ಸ್ಕೂಟ್ಸ್‌ ಏರ್‌ಲೈನ್ಸ್‌ಗೆ ಸೇರಿದ ವಿಮಾನವೊಂದು30 ಪ್ರಯಾಣಿಕರನ್ನು ಅಮೃತಸರ ವಿಮಾನ ನಿಲ್ದಾಣದಲ್ಲೇ ಬಿಟ್ಟು, 5 ಗಂಟೆ ಮುಂಚಿತವಾಗಿಯೇ ಸಿಂಗಾಪುರಕ್ಕೆ ತೆರಳಿದ ಘಟನೆ ಬುಧವಾರ ನಡೆದಿದೆ.

ನವದೆಹಲಿ: ಸ್ಕೂಟ್ಸ್‌ ಏರ್‌ಲೈನ್ಸ್‌ಗೆ ಸೇರಿದ ವಿಮಾನವೊಂದು30 ಪ್ರಯಾಣಿಕರನ್ನು ಅಮೃತಸರ ವಿಮಾನ ನಿಲ್ದಾಣದಲ್ಲೇ ಬಿಟ್ಟು, 5 ಗಂಟೆ ಮುಂಚಿತವಾಗಿಯೇ ಸಿಂಗಾಪುರಕ್ಕೆ ತೆರಳಿದ ಘಟನೆ ಬುಧವಾರ ನಡೆದಿದೆ. ಈ ಕುರಿತು ವರದಿಗೆ ವಿಮಾನಯಾನ ಸಂಸ್ಥೆಗೆ ಡಿಜಿಸಿಎ ನೋಟಿಸ್‌ ಜಾರಿ ಮಾಡಿದೆ. ಈ ನಡುವೆ ಘಟನೆ ಕುರಿತು ಸ್ಪಷ್ಟನೆ ನೀಡಿರುವ ಕಂಪನಿ, ವಿಮಾನ ರಾತ್ರಿ 7.55ಕ್ಕೆ ಹೊರಡಬೇಕಿತ್ತು. ಆದರೆ ಅಷ್ಟು ಹೊತ್ತಿಗೆ ಪ್ರತಿಕೂಲ ಹವಾಮಾನದ ವರದಿ ಇದ್ದ ಹಿನ್ನೆಲೆಯಲ್ಲಿ ಮಧ್ಯಾಹ್ನ 3.45ಕ್ಕೆ ವಿಮಾನ ಸಂಚಾರ ಕೈಗೊಂಡಿತು. ಪ್ರಯಾಣಿಕರಿಗೆ, ಏಜೆಂಟರಿಗೆ ಈ ಕುರಿತು ಮೊದಲೇ ಮಾಹಿತಿ ನೀಡಲಾಗಿತ್ತು. ಆದರೆ ಕೆಲ ಏಜೆಂಟ್‌ಗಳು ಮಾಹಿತಿ ಹಂಚಿಕೊಳ್ಳದ ಕಾರಣ ಘಟನೆ ಸಂಭವಿಸಿದೆ ಎಂದು ಹೇಳಿದೆ. ವಾರದ ಹಿಂದೆ ಗೋಫಸ್ಟ್‌ ವಿಮಾನ ಕೂಡಾ ಬೆಂಗಳೂರಿನಲ್ಲಿ 55 ಪ್ರಯಾಣಿಕರನ್ನು ಬಿಟ್ಟು ದೆಹಲಿಗೆ ತೆರಳಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

1,508 ರೂ.ಗೆ ವಿಮಾನದಲ್ಲಿ ಪ್ರಯಾಣಿಸಿ: ಗೋ ಫಸ್ಟ್‌ನಿಂದ ಇಂಡಿಪೆಂಡೆನ್ಸ್ ಡೇ ಸೇಲ್‌

ಬೆಂಗಳೂರು ವಿಮಾನ ನಿಲ್ದಾಣದಲ್ಲಿ Happy Journey ಹೇಳೋ ಸ್ವೀಪರ್, ನೀವು ಥ್ಯಾಂಕ್ಸ್ ಹೇಳ್ತೀರಾ?