ರಾಹುಲ್ ಗಾಂಧಿ ಅವರ ಕಾರ್ಯಕ್ರಮದ ಕುರಿತು ಸಂಸದ ಶಶಿ ತರೂರ್‌ ನೀಡಿದ ಹೇಳಿಕೆಯು ಕಾಂಗ್ರೆಸ್ ಪಕ್ಷದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಬಿಜೆಪಿಗೆ ಸಂತೋಷ ತರುವಂತಹ ಯಾವುದೇ ಹೇಳಿಕೆ ನೀಡಬಾರದು ಎಂದು ಪಕ್ಷದ ನಾಯಕರಿಗೆ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.

ಕೇರಳ (ಆ.10): ರಾಹುಲ್ ಗಾಂಧಿ ಅವರ ಛಾತ್ರೋಂ ಕಿ ಗೂಂಜ್ ಕಾರ್ಯಕ್ರಮವು ಜಂತರ್ ಮಂತರ್‌ನಲ್ಲಿ ನಡೆದ ಸಿಜೆಪಿ ಪ್ರತಿಭಟನೆಗಿಂತ ಮಂಕಾಗಿತ್ತು ಎಂದ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಹೇಳಿಕೆಗೆ ಪಕ್ಷದಲ್ಲಿ ಭಾರಿ ಅಸಮಾಧಾನ ವ್ಯಕ್ತವಾಗಿದೆ.

ಬಿಜೆಪಿಗೆ ಸಂತೋಷ ತರುವಂತಹ ಯಾವುದೇ ಹೇಳಿಕೆ ನೀಡಬಾರದು

ಪಕ್ಷದ ನಾಯಕರು ಬಿಜೆಪಿಗೆ ಸಂತೋಷ ತರುವಂತಹ ಯಾವುದೇ ಹೇಳಿಕೆ ನೀಡಬಾರದು ಎಂದು ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಭಾನುವಾರ ತಾಕೀತು ಮಾಡಿದ್ದಾರೆ.

ಇದನ್ನೂ ಓದಿ:Rahul gandhi Next PM: 2029ಕ್ಕೆ ರಾಹುಲ್ ಗಾಂಧಿ ಪ್ರಧಾನಿ ಮಾಡಲು ಪಣ, ಕಾರ್ಯಕರ್ತರಿಗೆ ನೂತನ ಸಚಿವ ಪಿಎಂ ನರೇಂದ್ರಸ್ವಾಮಿ ಕರೆ!

ತರೂರ್ ಹೇಳಿಕೆಯಿಂದ ಬಿಜೆಪಿಯವರಿಗೆ ಖುಷಿ

ತರೂರ್ ಹೇಳಿಕೆ ಕುರಿತಾಗಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ವೇಣುಗೋಪಾಲ್‌, ‘ನಮ್ಮ ಪಕ್ಷದ ಸದಸ್ಯರು ಯಾವಾಗಲೂ ಪಕ್ಷದ ಶಿಸ್ತು ಅಥವಾ ಚೌಕಟ್ಟಿಗೆ ಸಂಪೂರ್ಣವಾಗಿ ಬದ್ಧರಾಗಿರದಿದ್ದರೂ, ಬಿಜೆಪಿಯನ್ನು ಪ್ರಸನ್ನಗೊಳಿಸುವಂತಹ ಹೇಳಿಕೆಗಳನ್ನು ನೀಡದಂತೆ ಎಚ್ಚರಿಕೆ ವಹಿಸಬೇಕು. ರಾಹುಲ್ ಗಾಂಧಿ ಅವರಲ್ಲಿ ದೋಷ ಹುಡುಕಿದರೆ ಅಥವಾ ಅವರ ವಿರುದ್ಧ ನಕಾರಾತ್ಮಕ ಮಾತುಗಳನ್ನಾಡಿದರೆ ಬಿಜೆಪಿಯವರಿಗೆ ಅತ್ಯಂತ ಸಂತೋಷವಾಗುತ್ತದೆ. ಆದ್ದರಿಂದ ತಿಳಿದೋ ಅಥವಾ ತಿಳಿಯದೆಯೋ ಇಂತಹ ಹೇಳಿಕೆ ನೀಡಬಾರದು’ ಎಂದರು