ಪ್ರತಿ ವಿವಿಪ್ಯಾಟ್ ಸ್ಲಿಪ್ ಎಣಿಕೆಗೆ ಚುನಾವಣಾ ಆಯೋಗ ವಿರೋಧ: ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್
ಎಲೆಕ್ಟ್ರಾನಿಕ್ ಮತಯಂತ್ರಗಳು (ಇವಿಎಂಗಳು) ಮತ್ತು ಮತ ದೃಢೀಕರಣ ವ್ಯವಸ್ಥೆ (ವಿವಿಪ್ಯಾಟ್) ವ್ಯವಸ್ಥೆಯ ಬಳಕೆಯನ್ನು ಸುಪ್ರೀಂಕೋರ್ಟಲ್ಲಿ ಸಮರ್ಥಿಸಿಕೊಂಡಿರುವ ಚುನಾವಣಾ ಆಯೋಗ, ಪ್ರತಿ ಮತದ ವಿವಿಪ್ಯಾಟ್ ದೃಢೀಕರಣ ವಿರೋಧಿಸಿದೆ.
ನವದೆಹಲಿ: ಎಲೆಕ್ಟ್ರಾನಿಕ್ ಮತಯಂತ್ರಗಳು (ಇವಿಎಂಗಳು) ಮತ್ತು ಮತ ದೃಢೀಕರಣ ವ್ಯವಸ್ಥೆ (ವಿವಿಪ್ಯಾಟ್) ವ್ಯವಸ್ಥೆಯ ಬಳಕೆಯನ್ನು ಸುಪ್ರೀಂಕೋರ್ಟಲ್ಲಿ ಸಮರ್ಥಿಸಿಕೊಂಡಿರುವ ಚುನಾವಣಾ ಆಯೋಗ, ಪ್ರತಿ ಮತದ ವಿವಿಪ್ಯಾಟ್ ದೃಢೀಕರಣ ವಿರೋಧಿಸಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಮತಗಳನ್ನು ಕೈಯಾರೆ ಎಣಿಕೆ ಮಾಡಿದರೆ ಹಿಂದಿನ ಬ್ಯಾಲೆಟ್ ವ್ಯವಸ್ಥೆಗೆ ಹೋದಂತಾಗುತ್ತದೆ. ಈ ವೇಳೆ ಮಾನವ ದೋಷ ಆಗಬಹುದು ಮತ್ತು ಸಂಭಾವ್ಯ ಕಿಡಿಗೇಡಿತನಕ್ಕೆ ಗುರಿಯಾಗಬಹುದು ಎಂದು ವಾದಿಸಿದೆ.
ಪ್ರತಿ ಮತವನ್ನೂ ವಿವಿಪ್ಯಾಟ್ (VVPAT) ಮೂಲಕ ತಾಳೆ ಮಾಡಿ ಎಣಿಕೆ ಮಾಡಬೇಕು ಎಂದು ಎಡಿಆರ್ ಸ್ವಯಂಸೇವಾ ಸಂಸ್ಥೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಅದಕ್ಕೆ ಸಂಬಂಧಿಸಿದಂತೆ ಕೋರ್ಟಲ್ಲಿ ಪ್ರಮಾಣಪತ್ರ ಸಲ್ಲಿಸಿದೆ. 100% ವಿವಿಪ್ಯಾಟ್ ಸ್ಲಿಪ್‌ಗಳ ಎಣಿಕೆಯು ಇವಿಎಂ (EVM) ಬಳಕೆಗೆ ವಿರುದ್ಧವಾಗಿರುತ್ತದೆ ಅಂದರೆ ಪೇಪರ್ ಬ್ಯಾಲೆಟ್ ವ್ಯವಸ್ಥೆಗೆ ಹಿಂತಿರುಗಿಸುತ್ತದೆ. ಇವಿಎಂ ಪರಿಚಯಿಸಿದಾಗಿನಿಂದ, 118 ಕೋಟಿಗೂ ಹೆಚ್ಚು ಮತದಾರರು ಪೂರ್ಣ ತೃಪ್ತಿಯಿಂದ ಮತ ಚಲಾಯಿಸಿದ್ದಾರೆ ಮತ್ತು ನಿಯಮ 49ಎಂಎ ಅಡಿಯಲ್ಲಿ ಕೇವಲ 25 ದೂರುಗಳು ಬಂದಿದ್ದು, ತಮ್ಮ ಮತಗಳನ್ನು ವಿವಿಪ್ಯಾಟ್ ದಾಖಲಿಸಿಲ್ಲ ಎಂದು ಹೇಳಿವೆ. ಆದರೆ ಆ ದೂರುಗಳೆಲ್ಲ ಸುಳ್ಳು ಎಂದು ಸಾಬೀತಾಗಿವೆ ಎಂದು ಆಯೋಗ ಹೇಳಿದೆ.
ವಿಧಾನಪರಿಷತ್ 7 ಸ್ಥಾನಗಳ ಎಲೆಕ್ಷನ್‌ಗೆ ಚುನಾವಣಾ ಆಯೋಗದ ಸಿದ್ಧತೆ
ಆದ್ದರಿಂದ, ವಿವಿಪ್ಯಾಟ್ ಸ್ಲಿಪ್‌ಗಳ 100% ಪರಿಶೀಲನೆ ಮಾಡಲು ಹೋದರೆ ಮತ್ತ ಹಸ್ತಚಾಲಿತ ಮತದಾನದ ದಿನಗಳನ್ನು ಹಿಂದಿರುಗುವಂತೆ ಮಾಡುತ್ತದೆ. ಮೇಲಾಗಿ ಮತದಾರನಿಗೆ ವಿವಿಪ್ಯಾಟ್ ಮೂಲಕ ತಮ್ಮ ಮತವನ್ನು ಚಲಾಯಿಸಲಾಗಿದೆ ಎಂದು ಪರಿಶೀಲಿಸುವ ಯಾವುದೇ ಮೂಲಭೂತ ಹಕ್ಕು ಇಲ್ಲ ಎಂದು ಅದು ವಾದಿಸಿದೆ. ನವೆಂಬರ್‌ನಲ್ಲಿ ಸುಪ್ರೀಂಕೋರ್ಟ್ (Supreme court) ಈ ಬಗ್ಗೆ ಮುಂದಿನ ವಿಚಾರಣೆ ನಡೆಸಲಿದೆ.
ಸುಪ್ರೀಂ ಸಿಜೆಐ ಇಲ್ಲದೆಯೇ ಚುನಾವಣೆ ಆಯುಕ್ತರ ನೇಮಕಕ್ಕೆ ಮಸೂದೆ