ ಮಕ್ಕಳನ್ನು ಕಳುಹಿಸಲು ಶಾಲೆಯ ಬಳಿ ಬಂದಿದ್ದರು. ಈ ವೇಳೆ ಅಲ್ಲೇ ಇದ್ದ ಮಹಿಳೆಯೊಬ್ಬರು ಜೋರಾಗಿ ಬೊಬ್ಬೆ ಹೊಡೆದು ಹಲ್ಲೆಗೊಳಗಾದ ವ್ಯಕ್ತಿಯ ನೆರವಾಗಿ ಧಾವಿಸಿದ್ದಾರೆ. ಅಷ್ಟರಲ್ಲಾಗಲೇ ಆರೋಪಿಗಳು ಆತನ ಕಾಲು ಮುರಿದಿದ್ದು, ಆತನನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ. ಮತ್ತೆ ಅಲ್ಲೇ ಇದ್ದ ಕೆಲವರು ಆತನಿಗೆ ಸಹಾಯ ಮಾಡಿದ್ದಾರೆ.
ಬಿಜೆಪಿ ಮುಖಂಡನಿಗೆ ಗುಂಡಿಕ್ಕಿ ಹತ್ಯೆ: ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ ...