ಇಸ್ರೇಲ್ ಪ್ರತಿದಾಳಿಗೆ ಬೆಚ್ಚಿದ ಉಗ್ರರು, ಹಮಾಸ್ ಆರ್ಥಿಕ ಸಚಿವ ಏರ್‌ಸ್ಟ್ರೈಕ್‌ನಲ್ಲಿ ಹತ!
ಹಮಾಸ್ ಉಗ್ರರು ನಡೆಸಿದ ಏಕಾಏಕಿ ದಾಳಿಗೆ ಪ್ರತಿದಾಳಿ ಆರಂಭಿಸಿರುವ ಇಸ್ರೇಲ್ ಹಮಾಸ್ ಉಗ್ರರನ್ನು ಟಾರ್ಗೆಟ್ ಮಾಡಿದೆ. ಹಮಾಸ್ ಉಗ್ರರ ಅಡಗುತಾಣ ಗಾಜಾ ಪಟ್ಟಿಮೇಲೆ ಏರ್‌ಸ್ಟ್ರೈಕ್ ನಡೆಸುತ್ತಿರುವ ಇಸ್ರೇಲ್ ಮಹತ್ವದ ಮಾಹಿತಿಯನ್ನು ನೀಡಿದೆ. ಈ ದಾಳಿಯಲ್ಲಿ ಹಮಾಸ್ ಉಗ್ರರ ಆರ್ಥಿಕ ಸಚಿವ ಹತ್ಯೆಯಾಗಿದ್ದಾನೆ.

ಜೆರುಸಲೇಮ್(ಅ.10) ಹಮಾಸ್ ಉಗ್ರರ ಮೇಲಿನ ಪ್ರತಿದಾಳಿಯನ್ನು ಇಸ್ರೇಲ್ ಸದ್ಯಕ್ಕೆ ನಿಲ್ಲಿಸುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಹಮಾಸ್ ಉಗ್ರರು, ಪ್ಯಾಲೆಸ್ತಿನ್, ಇರಾನ್ ಸೇರಿದಂತೆ ಕೆಲ ರಾಷ್ಟ್ರಗಳ ಗಂಭೀರ ಎಚ್ಚರಿಕೆ ನಡುವೆಯೂ ಇಸ್ರೇಲ್ ದಾಳಿ ಮುಂದುವರಿಸಿದೆ.ಈಗಾಗಲೇ ಸಾವಿರಕ್ಕೂ ಹೆಚ್ಚು ಹಮಾಸ್ ಉಗ್ರರು ಈ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಇಸ್ರೇಲ್ ಏರ್‌ಸ್ಟ್ರೈಕ್‌ಗೆ ಗಾಜಾ ನಲುಗಿ ಹೋಗಿದೆ. ಈ ಏರ್‌ಸ್ಟ್ರೈಕ್‌ನಲ್ಲಿ ಹಮಾಸ್ ಆರ್ಥಿಕ ಸಚಿವ ಜಾವದ್ ಅಬು ಶಮಾಲ ಹತ್ಯೆಯಾಗಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ.
ಗಾಜಾ ಮೇಲಿನ ದಾಳಿಗೆ ಹಮಾಸ್ ಉಗ್ರರು ನಲುಗಿ ಹೋಗಿದ್ದಾರೆ. ಮತ್ತೊಂದೆಡೆಯಿಂದ ಇಂಧನ, ಆಹಾರ, ನೀರು, ವಿದ್ಯುತ್ ಎಲ್ಲವನ್ನೂ ಸ್ಥಗಿತಗೊಳಿಸಲಾಗಿದೆ. ಗಾಜಾ ಪಟ್ಟಿಯಲ್ಲಿನ ನಾಗರೀಕರಿಗೆ ದಾಳಿಗೆ ಮೊದಲೇ ಇಸ್ರೇಲ್ ಸೂಚನೆ ನೀಡಲಾಗಿತ್ತು. ನಮ್ಮ ದಾಳಿ ಹಮಾಸ್ ಉಗ್ರರ ವಿರುದ್ಧ. ಹೀಗಾಗಿ ನಾಗರೀಕರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಲು ಸೂಚನೆ ನೀಡಿತ್ತು. ಹಮಾಸ್ ಉಗ್ರರ ಪ್ರಮುಖ ಕಟ್ಟಡ, ಕಚೇರಿಗಳನ್ನು ಧ್ವಂಸಗೊಳಿಸಲಾಗಿದೆ. ಈ ದಾಳಿಯಲ್ಲಿ ಆರ್ಥಿಕ ಸಚಿವ ಕೂಡ ಹತ್ಯೆಯಾಗಿರುವುದಾಗಿ ಸೇನೆ ಹೇಳಿದೆ.
ಪತಿ ಜೊತೆ ವಿಡಿಯೋ ಕಾಲ್‌ನಲ್ಲಿರುವಾಗಲೇ ಭಾರತೀಯ ಮಹಿಳೆ ಮೇಲೆ ಹಮಾಸ್ ಉಗ್ರರ ದಾಳಿ!
ಹಮಾಸ್ ಉಗ್ರರನ್ನು ಟಾರ್ಗೆಟ್ ಮಾಡಿರುವ ಇಸ್ರೇಲ್ ಹಂತ ಹಂತವಾಗಿ ದಾಳಿಯನ್ನು ತೀವ್ರಗೊಳಿಸುತ್ತಿದೆ. ಇತ್ತ ಅಮೆರಿಕ ಕೂಡ ಇಸ್ರೇಲ್‌ಗೆ ನೆರವು ನೀಡಿದೆ. ಮತ್ತೊಂದೆಡೆ ಹಮಾಸ್ ಉಗ್ರರು ಕೂಡ ಪ್ರತಿ ದಾಳಿ ನಡೆಸುತ್ತಿದ್ದಾರೆ. ಇಸ್ರೇಲ್ ಒಳನುಗ್ಗಿರುವ ಹಮಾಸ್ ಉಗ್ರರ ಪೈಕಿ ಇನ್ನೂ ಸಾವಿರಕ್ಕೂ ಉಗ್ರರು ಇಸ್ರೇಲ್ ದೇಶದೊಳಗಿದ್ದಾರೆ ಅನ್ನೋ ಮಾಹಿತಿಯನ್ನು ಸೇನೆ ಬಹಿರಂಗಪಡಿಸಿದೆ.
ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ದಾಳಿಯಲ್ಲಿ 900ಕ್ಕೂ ಹೆಚ್ಚು ಇಸ್ರೇಲಿಗರು ಮೃತಪಟ್ಟಿದ್ದಾರೆ. ಈ ಪೈಕಿ 11 ಅಮೆರಿಕನ್ ಪ್ರಜೆಗಳು ಸೇರಿದ್ದಾರೆ. ಹಲವು ಅಮೆರಿಕನ್ ಪ್ರಜೆಗಳನ್ನು ಒತ್ತೆಯಾಳಾಗಿಟ್ಟುಕೊಂಡಿದ್ದಾರೆ. ಇದೀಗ ಇಸ್ರೇಲ್ ಹಾಗೂ ಪ್ಯಾಲೆಸ್ತಿನ್ ನಡುವಿನ ಯುದ್ಧ 4ನೇ ದಿನಕ್ಕೆ ಕಾಲಿಟ್ಟಿದೆ. ಟೆಲ್ ಅವೀವ್‌ನಲ್ಲಿ ಹಮಾಸ್ ಉಗ್ರರು ಇಸ್ರೇಲ್ ಪ್ರಜಗೆಳ ಮೇಲೆ ದಾಳಿ ನಡೆಸುತ್ತಿರುವ ಕಾರಣ, ಇದೀಗ ಇಸ್ರೇಲ್ ಸೇನೆ ಸೈರನ್ ಮೊಳಗಿಸಿದೆ. ನಾಗರೀರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಗಲು ಸೂಚಿಸಿದೆ.
ನಮ್ಮ ಯುದ್ಧ ನಾವೇ ಮಾಡುತ್ತೇವೆ: ಸುತ್ತಲೂ ಶತ್ರುಗಳನ್ನೇ ಹೊಂದಿರುವ ಪುಟ್ಟದೇಶ ಇಸ್ರೇಲ್‌ನ ಆತ್ಮವಿಶ್ವಾಸದ ನುಡಿ
2,800ಕ್ಕೂ ಹೆಚ್ಚು ಇಸ್ರೇಲಿಗರು ಗಾಯಗೊಂಡಿದ್ದರೆ. ಸಾವಿರಕ್ಕೂ ಹೆಚ್ಚು ಮಂದಿಯನ್ನು ಹಮಾಸ್ ಉಗ್ರರು ಒತ್ತೆಯಾಳಾಗಿಟ್ಟುಕೊಂಡಿದ್ದಾರೆ. ಇದೀಗ ಇಸ್ರೇಲ್ ದಾಳಿ ತೀವ್ರಗೊಳ್ಳುತ್ತಿದ್ದಂತೆ ಒತ್ತೆಯಾಳುಗಳ ಹತ್ಯೆ ಬೆದರಿಕೆಯನ್ನು ಹಮಾಸ್ ಉಗ್ರರು ಹಾಕಿದ್ದಾರೆ.