ದಿ ಗ್ರೇಟ್ ಎಸ್ಕೇಪ್: ಅಪಘಾತದಿಂದ ಪವಾಡದಂತೆ ಪಾರಾದ ಸ್ಕೂಟರ್ ಸವಾರ

ಸ್ಕೂಟರ್ ಸವಾರನೋರ್ವ ಡಿವೈಡರ್ ಮತ್ತು ಪಿಕಪ್ ಗೂಡ್ಸ್ ಗಾಡಿಗೆ ಡಿಕ್ಕಿ ಹೊಡೆದರೂ ಪವಾಡಸದೃಶವಾಗಿ ಪಾರಾಗಿದ್ದಾನೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರು ಆತನ ಅದೃಷ್ಟಕ್ಕೆ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

The Great Escape Scooter Riders Lucky Escape from Horrific Crash

ಅಪಘಾತಗಳ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ. ಮರಣದ ಸಮೀಪ ಹೋಗಿ ಸುರಕ್ಷಿತವಾಗಿ ಬದುಕುಳಿದವರ ಆ ವೀಡಿಯೋಗಳು ಒಮ್ಮೊಮ್ಮೆ ಮೈ ಜುಮ್ಮೆನ್ನುವಂತೆ ಮಾಡುತ್ತವೆ. ಅದೇ ರೀತಿ ಇಲ್ಲೊಂದು ಅಪಘಾತದ ವೀಡಿಯೋವೊಂದು ವೈರಲ್ ಆಗಿದ್ದು, ಸ್ಕೂಟರ್ ಸವಾರನೋರ್ವ ಪವಾಡ ಸದೃಶನಾಗಿ ಪಾರಾಗಿದ್ದಾನೆ. ಸೋಶಿಯಲ್ ಮೀಡಿಯಾ ಟ್ವಿಟ್ಟರ್‌ನಲ್ಲಿ ಈ ವೀಡಿಯೋ ಪೋಸ್ಟ್ ಆಗಿದೆ. ವೀಡಿಯೋದಲ್ಲಿ ಕಾಣಿಸುವಂತೆ ಸ್ಕೂಟರ್‌ ಸವಾರನೋರ್ವ ವೇಗವಾಗಿ ಬಂದು ಸ್ಕೂಟರ್‌ ಮೇಲಿನ  ನಿಯಂತ್ರಣ ಕಳೆದುಕೊಂಡಿದ್ದಾನೆ. ವೇಗವಾಗಿ ಬಂದ ಆತ ಮೊದಲಿಗೆ ರಸ್ತೆ ನಡುವಣ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಕ್ಕದ ಏಕಮುಖ ರಸ್ತೆಯನ್ನು ತಲಪಿದ್ದು, ಅಲ್ಲಿ ಮುಂದಿನಿಂದ ಬರುತ್ತಿದ್ದ ಪಿಕಪ್ ಗೂಡ್ಸ್‌ ಗಾಡಿಗೆ ಡಿಕ್ಕಿ ಹೊಡೆದಿದ್ದೇನೆ. ಕೂಡಲೇ ಪಿಕಪ್ ಗೂಡ್ಸ್ ಗಾಡಿಯ ಸವಾರ ಬ್ರೇಕ್ ಹಾಕಿದ್ದು, ಈತ ಹೋಗಿ ಗೂಡ್ಸ್‌ ಗಾಡಿಯ ಬೊನೆಟ್ ಮೇಲೆ ಬಿದ್ದಿದ್ದಾನೆ. ಆದರೆ ಯಾವುದೇ ಪ್ರಾಣಹಾನಿಯಾಗದೇ ಆತ ಅದೃಷ್ಟವಶಾತ್ ಪಾರಾಗಿದ್ದಾನೆ. ಆದರೆ ಪಿಕಪ್ ಗಾಡಿಯ ಮುಂಭಾಗ ಸ್ವಲ್ಪ ಹಾನಿಯಾಗಿದ್ದರೆ, ಇತ್ತ ಈತ ಚಲಾಯಿಸುತ್ತಿದ್ದ ಸ್ಕೂಟರ್‌ ನಜ್ಜುಗುಜ್ಜಾಗಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆತನ ಜೀವ ಉಳಿದಿರುವುದೇ ದೊಡ್ಡ ಅದೃಷ್ಟ್ ಎಂದು ಜನ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

ಸ್ಕೂಟರ್‌ನಿಂದ ಹಾರಿ ಗೂಡ್ಸ್‌ ಗಾಡಿಯ ಬೊನೆಟ್ ಮೇಲೆ ಬಿದ್ದ ಆತ ತಕ್ಷಣವೇ ಏನು ಆಗದವರಂತೆ ಅದರಿಂದ ಇಳಿದು ಬಂದಿದ್ದಾನೆ. ವೀಡಿಯೋ ನೋಡಿದ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. @effucktivehumor ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, 10 ಸೆಕೆಂಡ್‌ಗಳ ವೀಡಿಯೋವನ್ನು 3 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಕೆಲವರು ಈ ಸ್ಕೂಟರ್‌ ಸವಾರನನ್ನು ಬಾಲಿವುಡ್‌  ಸಿನಿಮಾಗಳ ಸ್ಟಂಟ್ ಮಾಡುವ ಹೀರೋಗಳಿಗೆ ಹೋಲಿಕೆ ಮಾಡಿದ್ದಾರೆ. ಮತ್ತೆ ಕೆಲವರು ಆತ ಸುರಕ್ಷಿತವಾಗಿ ಲ್ಯಾಂಡ್ ಅಗಿದ್ದಾನೆ. ಇದೊಂದು ಪವಾಡವೇ ಸರಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.  ಆದರೆ ಈ ಘಟನೆ ಎಲ್ಲಿ ಯಾವಾಗ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ.

 

ಇದನ್ನೂ ಓದಿ:ಕಾರಿನ ಸನ್‌ರೂಫ್‌ ಮೇಲೆ ಸ್ಕೈ ಶಾಟ್ಸ್‌ ಸಿಡಿಸಿದ ಯುವಕರು : ಮದ್ವೆ ದಿಬ್ಬಣದ ಕಾರು ಬೆಂಕಿಗಾಹುತಿ

ಇದನ್ನೂ ಓದಿ : ಸ್ಕೂಟರ್‌ಗೆ ಡಿಕ್ಕಿ ಹೊಡೆದು ಕಿ.ಮೀ.ಗಟ್ಟಲೇ ಎಳೆದೊಯ್ದ ಕಾರು ಚಾಲಕ: ವೀಡಿಯೋ

Latest Videos
Follow Us:
Download App:
  • android
  • ios