ನಾಳೆಯಿಂದ ದೇಶದಲ್ಲಿ ಹೋಳಿ ಸಂಭ್ರಮ ಈ ಊರಿನಲ್ಲಿದೆ ವಿಚಿತ್ರ ಆಚರಣೆ ಕತ್ತೆಯ ಬೆನ್ನೇರಲೇಬೇಕು ಹೊಸ ಆಳಿಯ

ಮಹಾರಾಷ್ಟ್ರ(ಮಾ.16) ನಾಳೆಯಿಂದ ದೇಶಾದ್ಯಂತ ಹೋಳಿ ಆಚರಣೆ ಜೋರಾಗಿ ನಡೆಯಲಿದೆ. ಇಡೀ ದೇಶವೇ ಬಣ್ಣದ ರಂಗಲ್ಲಿ ಮುಳುಗಲಿದೆ. ದೇಶದ ವಿವಿಧೆಡೆ ಹೋಳಿ ಆಚರಣೆಯ ರೀತಿ ಭಿನ್ನ ವಿಭಿನ್ನವಾಗಿದೆ. ಹಾಗೆಯೇ ಮಹಾರಾಷ್ಟ್ರದ ಬೀಡ್‌ ಜಿಲ್ಲೆಯ ಹಳ್ಳಿಯೊಂದರಲ್ಲಿ ಹೋಳಿ ದಿನ ವಿಶಿಷ್ಠ ಸಂಪ್ರದಾಯವಿದೆ. ಇಲ್ಲಿ ಗ್ರಾಮದ ಹೊಸ ಅಳಿಯಂದಿರು ಹೋಳಿಯಂದು ಕತ್ತೆ ಮೇಲೆ ಸವಾರಿ ಮಾಡಲೇಬೇಕು. 

'ಬಣ್ಣದ ಹಬ್ಬ' ಎಂದು ಕರೆಯಲ್ಪಡುವ ಹೋಳಿಯು ದೇಶದಲ್ಲಿ ವಸಂತ ಕೊಯ್ಲು ಋತುವಿನ ಆಗಮನ ಮತ್ತು ಚಳಿಗಾಲದ ಅಂತ್ಯವನ್ನು ಸೂಚಿಸುತ್ತದೆ ಮತ್ತು ಇದನ್ನು ಅತ್ಯಂತ ಉತ್ಸಾಹದಿಂದ ದೇಶಾದ್ಯಂತ ಆಚರಿಸಲಾಗುತ್ತದೆ. ಆದಾಗ್ಯೂ, ಭಾರತದಾದ್ಯಂತ, ಹೋಳಿ ಸಂಪ್ರದಾಯಗಳು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತವೆ ಮತ್ತು ಈ ಒಂದೇ ಹಬ್ಬದ ಆಚರಣೆಯಲ್ಲಿಯೂ ಸಹ ಆಕರ್ಷಕ ವೈವಿಧ್ಯತೆಯನ್ನು ಕಾಣಬಹುದು.

Holi 2022: ಕಾಮದಹನಕ್ಕೆ ಯಾವೆಲ್ಲ ವಸ್ತು ಹಾಕ್ತಾರೆ ಗೊತ್ತಾ? ಪೂಜೆಯ ವಿಧಿವಿಧಾನಗಳಿವು..

ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಒಂದು ಹಳ್ಳಿಯು ಸುಮಾರು ಒಂದು ಶತಮಾನದಿಂದ ನಡೆಸಿಕೊಂಡು ಬಂದಿರುವ ವಿಲಕ್ಷಣ ಸಂಪ್ರದಾಯವನ್ನು ಹೊಂದಿದೆ. ಅಲ್ಲಿನ ಸಂಪ್ರದಾಯದಂತೆ, ಹಳ್ಳಿಯಲ್ಲಿನ 'ಹೊಸ ಅಳಿಯ' ಹೋಳಿಯಂದು ಕತ್ತೆ ಸವಾರಿ ಮಾಡಲೇಬೇಕು. ಮತ್ತು ಸವಾರಿಯ ಕೊನೆಯಲ್ಲಿ ಅವನ ಆಯ್ಕೆಯ ಬಟ್ಟೆಗಳನ್ನು ಆತನಿಗೆ ಉಡುಗೊರೆಯಾಗಿ ನೀಡಲಾಗುತ್ತದೆ.

ಈ ಸಂಪ್ರದಾಯದ ಆಚರಣೆ ಹೇಗೆ ನಡೆಯುತ್ತದೆ

ಔರಂಗಾಬಾದ್‌ನಿಂದ ಸುಮಾರು 125 ಕಿ.ಮೀ. ದೂರದಲ್ಲಿರುವ ಗ್ರಾಮದಲ್ಲಿ ಈ ಸಂಪ್ರದಾಯವಿದೆ. ಕತ್ತೆ ಸವಾರಿ ಸಂಪ್ರದಾಯವು ಪ್ರತಿ ವರ್ಷವೂ ಗ್ರಾಮಸ್ಥರಿಗೆ ಮತ್ತು ನೆರೆಹೊರೆಯ ಜನರಿಗೆ ಹೋಳಿ ಹಬ್ಬದ ಬಹುನಿರೀಕ್ಷಿತ ಭಾಗವಾಗಿದೆ. ಮೂರ್ನಾಲ್ಕು ದಿನ ತೆಗೆದುಕೊಳ್ಳುವ ಪ್ರಕ್ರಿಯೆಯ ಮೂಲಕ ಹಳ್ಳಿಯ ಹೊಸ ಅಳಿಯನನ್ನು ಮೊದಲು ಶೂನ್ಯಗೊಳಿಸಲಾಗುತ್ತದೆ. ಕತ್ತೆ ಸವಾರಿಯನ್ನು ತಪ್ಪಿಸಿಕೊಳ್ಳುವ ಸಲುವಾಗಿ ಆತ ಕಾಣೆಯಾಗದಂತೆ ಗ್ರಾಮಸ್ಥರು ಆತನ ಮೇಲೆ ನಿಗಾ ಇಡುತ್ತಾರೆ.

Holi 2022: ಅದೃಷ್ಟ ಬದಲಾಗ್ಬೇಕೆಂದ್ರೆ ರಾಶಿಗನುಗುಣವಾಗಿ ಬಳಸಿ ಬಣ್ಣ

ಸವಾರಿ ಗ್ರಾಮದ ಮಧ್ಯದಿಂದ ಪ್ರಾರಂಭವಾಗುತ್ತದೆ ಮತ್ತು ಬೆಳಗ್ಗೆ 11 ಗಂಟೆಗೆ ಗ್ರಾಮದ ಹನುಮಾನ್ ದೇವಸ್ಥಾನದಲ್ಲಿ ಕೊನೆಗೊಳ್ಳುತ್ತದೆ. ಬಳಿಕ ಜನರು ಅವರ ಅಳಿಯ ಆಯ್ಕೆಯ ಬಟ್ಟೆಗಳನ್ನು ಆತನಿಗೆ ನೀಡುತ್ತಾರೆ. ಈ ಸಂಪ್ರದಾಯವನ್ನು ಇಲ್ಲಿನ ಗ್ರಾಮದ ಜನರಿಂದ ಹೆಚ್ಚು ಗೌರವಿಸಲ್ಪಡುತ್ತಿದ್ದ ಗ್ರಾಮದ ನಿವಾಸಿ ಆನಂದರಾವ್ ದೇಶಮುಖ್ ಅವರು ಪ್ರಾರಂಭಿಸಿದರಂತೆ ಆನಂದರಾವ್ ಅವರ ಅಳಿಯ ಕುದುರೆ ಸವಾರಿ ಮಾಡುವುದರಿಂದ ಈ ಸಂಪ್ರದಾಯ ಪ್ರಾರಂಭವಾಯಿತು. ಅಂದಿನಿಂದಲೂ ಇದು ಹೀಗೆ ಮುಂದುವರೆದಿದೆ ಎನ್ನುತ್ತಾರೆ ಗ್ರಾಮಸ್ಥರು. 

ರಂಗುಗಳ (Color) ಲೋಕದಲ್ಲಿ, ಬಣ್ಣಗಳ ಚಿತ್ತಾರದಲ್ಲಿ ಮೈಮರೆಯುವ ಹೋಳಿ ಬಂದಿದೆ. ಹೋಳಿ (Holi) ಎಂದರೆ, ಬಣ್ಣಗಳ ಹಬ್ಬ. ಬಣ್ಣಗಳನ್ನು ಎರಚಿಕೊಳ್ಳುತ್ತ ಸಂಭ್ರಮಿಸುವ ಸಮಯ. ಆದರೆ, ಈ ಸಮಯದಲ್ಲಿ ಬಣ್ಣಗಳ ಕುರಿತು ಎಚ್ಚರಿಕೆ ತೆಗೆದುಕೊಳ್ಳಬೇಕಾದುದು ಅಗತ್ಯ. ಅವುಗಳಿಂದ ಚರ್ಮ (Skin)ಕ್ಕೆ ಹಾನಿಯಾಗದಂತೆ ನೋಡಿಕೊಳ್ಳುವುದು ಅತ್ಯಗತ್ಯ. ಚರ್ಮದ ಹಾನಿ ತಡೆಯಲು ಮಾಯಿಶ್ಚರೈಸ್ (Moisturize) ಲೇಪಿಸಿಕೊಳ್ಳುವುದು, ಎಣ್ಣೆ (Oil) ಮಸಾಜ್ ಮಾಡಿಕೊಳ್ಳುವುದು ಇತ್ಯಾದಿ ಕ್ರಮಗಳನ್ನು ಅನುಸರಿಸಬಹುದು. 

ಚರ್ಮವಷ್ಟೇ ಅಲ್ಲ, ಕೂದಲಿಗೂ (Hair) ಬಣ್ಣಗಳಿಂದ ಸ್ವಲ್ಪ ತೊಂದರೆಯಾಗುವುದು ನಿಮ್ಮ ಗಮನಕ್ಕೆ ಬಂದಿರಬಹುದು. ಬಣ್ಣಗಳಲ್ಲಿರುವ ಕೆಮಿಕಲ್ (Chemical) ಹಾಗೂ ರಂಗಿನಲ್ಲಿರುವ ಕೆಲವು ಅಂಶಗಳು ಕೂದಲಿಗೆ ಹಾನಿಯುಂಟು ಮಾಡುತ್ತವೆ. ಕೂದಲು ಒರಟಾಗಿ ತುಂಡಾಗುತ್ತವೆ. ಅಷ್ಟೇ ಅಲ್ಲ, ತುದಿ ಎರಡಾಗಿ ಸೀಳಬಹುದು. ಹೀಗಾಗಿ, ಕೂದಲಿನ ಕುರಿತು ಮೊದಲೇ ಕೆಲವು ಎಚ್ಚರಿಕೆ ವಹಿಸುವುದು ಸೂಕ್ತ.

ಹೋಳಿಯ ರಂಗಿನಲ್ಲಿ ಮೀಯುವ ಮುನ್ನವೇ ಕೂದಲಿನ ಕುರಿತು ಕಾಳಜಿ (Care) ವಹಿಸಿದರೆ ಹೆಚ್ಚಿನ ಹಾನಿಯಾಗದಂತೆ ನೋಡಿಕೊಳ್ಳಬಹುದು. ಚರ್ಮಕ್ಕೆ ಅಥವಾ ಕೂದಲಿಗೆ ಹಾನಿಯಾಗುವುದೆಂದು ವರ್ಷದಲ್ಲಿ ಒಮ್ಮೆ ಮಾತ್ರ ಬರುವ ಹೋಳಿಯ ರಂಗಿನಲ್ಲಿ ಖುಷಿಪಡದೇ ಇರಲು ಸಾಧ್ಯವಿಲ್ಲ. ಅದಕ್ಕಾಗಿ, ಸ್ವಲ್ಪ ಮುನ್ನೆಚ್ಚರಿಕೆ ವಹಿಸಿದರೆ ಯಾವುದೇ ತೊಂದರೆಯಾಗುವುದಿಲ್ಲ.