ಪುಲ್ವಾಮಾದಲ್ಲಿ ಭಾರತೀಯ ಸೇನಾ ಕಾರ್ಯಾಚರಣೆಯಲ್ಲಿ ಮೂವರ ಉಗ್ರರು ಹತರಾಗಿದ್ದಾರೆ. ಸೇನಾ ದಾಳಿಗೂ ಕಲೆವೇ ಕ್ಷಣ ಮುನ್ನ ಉಗ್ರರು ಕುಟುಂಬದ ಜೊತೆ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದಾರೆ. ಈ ವಿಡಿಯೋ ಲಭ್ಯವಾಗಿದೆ.
ನವದೆಹಲಿ(ಮೇ.15) ಭಾರತೀಯ ಸೇನೆಯ ಇದೀಗ ಉಗ್ರರನ್ನು ಹುಡುಕಿ ಹುಡುಕಿ ಹತ್ಯೆ ಮಾಡುತ್ತಿದೆ. ಪೆಹಲ್ಗಾಂ ಉಗ್ರ ದಾಳಿಗೆ ಪ್ರತಿಯಾಗಿ ಭಾರತ ಆಪರೇಶನ್ ಸಿಂದೂರ್ ಕಾರ್ಯಾಚರಣೆ ಮೂಲಕ ತಿರುಗೇಟು ನೀಡಿದೆ. ಕದನ ವಿರಾಮ ಘೋಷಣೆಯಾದರೂ ಭಾರತ ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರಿಸಿದೆ. ಇದೀಗ ಪುಲ್ವಾಮಾದಲ್ಲಿ ಭಾರತೀಯ ಸೇನೆ ಉಗ್ರರ ಎನ್‌ಕೌಂಟರ್ ಮಾಡಿದೆ. ಪುಲ್ವಾಮಾ ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರು ಹತರಾಗಿದ್ದಾರೆ. ಭಾರತೀಯ ಸೇನೆ ದಾಳಿಗೂ ಕೆಲವೇ ಕ್ಷಣ ಮುನ್ನ ಉಗ್ರ ತನ್ನ ಕುಟುಂಬದ ಜೊತೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ. ಈ ವಿಡಿಯೋ ಲಭ್ಯವಾಗಿದೆ.
ತಾಯಿ ಮನವಿ ಧಿಕ್ಕರಿಸಿದ ಉಗ್ರ
ಶೋಫಿಯಾನ್ ಎನ್‌ಕೌಂಟರ್ ಬೆನ್ನಲ್ಲೇ ಇದೀಗ ಪುಲ್ವಾಮಾದಲ್ಲಿ ಭಾರತೀಯ ಸೇನೆ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿದೆ. ಉಗ್ರ ಸಂಘಟನೆಯ ಸದಸ್ಯರು ಭಾರತೀಯ ಸೇನಾ ದಾಳಿಯಿಂದ ತಪ್ಪಿಸಿಕೊಳ್ಳಲು ಶೆಡ್‌ನಲ್ಲಿ ಅಡಗಿಕುಳಿತಿದ್ದರು. ಆದರೆ ಭಾರತೀಯ ಸೇನೆ ಹುಡುಕಿ ಹತ್ಯೆ ಮಾಡಿದೆ. ಹತನಾದ ಉಗ್ರ ಅಮೀರ್ ನಾಜಿರ್ ವಾನಿ ಕೊನೆಯದಾಗಿ ಕುಟುಂಬಕ್ಕೆ ವಿಡಿಯೋ ಕಾಲ್ ಮಾಡಿದ್ದಾನೆ. ತಾಯಿ, ಸಹೋದರಿ ಜೊತೆ ಮಾತನಾಡಿದ್ದಾನೆ. ಈ ವೇಳೆ ತಾಯಿ ಮಗನಿಗ ಶರಣಾಗಲು ಸೂಚಿಸಿದರೂ, ಸೇನೆ ಬರಲಿ ನೋಡೋಣ ಎಂದಿದ್ದಾನೆ. ಸೇನೆ ಬಂದು ಇದೀಗ ಈತನ ಹೊಡೆದುರುಳಿಸಿದೆ.
ಭಾರತದ ಪಹ್ಗಲಾಂ ಮೇಲೆ ದಾಳಿ ಮಾಡಿದ ಉಗ್ರರಿಗೆ ಅಮೇರಿಕಾದ ಕಂಪನಿ ನೆರವು; ಸಿಕ್ಕೇಬಿಡ್ತು ಮಹತ್ವದ ಸಾಕ್ಷಿ!
ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗು, ಪರಿಪರಿಯಾಗಿ ಬೇಡಿಕೊಂಡ ತಾಯಿ
ವಿಡಿಯೋ ಕಾಲ್‌ನಲ್ಲಿ ಆಮಿರ್ ವಾನಿ AK-47 ಹಿಡಿದುಕೊಂಡು ಮಾತನಾಡುತ್ತಿರುವ ದೃಶ್ಯವಿದೆ. ವಿಡಿಯೋ ಕರೆಯಲ್ಲಿ ಉಗ್ರನ ತಾಯಿ ಮತ್ತು ಸಹೋದರಿ ಅವನಿಗೆ ಪದೇ ಪದೇ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗುವಂತೆ ಮನವಿ ಮಾಡಿದ್ದಾರೆ.ತಾಯಿ ಕಣ್ಣೀರಿಡುತ್ತಾ ಶರಣಾಗುವಂತೆ ಸೂಚಿಸುತ್ತಾರೆ. ಈ ವೇಳೆ ಸೇನೆ ಬರಲಿ ನೋಡೋಣ ಎನ್ನುವ ಉತ್ತರ ನೀಡಿದ್ದಾರೆ.
ವಿಡಿಯೋ ಕರೆಯ ಸಮಯದಲ್ಲಿ ಆಮಿರ್ ತನ್ನ ತಾಯಿ ಮತ್ತು ಸಹೋದರಿಯೊಂದಿಗೆ ಮಾತ್ರವಲ್ಲದೆ ತನ್ನ ಸಹ ಭಯೋತ್ಪಾದಕ ಆಸಿಫ್ ಅಹ್ಮದ್ ಶೇಕ್ ಅವರ ಸಹೋದರಿಯೊಂದಿಗೂ ಮಾತನಾಡಿದ್ದಾನೆ. ಈ ವೇಳೆ ಕುಟುಂಸ್ಥಱು ತಮ್ಮ ಸಹೋದರನ ಯೋಗಕ್ಷೇಮವನ್ನು ವಿಚಾರಿಸಿದ್ದಾರೆ. ಅವರು ಅಡಗಿಕೊಂಡಿದ್ದ ಮನೆಯಿಂದಲೇ ಈ ಕರೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಸೇನೆ ಈ ಉಗ್ರರ ಹುಡುಕಿ ಹತ್ಯೆ ಮಾಡಿದೆ.
ಜೈಷ್-ಎ-ಮೊಹಮ್ಮದ್ ಸಂಘಟನೆ ಸದಸ್ಯರು
ಈ ಎನ್‌ಕೌಂಟರ್‌ನಲ್ಲಿ ಮೂವರು ಭಯೋತ್ಪಾದಕರು ಹತರಾಗಿದ್ದಾರೆ. ಆಮಿರ್ ನಜೀರ್ ವಾನಿ, ಆಸಿಫ್ ಅಹ್ಮದ್ ಶೇಕ್ ಮತ್ತು ಯಾವರ್ ಅಹ್ಮದ್ ಭಟ್, ಮೂವರೂ ಜೈಷ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಗೆ ಸಂಬಂಧಿಸಿದವರು. ಇವರು ಪುಲ್ವಾಮಾ ಜಿಲ್ಲೆಯ ನಿವಾಸಿಗಳು. ಭದ್ರತಾ ಪಡೆಗಳು ಮೊದಲು ಅವರಿಗೆ ಶರಣಾಗಲು ಅವಕಾಶ ನೀಡಿತ್ತು. ಆದರೆ ಭಯೋತ್ಪಾದಕರು ಪ್ರತಿಯಾಗಿ ಗುಂಡಿನ ದಾಳಿ ನಡೆಸಿದರು ಎಂದು ಹೇಳಲಾಗುತ್ತಿದೆ.
ಆಸಿಫ್ ಮನೆಯನ್ನು IED ಬಳಸಿ ಸ್ಫೋಟಿಸಲಾಯಿತು
ಇದಕ್ಕೂ ಮೊದಲು ಭದ್ರತಾ ಪಡೆಗಳು ಭಯೋತ್ಪಾದಕ ಆಸಿಫ್ ಶೇಕ್ ಮನೆಯನ್ನು IED ಬಳಸಿ ಸ್ಫೋಟಿಸುವ ಮೂಲಕ ದೊಡ್ಡ ಕಾರ್ಯಾಚರಣೆ ನಡೆಸಿದ್ದವು. ಈ ಕಾರ್ಯಾಚರಣೆಯನ್ನು ಭಯೋತ್ಪಾದನೆ ವಿರುದ್ಧದ ಪ್ರಮುಖ ಹೆಜ್ಜೆ ಎಂದು ಪರಿಗಣಿಸಲಾಗಿದೆ.
ದಕ್ಷಿಣ ಕಾಶ್ಮೀರದಲ್ಲಿ 3 ಉಗ್ರರನ್ನು ಹೊಡೆದುರಳಿಸಿದ ಭಾರತೀಯ ಸೇನೆ, ಮುಂದುವರೆದ ಕೂಂಬಿಂಗ್


