ಬಿಜೆಪಿ ಮುಖಂಡನಿಗೆ ಗುಂಡಿಕ್ಕಿ ಹತ್ಯೆ: ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ
ಉತ್ತರ ಪ್ರದೇಶದ ಮೊರದಾಬಾದ್‌ನಲ್ಲಿ ಹಾಡ ಹಗಲೇ ಬಿಜೆಪಿ ಮುಖಂಡನೋರ್ವನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಬಿಜೆಪಿ ಮುಖಂಡನಿಗೆ ಗುಂಡಿಕ್ಕಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಲಕ್ನೋ: ಉತ್ತರ ಪ್ರದೇಶದ ಮೊರದಾಬಾದ್‌ನಲ್ಲಿ ಹಾಡ ಹಗಲೇ ಬಿಜೆಪಿ ಮುಖಂಡನೋರ್ವನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಬಿಜೆಪಿ ಮುಖಂಡನಿಗೆ ಗುಂಡಿಕ್ಕಿ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಘಟನೆಯ ಸಂಪೂರ್ಣ ಚಿತ್ರಣ ಅಲ್ಲೇ ಇದ್ದ ಸಿಸಿಟಿವಿಯಲ್ಲಿ ಸೆರೆ ಆಗಿದೆ. ರಾಜಕೀಯ ದ್ವೇಷದ ಕಾರಣಕ್ಕೆ ಈ ಹತ್ಯೆ ನಡೆದಿರಬಹುದು ಎಂದು ಊಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೊರದಾಬಾದ್‌ನ ಸ್ಥಳೀಯ ಬಿಜೆಪಿ ನಾಯಕ ಅನುಜ್ ಚೌಧರಿ ಹತ್ಯೆಯಾದವರು. ಮತ್ತೊಬ್ಬರೊಂದಿಗೆ ಮನೆ ಮುಂದಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ತುಂಬಾ ಹತ್ತಿರದಿಂದ ಗುಂಡಿಕ್ಕಿ ಪರಾರಿಯಾಗಿದ್ದಾರೆ. ಕೂಡಲೇ ಅನುಜ್ ಚೌಧರಿ ಕೆಳಗೆ ಬಿದ್ದಿದ್ದಾರೆ. ಅನುಜ್ ಅವರು ಸ್ಥಳೀಯ ರಾಜಕೀಯದಲ್ಲಿ ಸಕ್ರಿಯರಾಗಿದ್ದು, ಮೊರದಾಬಾದ್‌ನಲ್ಲಿರುವ ಅವರ ಮನೆ ಮುಂದೆಯೇ ನಿನ್ನೆ ಸಂಜೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಜೆಪಿ ನಾಯಕನ ಈ ಹತ್ಯೆಯ ಹಿಂದೆ ರಾಜಕೀಯ ದ್ವೇಷ ಇರಬಹುದು ಎಂದು ಘಟನೆಯ ನಂತರ ಸ್ಥಳಕ್ಕೆ ತೆರಳಿ ಪ್ರಾಥಮಿಕ ತನಿಖೆ ಆರಂಭಿಸಿದ ಪೊಲೀಸರು ಶಂಕಿಸಿದ್ದಾರೆ. ಸೆರೆಯಾಗಿರುವ ಸಿಸಿಟಿವಿ ದೃಶ್ಯದಲ್ಲಿ ಗುಂಡಿನ ದಾಳಿಯಿಂದ ಕೆಳಗೆ ಬಿದ್ದ ನಂತರವೂ ಅನುಜ್ ಮೇಲೆ ದುಷ್ಕರ್ಮಿಗಳು ಗುಂಡಿಕ್ಕುವುದನ್ನು ಕಾಣಬಹುದಾಗಿದೆ.
ಟೇಸ್ಟ್ ಚೆನ್ನಾಗಿಲ್ಲ ಅಂತ ಕಬಾಬ್ ಮಾಡಿದವನನ್ನು ಗುಂಡಿಕ್ಕಿ ಕೊಂದ!
34 ವರ್ಷದ ಅನುಜ್ ಚೌಧರಿ ಅವರು ಮೊರದಾಬಾದ್‌ನಲ್ಲಿರುವ ತಮ್ಮ ಮನೆ ಮುಂದೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಮೂವರು ಅನುಜ್‌ಗೆ ಗುಂಡಿಕ್ಕಿದ್ದಾರೆ. ಈ ವೇಳೆ ಕೆಳಗೆ ಬಿದ್ದ ಅವರನ್ನು ಜೊತೆಯಲ್ಲಿದ್ದವರು ಮೇಲೇಳಿಸಲು ಪ್ರಯತ್ನಿಸುವಾಗ ದುಷ್ಕರ್ಮಿಗಳು ಮತ್ತೆ ಗುಂಡಿಕ್ಕಿದ್ದಾರೆ. ಹೀಗಾಗಿ ಜೊತೆಯಲ್ಲಿದ್ದವರು ತಮ್ಮ ಜೀವ ಉಳಿಸಿಕೊಳ್ಳಲು ದೂರ ಓಡಿದ್ದಾರೆ. ನಂತರ ಹತ್ತಿರ ಬಂದು ಜೀವ ಹೋಗಿದೆಯೋ ಇಲ್ಲವೋ ಎಂದು ಖಚಿತಪಡಿಸಿಕೊಂಡು ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.
ನಂತರ ಅನುಜ್ ಚೌಧರಿ ಅವರನ್ನು ಮೊರದಾಬಾದ್‌ನ ಬ್ರೈಟ್‌ಸ್ಟಾರ್ ಆಸ್ಪತ್ರೆಗೆ (BrightStar Hospital) ದಾಖಲಿಸಲಾಗಿದೆ. ಅಲ್ಲಿ ಅವರು ಪ್ರಾಣ ಬಿಟ್ಟಿದ್ದಾರೆ. ಅನುಜ್ ಚೌಧರಿ (Anuj Chaudhary) ಅವರು ಸಂಭಾದ ಅಸ್ಮೊಲಿ ಬ್ಯಾಕ್‌ನಲ್ಲಿ (Asmoli block) ಬ್ಲಾಕ್ ಮುಖ್ಯಸ್ಥನ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಘಟನೆಗೆ ಸಂಬಂಧಿಸಿದಂತೆ ಮೊರದಾಬಾದ್ ಎಸ್ಪಿ ಹೇಮರಾಜ್ ಮೀನಾ (Hemraj Meena) ಮಾತನಾಡಿದ್ದು, 30 ವರ್ಷದ ಅನುಜ್ ಚೌಧರಿ ಅವರನ್ನು ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಅವರ ಕುಟುಂಬದವರು ನೀಡಿದ ದೂರಿನ ಮೇರೆಗೆ ಇಬ್ಬರು ಶಂಕಿತ ದುಷ್ಕರ್ಮಿಗಳಾದ ಅಮಿತ್ ಚೌಧರಿ ಹಾಗೂ ಅಂಕಿತ್ ಎಂಬುವವರ ಮೇಲೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಕಚೇರಿಯಲ್ಲಿ ಕುರ್ಚಿಗಾಗಿ ಕದನ: ಸಹೋದ್ಯೋಗಿಯ ಮೇಲೆ ಗುಂಡಿನ ದಾಳಿ
\