ಬಿಬಿಸಿ ಕಚೇರಿ ಮೇಲಿನ ಆದಾಯ ತೆರಿಗೆ ಇಲಾಖೆ ದಾಳಿ ಬಗ್ಗೆ 'ದ ಎಡಿಟ​ರ್ಸ್  ಗಿಲ್ಡ್‌ ಆಫ್‌ ಇಂಡಿಯಾ' (ಭಾರತೀಯ ಸಂಪಾದಕರ ಸಂಘ) ತೀವ್ರ ಕಳವಳ ವ್ಯಕ್ತಪಡಿಸಿದೆ.

ನವದೆಹಲಿ: ಬಿಬಿಸಿ ಕಚೇರಿ ಮೇಲಿನ ಆದಾಯ ತೆರಿಗೆ ಇಲಾಖೆ ದಾಳಿ ಬಗ್ಗೆ 'ದ ಎಡಿಟ​ರ್ಸ್ ಗಿಲ್ಡ್‌ ಆಫ್‌ ಇಂಡಿಯಾ' (ಭಾರತೀಯ ಸಂಪಾದಕರ ಸಂಘ) ತೀವ್ರ ಕಳವಳ ವ್ಯಕ್ತಪಡಿಸಿದೆ.ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಸಂಘ ಆದಾಯ ತೆರಿಗೆ ಇಲಾಖೆಯ ಪರಿಶೀಲನೆಯು, ಸರ್ಕಾರದ ನೀತಿ ನಿರೂಪಣೆ ಅಥವಾ ಆಡಳಿತಾರೂಢ ವ್ಯವಸ್ಥೆಯಲ್ಲಿ ಅತ್ಯಂತ ಮಹತ್ವದ ಭಾಗವಾದ ಪತ್ರಿಕಾ ಸಂಘಟನೆಗಳನ್ನು ಸರ್ಕಾರದ ಸಂಸ್ಥೆಗಳ ಮೂಲಕ ಬೆದರಿಸುವ ಮತ್ತು ಕಿರುಕುಳ ನೀಡುವ ಧೋರಣೆಯ ಮುಂದುವರೆದ ಭಾಗವಾಗಿದೆ. 2002ರ ಗುಜರಾತ್‌ ಹಿಂಸಾಚಾರ ಮತ್ತು ದೇಶದಲ್ಲಿ ಅಲ್ಪಸಂಖ್ಯಾತರ ಪ್ರಸಕ್ತ ಸ್ಥಿತಿಗತಿಗಳ ನಡುವೆಯೇ ಆದಾಯ ತೆರಿಗೆ ಇಲಾಖೆ ಈ ಪರಿಶೀಲನೆ ನಡೆಸಿದೆ’ ಎಂದಿದೆ.

‘2021ರಲ್ಲೂ ಇದೇ ರೀತಿ ನ್ಯೂಸ್‌ಕ್ಲಿಕ್‌, ನ್ಯೂಸ್‌ಲಾಂಡ್ರಿ, ದೈನಿಕ್‌ ಭಾಸ್ಕರ್‌ ಮತ್ತು ಭಾರತ್‌ ಸಮಾಚಾರ್‌ ಸಂಸ್ಥೆಗಳ ಕಚೇರಿಯಲ್ಲೂ ಆದಾಯ ತೆರಿಗೆ ಇಲಾಖೆ (Income Tax Department) ಪರಿಶೀಲನೆ ನಡೆಸಿತ್ತು. ಇದು ಸಾಂವಿಧಾನಿಕ ಪ್ರಜಾಪ್ರಭುತ್ವವನ್ನು ಕಡೆಗಣಿಸುವ ಧೋರಣೆಯಾಗಿದೆ. ಹೀಗಾಗಿ ಇಂಥ ತನಿಖೆಯನ್ನು ನಿರ್ದಿಷ್ಟನಿಯಮಗಳು ಮತ್ತು ಮಾಧ್ಯಮಗಳ ಸ್ವಾತಂತ್ರಕ್ಕೆ ಭಂಗ ತರದ ರೀತಿಯಲ್ಲಿ ನಡೆಸಬೇಕು ಎಂಬ ನಮ್ಮ ಹಿಂದಿನ ಒತ್ತಾಯವನ್ನು ಮತ್ತೊಮ್ಮೆ ಸರ್ಕಾರದ ಮುಂದಿಡುತ್ತೇವೆ. ಇಂಥ ತನಿಖೆಯ ವೇಳೆ ಅತ್ಯಂತ ಜಾಗರೂಕತೆ ಮತ್ತು ಸೂಕ್ಷ್ಮತೆಯನ್ನು ತೋರಬೇಕು. ಯಾವುದೇ ಹಂತದಲ್ಲೂ ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳ(media organizations) ಹಕ್ಕುಗಳನ್ನು ಕಡೆಗಣಿಸಬಾರದು ಎಂದು ಗಿಲ್ಡ್‌ ಸರ್ಕಾರವನ್ನು ಒತ್ತಾಯಿಸಿದೆ.

ಮೋದಿ ಸಾಕ್ಷ್ಯಚಿತ್ರ ವಿವಾದ ಬೆನ್ನಲ್ಲೇ ಬಿಬಿಸಿಯ ದೆಹಲಿ, ಮುಂಬೈ ಕಚೇರಿಗೆ ಐಟಿ ಶಾಕ್..!

ಬಿಜೆಪಿ ಸೇರ್ತಿಲ್ಲ, ಆದರೆ ದೇಶ ದುರ್ಬಲ ಮಾಡುವ ಶಕ್ತಿಗಳ ವಿರುದ್ಧವಿದ್ದೇನೆ: ಅನಿಲ್‌ ಆಂಟನಿ!