ಪಹಲ್ಗಾಂನಲ್ಲಿ ೨೬ ಹಿಂದೂ ಪ್ರವಾಸಿಗರ ಹತ್ಯೆಗೆ ಪೂರ್ವಭಾವಿಯಾಗಿ, ಅಮೆರಿಕದ ಮ್ಯಾಕ್ಸಾರ್ ಟೆಕ್ನಾಲಜೀಸ್‌ನಿಂದ ಪಾಕಿಸ್ತಾನಕ್ಕೆ ಉಪಗ್ರಹ ಚಿತ್ರಗಳು ದೊರೆತಿದ್ದವು ಎಂಬ ಅನುಮಾನ ವ್ಯಕ್ತವಾಗಿದೆ. ಮ್ಯಾಕ್ಸಾರ್, ಪಾಕಿಸ್ತಾನಿ ಕಂಪನಿಯೊಂದಿಗೆ ಪಾಲುದಾರಿಕೆ ಹೊಂದಿದ್ದು, ಆ ಕಂಪನಿಯ ಮಾಲೀಕ ಪಾಕಿಸ್ತಾನದ ಪರಮಾಣು ಏಜೆನ್ಸಿಗೆ ಮಾಹಿತಿ ರಫ್ತು ಮಾಡಿದ ಆರೋಪದಲ್ಲಿ ಶಿಕ್ಷೆಗೊಳಗಾಗಿದ್ದ. ಭಾರತ ಕೂಡ ಮ್ಯಾಕ್ಸಾರ್‌ನಿಂದ ಚಿತ್ರಗಳನ್ನು ಪಡೆದಿತ್ತು.
ಭಾರತದ ಜಮ್ಮು, ಕಾಶ್ಮೀರದಲ್ಲಿರುವ ಅನಂತನಾಗ್ ಜಿಲ್ಲೆಯ ಪಹಲ್ಗಾಂ ಎಂಬ ಪ್ರವಾಸಿ ಸ್ಥಳದಲ್ಲಿ ಪಾಕ್ ಬೆಂಬಲಿತ ಇಸ್ಲಾಮಿಕ್ ಉಗ್ರರು ದಾಳಿ ಮಾಡಿ 26 ಹಿಂದೂ ಪ್ರವಾಸಿಗರ ನರಮೇಧ ಮಾಡಿದ್ದಾರೆ. ಆದರೆ, ಪಾಕ್ ಬೆಂಬಲಿತ ಉಗ್ರರ ದಾಳಿಗೆ ಅಮೆರಿಕನ್ ಕಂಪನಿ ಪಾಕಿಸ್ತಾನಕ್ಕೆ ನೆರವು ನೀಡಿದೆಯೇ? ಎಂಬ ಅನುಮಾನ ಬಂದಿವೆ. ಪಹಲ್ಗಾಂ ದಾಳಿಯ ನಂತರ ಬಂದ ವರದಿಗಳು ಅಮೇರಿಕಾದ ಮೇಲಿನ ಅನುಮಾನವನ್ನು ಮುನ್ನೆಲೆಗೆ ತಂದಿವೆ. ಮ್ಯಾಕ್ಸಾರ್ ಟೆಕ್ನಾಲಜೀಸ್ ಎಂಬ ಈ ಅಮೆರಿಕನ್ ಸ್ಯಾಟಲೈಟ್ ಇಮೇಜರಿ ಕಂಪನಿಯ ವೆಬ್‌ಸೈಟ್‌ನಲ್ಲಿ ದಾಳಿಗೆ ಎರಡು ತಿಂಗಳ ಮೊದಲು ಈ ಪ್ರದೇಶದ ಹೈ-ರೆಸಲ್ಯೂಶನ್ ಸ್ಯಾಟಲೈಟ್ ಚಿತ್ರಗಳಿಗೆ ಬೇಡಿಕೆ ಹೆಚ್ಚಿತ್ತು ಎಂದು ವರದಿಯಾಗಿದೆ. ಈ ಕಂಪನಿಯು ಜೂನ್ 2024 ರಲ್ಲಿ ಪಾಕಿಸ್ತಾನಿ ಕಂಪನಿಯೊಂದಿಗೆ ಪಾಲುದಾರಿಕೆ ಹೊಂದಿತ್ತು.
ಪಾಕಿಸ್ತಾನಿ ಕಂಪನಿಯ ಮಾಲೀಕರು ಪಾಕಿಸ್ತಾನದ ಪರಮಾಣು ಏಜೆನ್ಸಿಗೆ ಸೂಕ್ಷ್ಮ ಮಾಹಿತಿಯನ್ನು ರಫ್ತು ಮಾಡಿದ ಆರೋಪದ ಮೇಲೆ ಅಮೆರಿಕದಲ್ಲಿ ಶಿಕ್ಷೆಗೆ ಗುರಿಯಾಗಿದ್ದಾರೆ ಎಂಬುದು ಆತಂಕಕಾರಿ ಸಂಗತಿ. ಪಾಕಿಸ್ತಾನಿ-ಅಮೆರಿಕನ್ ಓಬೈದುಲ್ಲಾ ಸೈಯದ್ ಅವರನ್ನು ಅಮೆರಿಕದ ರಫ್ತು ಕಾನೂನುಗಳನ್ನು ಉಲ್ಲಂಘಿಸಿ ಪಾಕಿಸ್ತಾನ ಪರಮಾಣು ಶಕ್ತಿ ಆಯೋಗಕ್ಕೆ (PAEC) ಸೂಕ್ಷ್ಮ ಕಂಪ್ಯೂಟರ್ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಅನ್ನು ರಫ್ತು ಮಾಡಿದ್ದಕ್ಕಾಗಿ ಶಿಕ್ಷೆ ವಿಧಿಸಲಾಗಿತ್ತು. PAEC ಪಾಕಿಸ್ತಾನದ ಪರಮಾಣು ಮತ್ತು ಕ್ಷಿಪಣಿ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸಲು ಹೆಸರುವಾಸಿಯಾಗಿದೆ.
ಭಾರತ ಕೂಡ ಮ್ಯಾಕ್ಸಾರ್ ಟೆಕ್ನಾಲಜೀಸ್‌ನಿಂದ ಪಡೆದ ಚಿತ್ರ:
ವರದಿಗಳ ಪ್ರಕಾರ, ಭಾರತವು ಆಪರೇಷನ್ ಸಿಂದೂರ್ ಮತ್ತು ಮೇ 7 ರಿಂದ 10 ರವರೆಗೆ ಪಾಕಿಸ್ತಾನದೊಂದಿಗಿನ ಮಿಲಿಟರಿ ಘರ್ಷಣೆಯ ಸಮಯದಲ್ಲಿ ಮ್ಯಾಕ್ಸಾರ್ ಟೆಕ್ನಾಲಜೀಸ್‌ನಿಂದ ಚಿತ್ರಗಳನ್ನು ಪಡೆದಿತ್ತು. ಆದಾಗ್ಯೂ, ಪಾಕಿಸ್ತಾನದೊಂದಿಗಿನ ಸಂಬಂಧದಿಂದಾಗಿ ಈ ಅಮೆರಿಕನ್ ಕಂಪನಿಯ ಮೇಲೆ ಅನೇಕರು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಪಹಲ್ಗಾಂ ಭಯೋತ್ಪಾದಕ ದಾಳಿಗೆ ಮುನ್ನ ಚಿತ್ರಗಳನ್ನು ಪಡೆದ ಬಗ್ಗೆ ವರದಿಗಳು ಹೊರಬಿದ್ದ ನಂತರ, ಈ ಕಂಪನಿಯು ಪಾಕಿಸ್ತಾನಿ ಕಂಪನಿ ಬಿಸಿನೆಸ್ ಸಿಸ್ಟಮ್ಸ್ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ (BSI) ಅನ್ನು ತನ್ನ ವೆಬ್‌ಸೈಟ್‌ನಿಂದ ತೆಗೆದುಹಾಕಿದೆ. ಮ್ಯಾಕ್ಸಾರ್‌ನ ವಕ್ತಾರರು ಪಾಕಿಸ್ತಾನಿ ಕಂಪನಿಯನ್ನು ವಿವಾದದಿಂದ ದೂರವಿಡಲು ಪ್ರಯತ್ನಿಸಿದರು ಮತ್ತು BSI ಚಿತ್ರಗಳ ಬೇಡಿಕೆಗಳಿಗೆ ಯಾವುದೇ ನೇರ ಸಂಬಂಧ ಹೊಂದಿಲ್ಲ ಎಂದು ಹೇಳಿದರು.
ಪೆಹಲ್ಗಾಮ್ ಉಗ್ರರ ದಾಳಿಗೆ ಸಂಬಂಧಪಟ್ಟಂತೆ ಉಗ್ರರಿಗೆ ಪಾಕಿಸ್ತಾನದ ನೆರವು ಇರುವುದನ್ನು ಖಚಿತಪಡಿಸಿಕೊಂಡ ಭಾರತ ಸರ್ಕಾರ ಫಾಕಿಸ್ತಾನದ ಉಗ್ರ ನೆಲೆಗಳ ಮೇಲೆ ದಾಳಿ ಮಾಡಲು ಪಾರೇಷನ್ ಸಿಂದೂರ್ ಸೇನಾ ಕಾರ್ಯಾಚರಣೆ ಮಾಡಲಾಯಿತು. ಈ ವೇಳೆ ಪಾಕಿಸ್ತಾನದ 100ಕ್ಕೂ ಅಧಿಕ ಉಗ್ರರು ಸಾವನ್ನಪ್ಪಿದ್ದಾರೆ. ಭಾರತದ ದಾಳಿಗೆ ಪ್ರತಿದಾಳಿ ಮಾಡಿದ ಪಾಕಿಸ್ತಾನದ ಡ್ರೋನ್ ಮತ್ತು ಶೆಲ್ ದಾಳಿಗೆ ಐವರು ಯೋಧರು, ಓರ್ವ ಅಧಿಕಾರಿ ಸಾವಿಗೀಡಾಗಿದ್ದಾರೆ. ಪಾಕಿಸ್ತಾನವು ಭಾರತದ ನಾಗರೀಕ ನೆಲೆಗಳನ್ನು ಹುಡುಕಿ ದಾಳಿ ಮಾಡುವುದಕ್ಕೆ ಮುಂದಾದರೆ, ಭಾರತದಿಂದ ಪಾಕಿಸ್ತಾನದ ಸೇನಾ ನೆಲೆಗಳು, ವಾಯು ದಾಳಿ ನಡೆಸುತ್ತಿದ್ದ ವಾಯು ನೆಲೆಗಳ ಮೇಲೆ ದಾಳಿ ಮಾಡಿ ಉಡೀಸ್ ಮಾಡಿದೆ.
ಆಪರೇಷನ್ ಸಿಂದೂರ ಯಶಸ್ವಿ ಬೆನ್ನಲ್ಲಿಯೇ ಪ್ರಧಾನಿ ಮೋದಿ ಮಂಗಳವಾರ ಪಂಜಾಬ್‌ನ ಆದಂಪುರ ಏರ್‌ಬೇಸ್‌ಗೆ ಭೇಟಿ ನೀಡಿದರು. ಯೋಧರ ಜೊತೆ ಮಾತನಾಡುವಾಗ, ನರೇಂದ್ರ ಮೋದಿ ಅವರ ಹಿಂದೆ S-400 ವಾಯು ರಕ್ಷಣಾ ವ್ಯವಸ್ಥೆ, ಮಿಗ್-29 ಮತ್ತು ರಫೇಲ್ ವಿಮಾನಗಳು ಕಾಣಿಸಿದವು. ನೀವೆಲ್ಲರೂ ನಿಮ್ಮ ಗುರಿಗಳನ್ನು ತಲುಪಿದ್ದೀರಿ ಎಂದು ಹೆಮ್ಮೆಯಿಂದ ಹೇಳಬಲ್ಲೆ ಎಂದು ಮೋದಿ ಹೇಳಿದರು. ಪಾಕಿಸ್ತಾನದ ಒಳಗಿನ ಭಯೋತ್ಪಾದಕ ನೆಲೆಗಳು ಮತ್ತು ಅವರ ವಾಯುನೆಲೆಗಳು ಮಾತ್ರವಲ್ಲ, ಅವರ ಕೆಟ್ಟ ಉದ್ದೇಶಗಳು ಮತ್ತು ದುಸ್ಸಾಹಸ ಎರಡನ್ನೂ ಸೋಲಿಸಲಾಗಿದೆ ಎಂದು ಪ್ರಧಾನಿಗಳು ಹೇಳಿದರು.


