Asianet Suvarna News Asianet Suvarna News

ಸ್ಟಂಟ್ ಮಾಡೋಕೆ ಹೋಗಿ ಮುರಿತಾ ಸೊಂಟ... ವಿಡಿಯೋ ವೈರಲ್

ಕಟ್ಟಡದ ಟೆರೆಸ್‌ನಿಂದ ಯುವಕನೋರ್ವ ಬ್ಲಾಕ್‌ಪ್ಲಿಪ್ ಮಾಡಲು ಹೊರಟಿದ್ದಾನೆ. ಆದರೆ ಅದು ಮಾಡಲು ಸಾಧ್ಯವಾಗದೇ ಸೀದಾ ಆತ  8 ರಿಂದ 9 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದಾನೆ.

terrible stunt for instagram reels, youth backflip from building  watch horrible video akb
Author
First Published Mar 26, 2023, 3:54 PM IST | Last Updated Mar 26, 2023, 3:54 PM IST

ಈ ಸೋಶಿಯಲ್ ಮೀಡಿಯಾಗಳು ಬಂದ ಮೇಲೆ ಜನ ಲೈಕ್ಸ್ ಕಾಮೆಂಟ್‌ಗಾಗಿ ತಮ್ಮ ಜೀವವನ್ನು ಲೆಕ್ಕಿಸದೇ ಏನೇನೋ ಸಾಹಸ ಮಾಡಲು ಹೋಗಿ ಕೈ ಕಾಲು ಸೊಂಟ ಮುರಿದುಕೊಳ್ಳುವುದು ಸಾಮಾನ್ಯ ಎನಿಸಿದೆ. ಹಾಗೆಯೇ ಇಲ್ಲೊಬ್ಬ ಯುವಕ ಸಾಹಸ ಮಾಡಲು ಹೋಗಿ  ಮೈಮೇಲೆ ಆಪತ್ತು ಎಳೆದುಕೊಂಡಿದ್ದಾನೆ.  aapka_dance ಎಂಬ ಇನ್ಸ್ಟಾಗ್ರಾಮ್‌ ಪೇಜ್‌ನಿಂದ ಈ ವಿಡಿಯೋ ಪೋಸ್ಟ್ ಆಗಿದೆ. ವಿಡಿಯೋದಲ್ಲಿ ಕಟ್ಟಡದ ಟೆರೆಸ್‌ನಿಂದ ಯುವಕನೋರ್ವ ಬ್ಲಾಕ್‌ಪ್ಲಿಪ್ ಮಾಡಲು ಹೊರಟಿದ್ದಾನೆ. ಆದರೆ ಅದು ಮಾಡಲು ಸಾಧ್ಯವಾಗದೇ ಸೀದಾ ಆತ  8 ರಿಂದ 9 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದಾನೆ. ಕೂಡಲೇ ಅಲ್ಲಿದ್ದ ಓರ್ವ ಯೂವಕ ಓಡಿ ಹೋಗಿ ಅವನನ್ನು ಮೇಲೇಳಿಸುತ್ತಾನೆ. ವೀಡಿಯೋದಲ್ಲಿ ಕಾಣಿಸುವಂತೆ ಪ್ರಸ್ತುತ ಸ್ಥಿತಿಯಲ್ಲಿ ಆತ ಸಹಜವಾಗಿ ಇದ್ದಂತೆ ಕಾಣಿಸುತ್ತಿದೆ. 

ಸಾಮಾನ್ಯವಾಗಿ  ಬ್ಲಾಕ್‌ಫ್ಲಿಪ್ ಮಾಡುವಾಗ ವಿಶೇಷತಜ್ಞರ ಅಥವಾ ತಿಳಿದವರ ಸಲಹೆ ಸೂಚನೆಗಳನ್ನು ತೆಗೆದುಕೊಳ್ಳಬೇಕು. ಆದರೆ ಇಲ್ಲಿ ಯುವಕರು ಏನು ಮಾಡಿದ್ದಾರೋ ತಿಳಿಯದು. ವಿಡಿಯೋ ಕ್ಲಿಕ್ ಆಗಬೇಕೆಂಬ ಆಸೆಯಲ್ಲಿ ಜೀವದ ಮೇಲಿನ ಆಸೆಯನ್ನು ಬದಿಗಿಟ್ಟು ಯುವಕ ಕಟ್ಟಡದಿಂದ ಕೆಳಗೆ ಹಾರಿದ್ದಾನೆ.  ವಿಡಿಯೋದಲ್ಲಿ ಬ್ಲಾಕ್‌ಫ್ಲಿಪ್‌ ಇಲ್ಲದಿದ್ದರು ಕಟ್ಟಡದ ಮೇಲಿನಿಂದ ಕೆಳಗೆ ಹಾರಿದ ಆತನ ದುಸ್ಸಾಹಸಕ್ಕೆ ನೆಟ್ಟಿಗರು ಶಾಕ್ ಆಗಿದ್ದಾರೆ. ಈ ವಿಡಿಯೋವನ್ನು 146 ಮಿಲಿಯನ್ ಜನ ವೀಕ್ಷಿಸಿದ್ದಾರೆ.

ಟ್ರೆಂಡ್ ಫಾಲೋವರ್‌ ಈ ಪಾರಿವಾಳ: ಹಕ್ಕಿಯ ಸುಂದರ ಬ್ಯಾಕ್‌ಫ್ಲಿಪ್‌ ವೈರಲ್

ಈ ವಿಡಿಯೋ ನೋಡಿದ ನೆಟ್ಟಿಗರು ಯುವಕನ ಈ ಸಾಹಸಕ್ಕೆ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಈ ತರುಣನ ಮೂರ್ಖತನಕ್ಕೆ ಬೇಸರ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಹುಡುಗನ ಪರಿಸ್ಥಿತಿ ಹೇಗಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೆ ಕೆಲವರು ಆತ ಆರೋಗ್ಯವಾಗಿದ್ದಾನೆ ಎಂದು ಭಾವಿಸುತ್ತೇವೆ ಎಂದು ಕಾಳಜಿ ವಹಿಸಿದ್ದಾರೆ. ನನಗೆ ಈ ವಿಡಿಯೋ ನೋಡಿ ಬೇಸರವಾಯ್ತು. ಆತನ ಧೈರ್ಯಕ್ಕೆ ಸೆಲ್ಯೂಟ್ ಎಂದು ಕಾಮೆಂಟ್ ಮಾಡಿದ್ದಾರೆ. ಮುಂದಿನ ಸಲ ಹೆಚ್ಚು ಜಾಗೃತರಾಗಿರಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಇನ್‌ಸ್ಟಾಗ್ರಾಂ ರೀಲ್ಸ್‌ಗಾಗಿ ಬೈಕ್‌ನಲ್ಲಿ ಯುವಕರ ಸ್ಟಂಟ್: 31 ವರ್ಷದ ಮಹಿಳೆ ಸಾವು!

ಅತಿರೇಖದ ರೀಲ್ಸ್‌ನಿಂದ ಈಗಾಗಲೇ ಹಲವು ದುರಂತಗಳು ನಡೆದಿದೆ. ರೀಲ್ಸ್‌ಗಾಗಿ ನಿಯಮ ಮೀರಿ ವರ್ತಿಸಿದ ಘಟನೆಗಳೂ ವರದಿಯಾಗಿದೆ. ಇಷ್ಟಾದರೂ ಹುಚ್ಚಾಟದ ಮೂಲಕ ರೀಲ್ಸ್ ಮಾಡುವವರ ಸಂಖ್ಯೆ ಕಡಿಮೆ ಏನೂ ಇಲ್ಲ. ಇದೀಗ ಯುವಕರಿಬ್ಬರು ಸಾರ್ವಜನಿಕ ರಸ್ತೆಯಲ್ಲಿ ಬೈಕ್ ಮೂಲಕ ಸಾಹಸ ಮಾಡಿದ್ದಾರೆ. ಇನ್‌‌ಸ್ಟಾಗ್ರಾಂ ರೀಲ್ಸ್‌ಗಾಗಿ ಈ ಸಾಹಸ ಮಾಡಿದ್ದಾರೆ. ಆದರೆ ಬೈಕ್ ಮೂಲಕ ಸಾಹಸ ಮಾಡುತ್ತಿರುವ ವೇಳೆ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ 31 ವರ್ಷದ ಮಹಿಳೆಗೆ ಡಿಕ್ಕಿ ಹೊಡೆದಿದೆ. ಅತೀ ವೇಗವಾಗಿ ಬೈಕ್ ಡಿಕ್ಕಿ ಹೊಡೆದ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಈ ಮಹಿಳೆ ಮೃತಪಟ್ಟಿದ್ದಾರೆ. ಈ ಘಟನೆ ಪುಣೆಯ ಮೊಹಮ್ಮದ್ ವಾಡಿಯಲ್ಲಿ ನಡೆದಿದೆ.

ಯುವಕನ ಸ್ಟೈಲಿಶ್‌ ಬ್ಯಾಕ್‌ಫ್ಲಿಪ್‌ ಸ್ಟಂಟ್‌ಗೆ ಬೆರಗಾದ ನೆಟ್ಟಿಗರು

ಆಯನ್ ಶೇಕ್ ಹಾಗೂ ಜಾಯದ್ ಜಾವೇದ್ ಇಬ್ಬರು ಬೈಕ್‌ನಲ್ಲಿ ಹುಚ್ಚಾಟವಾಡಿದ್ದಾರೆ. ಸಾರ್ವಜನಿಕ ರಸ್ತೆಯಲ್ಲಿ ಸಾಹಸ ಪ್ರದರ್ಶನ ಮಾಡುತ್ತಾ ಇನ್‌ಸ್ಟಾಗ್ರಾಂ ರೀಲ್ಸ್ ಮಾಡಿದ್ದಾರೆ. ಆದರೆ ಅತೀ ವೇಗದಿಂದ ಸಾಗುತ್ತಿದ್ದ ಬೈಕ್‌ನಲ್ಲಿ ಸಾಹಸ ಪ್ರದರ್ಶನ ಮಾಡುತ್ತಿದ್ದ ಆಯನ್ ಶೇಕ್ ಹಾಗೂ ಜಾಯದ್ ಇಬ್ಬರ ಗಮನ ರೀಲ್ಸ್ ಮೇಲೆ ನೆಟ್ಟಿದೆ. ಇದರ ಪರಿಣಾಮ ಬೈಕ್ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಗೆ ರಭಸವಾಗಿ ಡಿಕ್ಕಿ ಹೊಡೆದಿದೆ. 

ಅಪಘಾತದ ತೀವ್ರತೆಗೆ ಮಹಿಳೆ ಮಾರುದ್ದ ದೂರ ಹೋಗಿ ಬಿದ್ದಿದ್ದಾರೆ. ಬೈಕ್ ಹಾಗೂ ರಸ್ತೆ ಬಡಿದು ಬಿದ್ದ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದಾರೆ. ಇತ್ತ ಆಯನ್ ಶೇಕ್ ಹಾಗೂ ಜಾಯೆದ್ ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳೀಯರು ಆಗಮಿಸಿ ಮಹಿಳೆಯನ್ನು ಆಸ್ಪತ್ರೆ ದಾಖಲಿಸಿದ್ದರೂ ಪ್ರಯೋಜನವಾಗಲಿಲ್ಲ. 

 
 
 
 
 
 
 
 
 
 
 
 
 
 
 

A post shared by Aapka_Dance (@aapka_dance)


 

Latest Videos
Follow Us:
Download App:
  • android
  • ios