ಸ್ಕೂಟರ್‌ಗೆ ಡಿಕ್ಕಿ ಹೊಡೆದು ಕಿ.ಮೀ.ಗಟ್ಟಲೇ ಎಳೆದೊಯ್ದ ಕಾರು ಚಾಲಕ: ವೀಡಿಯೋ

ಲಕ್ನೋದಲ್ಲಿ ಸ್ಕೂಟರ್ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ. ಕಾರು ಚಾಲಕ ಸ್ಕೂಟರ್‌ನ್ನು ಕಿಲೋಮೀಟರ್‌ಗಳಷ್ಟು ದೂರ ತಳ್ಳಿಕೊಂಡು ಹೋಗಿದ್ದು, ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Hyundai i20 Car driver hits scooter drags it for a kilometers Video viral

ಅಪಘಾತದ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್ ಆಗ್ತಿರ್ತವೆ. ಅದೇ ರೀತಿ ಇಲ್ಲೊಂದು ಅಪಘಾತದ ಭಯಾನಕ ವೀಡಿಯೋವೊಂದು ವೈರಲ್ ಆಗಿದೆ. ಅಪಘಾತವಾದ ಕೂಡಲೇ ವಾಹನವನ್ನು ನಿಲ್ಲಿಸಬೇಕು. ಆದರೆ ಕೆಲವರು ತಪ್ಪು ಮಾಡಿದ ಮೇಲು ಅದರಿಂದ ಎಸ್ಕೇಪ್ ಆಗೋದಕ್ಕೆ ಮತ್ತಷ್ಟು ತಪ್ಪು ಮಾಡಿ ತಾವು ಮಾತ್ರವಲ್ಲದೇ ಇತರರನ್ನು ಸಂಕಷ್ಟಕ್ಕೀಡು ಮಾಡುತ್ತಾರೆ.  ಬೇಜವಾಬ್ದಾರಿಯುತ ಚಾಲನೆ ಮಾಡಿ ಬೇರೆ ವಾಹನಗಳಿಗೆ ಡಿಕ್ಕಿ ಹೊಡೆಯುವುದೇ ತಪ್ಪು, ಅದಕ್ಕಿಂತ ಹೆಚ್ಚು ದೊಡ್ಡ ತಪ್ಪು ಅಪಘಾತದ ನಂತರ ವಾಹನ ನಿಲ್ಲಿಸದೇ ಎಸ್ಕೇಪ್ ಆಗುವುದು, ಇಂತಹವರಿಂದಾಗಿ ಯಾರೋ ಅಮಾಯಕರು ಜೀವ ಕಳೆದುಕೊಳ್ಳುತ್ತಿದ್ದಾರೆ.  ಅದೇ ರೀತಿ ಇಲ್ಲೊಂದು ಕಡೆ ಕಾರು ಹಾಗೂ ಸ್ಕೂಟರ್ ಮಧ್ಯೆ ಡಿಕ್ಕಿಯಾಗಿದ್ದು, ಅಪಘಾತದ ಬಳಿಕ ಕಾರು ಚಾಲಕ ವಾಹನ ನಿಲ್ಲಿಸದೇ ಕಾರಿನ ಮುಂದೆ ಸಿಲುಕಿದ್ದ ಸ್ಕೂಟರನ್ನು ಕಿಲೋ ಮೀಟರ್‌ ಗಟ್ಟಲೇ ತಳ್ಳಿಕೊಂಡು ಹೋಗಿದ್ದಾನೆ. ಈ ಆಘಾತಕಾರಿ ದೃಶ್ಯದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾರು ಚಾಲಕನ ಬೇಜವಾಬ್ದಾರಿತನಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಉತ್ತರ ಪ್ರದೇಶದ ಲಕ್ನೋದಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಇಬ್ಬರು ಯುವಕರ ಕೈಕಾಲುಗಳಿಗೆ ಗಂಭೀರವಾಗಿ ಗಾಯಗಳಾಗಿವೆ.  ವೇಗವಾಗಿ ಬಂದ ಕಾರೊಂದು ಮುಂದೆ ಸಾಗುತ್ತಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದು, ಬಳಿಕ ಕಿಲೋ ಮೀಟರ್ ವರೆಗೆ ಸ್ಕೂಟರ್‌ನ್ನು ಎಳೆದುಕೊಂಡು ಹೋಗಿದೆ.  ಲಕ್ನೊದ ಕಿಸಾನ್ ಪಥದಲ್ಲಿ ಈ ಘಟನೆ ನಡೆದಿದ್ದು, ಅಲ್ಲೇ ಇದ್ದ ಕೆಲವರು ಬೇರೆ ವಾಹನದಲ್ಲಿ ಕಾರನ್ನು ಚೇಸ್ ಮಾಡಿದ್ದಲ್ಲದೇ ಘಟನೆಯನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ವೈರಲ್ ಆಗಿರುವ ವೀಡಿಯೋದಲ್ಲಿ ಕಾಣಿಸುವಂತೆ ಬೈಕ್‌ನಲ್ಲಿ ಕಾರನ್ನು ಬೆನ್ನಟ್ಟುತ್ತಿರುವವರು ಕಾರು ಚಾಲಕನಿಗೆ ಕಾರು ನಿಲ್ಲಿಸುವಂತೆ ಹಲವು ಬಾರಿ ಕೈ ಸನ್ನೆ ಮಾಡಿದರು ಕಿಲೋ ಮೀಟರ್ ದೂರ ಸಾಗುವವರೆಗೂ ಕಾರು ಚಾಲಕ ಕಾರು ನಿಲ್ಲಿಸಿಲ್ಲ, ಕಾರಿನ ಮುಂಭಾಗದಲ್ಲಿ ಸ್ಕೂಟರ್ ಸಿಲುಕಿಕೊಂಡ ಕಾರಣ ರಸ್ತೆಯ ಮೇಲೆ ಘರ್ಷಣೆಯುಂಟಾಗುತ್ತಿದ್ದು, ಬೆಂಕಿ ಕಿಡಿ ಹಾರುತ್ತಿರುವುದು ಕೂಡ ವೀಡಿಯೋದಲ್ಲಿ ಕಾಣಿಸುತ್ತಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾರು ಚಾಲಕನ ವಿರುದ್ಧ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಘಟನೆ ಬಗ್ಗೆ ನಂತರ ಪ್ರಕರಣ ದಾಖಲಾಗಿದ್ದು, ಹೀಗೆ ಅಪಘಾತದ ನಂತರವೂ ವಾಹನ ನಿಲ್ಲಿಸದೇ ಮುಂದೆ ಸಾಗಿದ ಕಾರು ಚಾಲಕ ಬಿಸಿ ರಕ್ತದ ಯುವಕನಲ್ಲ ಅನ್ನೋದೇ ವಿಶೇಷ, ಹೀಗೆ ನಿಲ್ಲಿಸದೇ ವಾಹನ ಚಾಲನೆ ಮಾಡಿದ ವ್ಯಕ್ತಿಯನ್ನು 70 ವರ್ಷದ ಚಂದ್ರಪ್ರಕಾಶ್ ತಿವಾರಿ ಎಂದು ಗುರುತಿಸಲಾಗಿದ್ದು, ಇವರು ಪ್ರಯಾಗ್‌ರಾಜ್‌ನವರಾಗಿದ್ದು, ಚಿನ್ಹಾತ್‌ನತ್ತ ಪ್ರಯಾಣಿಸುತ್ತಿದ್ದ ವೇಳೆ ಇವರ ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ.  ವೈರಲ್ ಆಗಿರುವ ವೀಡಿಯೋದಲ್ಲಿ ಕೆಂಪು ಬಣ್ಣದ ಹುಂಡೈ i20 ಕಾರು ಸ್ಕೂಟರನ್ನು ಎಳೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು, ಸ್ಕೂಟರ್‌ ಕಾರಿನ ಬೊನೆಟ್ ಕೆಳಗೆ ಸ್ಟಕ್ ಆಗಿದ್ದು, ಕಾರು ಹೋಗುವ ರಭಸಕ್ಕೆ ಬೆಂಕಿ ಕಿಡಿ ಹಾರುತ್ತಿರುವುದು ಕಾಣುತ್ತಿದೆ. ಈ ವೀಡಿಯೋಗೆ ಲಕ್ನೋ ಪೊಲೀಸರು ಪ್ರತಿಕ್ರಿಯಿಸಿದ್ದು,  ಚಾಲಕನನ್ನು ಬಂಧಿಸಲಾಗಿದೆ. ಅಪಘಾತಕ್ಕೆ ಕಾರಣವಾದ ಎರಡು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಹಾಗೆಯೇ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಯುವಕರನ್ನು ಅಮಿರ್ ಹಾಗೂ ರೆಹಾನ್ ಎಂದು ಗುರುತಿಸಲಾಗಿದ್ದು, ಅವರು ಆಯಿಷಾಬಾಗ್‌ನಿಂದ  ಮೋಹನ್‌ಲಾಲ್ ಗಂಜ್‌ನತ್ತ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. 

 

Latest Videos
Follow Us:
Download App:
  • android
  • ios