ಇಲ್ಲೊಂದು ಕಡೆ ಯುವಕನೋರ್ವ ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಬ್ಯಾಕ್‌ಫ್ಲಿಪ್‌ ಸ್ಟಂಟ್ ಮಾಡುತ್ತಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಬ್ಯಾಕ್‌ಫ್ಲಿಪ್‌ ಇವತ್ತಿನ ನವ ತರುಣರ ಟ್ರೆಂಡ್‌, ಸಾಮಾಜಿಕ ಜಾಲತಾಣದ ಈ ಯುಗದಲ್ಲಿ ಯುವಕರು ಏನೇನೋ ಸಾಹಸ ಮಾಡಿ ಅವುಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಾರೆ. ಹೀಗೆ ಸಾಹಸ ಮಾಡಲು ಹೋಗಿ ಜೀವಕ್ಕೆ ಅಪಾಯ ತಂದುಕೊಂಡವರು ಅನೇಕರಿದ್ದಾರೆ. ಆದಾಗ್ಯೂ ಟ್ರೆಂಡ್ ಮಾತ್ರ ನಿಂತಿಲ್ಲ. ಸಿಕ್ಕಿದಲ್ಲೆಲ್ಲಾ ಸ್ಟಂಟ್ ಮಾಡುವ ಯುವಕ ಯುವತಿಯರು ಸೋಶಿಯಲ್‌ ಮೀಡಿಯಾದಲ್ಲಿ ಹೆಚ್ಚಿನ ಲೈಕ್ಸ್ ಪಡೆಯುವ ಕಾತುರದಲ್ಲಿರುತ್ತಾರೆ.

ಹಾಗೆಯೇ ಇಲ್ಲೊಂದು ಕಡೆ ಯುವಕನೋರ್ವ ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಬ್ಯಾಕ್‌ಫ್ಲಿಪ್‌ ಸ್ಟಂಟ್ ಮಾಡುತ್ತಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಂಪು ಬಣ್ಣದ ಟೀ ಶರ್ಟ್‌, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುವ ಯುವಕ ಪ್ಲಾಟ್‌ಫಾರ್ಮ್‌ನಲ್ಲಿ ಸೊಗಸಾಗಿ ಅನಾಯಾಸವಾಗಿ ಬ್ಯಾಕ್‌ಫ್ಲಿಪ್‌ ಮಾಡುತ್ತಿದ್ದರೆ ಫ್ಲಾಟ್‌ಫಾರ್ಮ್‌ನಲ್ಲಿರುವ ಪ್ರಯಾಣಿಕರು ಹಾಗೂ ಭದ್ರತಾ ಸಿಬ್ಬಂದಿ ಕೂಡ ಈತನನ್ನೇ ಬೆರಗಾಗಿ ನೋಡುತ್ತಿದ್ದಾರೆ. 

View post on Instagram

ಇನ್ಸ್ಟಾಗ್ರಾಮ್‌ನ ಕ್ರೇಜಿ ಫ್ಲಿಪ್ಪರ್ ಎಂಬ ಖಾತೆಯಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊವು ಸೂರಜ್ ಸಿಂಗ್ ಎಂಬ ಹುಡುಗ ರೈಲು ನಿಲ್ದಾಣದಲ್ಲಿ ಸಾರ್ವಜನಿಕರ ಮುಂದೆ ಸರಣಿ ಹಿಮ್ಮುಖ ಜಿಗಿತದ ಪ್ರದರ್ಶನವನ್ನು ತೋರಿಸುತ್ತಿದೆ. 

Bike Stunt ಶಕ್ತಿಮಾನ್ ರೀತಿ ರಸ್ತೆಯಲ್ಲಿ ಬೈಕ್ ಸ್ಟಂಟ್, ವಿಡಿಯೋ ವೈರಲ್ ಆಗುವ ಮುನ್ನವೇ ಅರೆಸ್ಟ್!

ಒಬ್ಬ ಪೋಲೀಸ್ ಇನ್ಸ್‌ಪೆಕ್ಟರ್ ಕೂಡ ಸಿಂಗ್ ಅವರ ಈ ಸ್ಟಂಟ್ ನೋಡಿ ಬೆರಗಾಗಿದ್ದಾರೆ. ಆದರೆ ಭಾರತದ ಹಲವಾರು ರೈಲ್ವೆ ಆವರಣಗಳಲ್ಲಿ ಫೋಟೋಗಳು ಮತ್ತು ವೀಡಿಯೊಗಳನ್ನು ಸೆರೆಹಿಡಿಯಲು ಅನುಮತಿಯಿಲ್ಲದ ಕಾರಣ ಇನ್‌ಸ್ಟಾಗ್ರಾಮ್ ರೀಲ್‌ನ ಕೊನೆಯಲ್ಲಿ ರೆಕಾರ್ಡಿಂಗ್ ಸಾಧನವನ್ನು ಅಧಿಕಾರಿ ಕೇಳುವುದನ್ನು ವಿಡಿಯೋದಲ್ಲಿ ಕಾಣಬಹುದು. ಪೊಲೀಸ್ ಅಧಿಕಾರಿ ಕೊನೆಯಲ್ಲಿ ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ರೀಲ್ಸ್‌ಗಾಗಿ ನಡುರಸ್ತೆಯಲ್ಲಿ ಸ್ಟಂಟ್‌: ಪೊಲೀಸರಿಂದ ಯುವಕನ ಬಂಧನ

ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡಿ ಹಾಕುವ ಹುಚ್ಚು ಹೊಂದಿದ್ದ ಯುವಕನೋರ್ವನನ್ನು ಕೆಲ ದಿನಗಳ ಹಿಂದೆ ಪೊಲೀಸರು ಬಂಧಿಸಿದ್ದರು. ಈತ ಸಾಮಾಜಿಕ ಜಾಲತಾಣಗಳಲ್ಲಿ ಫಾಲೋವರ್ಸ್‌ಗಳನ್ನು ಹೆಚ್ಚಿಸಿಕೊಳ್ಳಲು ಅಪಾಯಕಾರಿ ಸ್ಟಂಟ್‌ಗಳನ್ನು ಮಾಡಿ ತನ್ನ ಖಾತೆಯಲ್ಲಿ ಪೋಸ್ಟ್‌ ಮಾಡುತ್ತಿದ್ದ. ಹಾಗೆಯೇ ಕೆಲ ದಿನಗಳ ಹಿಂದೆ ಈತ ಎರಡು ದೋಣಿಗಳ ಮೇಲೆ ಕಾಲಿಟ್ಟಂತೆ, ಚಲಿಸುವ ಎರಡು ಕಾರುಗಳ ಮೇಲೆ ತನ್ನ ಒಂದೊಂದು ಕಾಲುಗಳನ್ನು ಇಟ್ಟು ಸ್ಟಂಟ್ ಮಾಡಿದ್ದ ಇದರ ವಿಡಿಯೋವನ್ನು ಆತ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ. ಇದನ್ನು ನೋಡಿದ ಪೊಲೀಸರು ಆತನನ್ನು ಠಾಣೆಗೆ ಕರೆಸಿ ಕಂಬಿ ಹಿಂದೆ ಕೂರಿಸಿದ್ದಾರೆ. 

ರಾಜೀವ್ ಬಂಧಿತ ವ್ಯಕ್ತಿ. ಈತ ಭಾರಿ ವೈರಲ್ ಆಗಿರುವ ವಿಡಿಯೋದಲ್ಲಿ ತನ್ನ ಚೊಚ್ಚಲ ಚಿತ್ರ ಫೂಲ್ ಔರ್ ಕಾಂತೆ (1991) ನಲ್ಲಿ ನಟ ಅಜಯ್ ದೇವಗನ್ (Ajay Devgn) ಮಾಡಿದ ಸಾಹಸವನ್ನು ಮರುಸೃಷ್ಟಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ರಾಜೀವ್ ಈ ಸ್ಟಂಟ್‌ಗಾಗಿ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿದ್ದ ಮತ್ತು ಜನನಿಬಿಡ ರಸ್ತೆಯಲ್ಲಿ ವೀಲ್ಹಿಂಗ್ ಪ್ರದರ್ಶಿಸುತ್ತಿದ್ದ. ಹಾಗೆ ಮಾಡುವ ಮೂಲಕ ಅವನು ತನ್ನ ಪ್ರಾಣವನ್ನು ಮಾತ್ರವಲ್ಲದೆ ರಸ್ತೆಯಲ್ಲಿರುವ ಇತರ ಜನರ ಪ್ರಾಣವನ್ನೂ ಅಪಾಯಕ್ಕೊಡಿದ್ದ. ಹೀಗಾಗಿ ಆತನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆತ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ ವೀಡಿಯೊ ಆಧರಿಸಿ, ಆತನನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ.