ಅಯೋಧ್ಯೆ ರಾಮ ಪ್ರತಿಷ್ಠಾಪನೆಗೆ ಜ.22ರ ಮಧ್ಯಾಹ್ನ 12.20ರ ಮುಹೂರ್ತ
ಅಯೋಧ್ಯೆಯ ರಾಮಮಂದಿರದಲ್ಲಿ ಜ.22ರಂದು ನಡೆಯಲಿರುವ ರಾಮಲಲ್ಲಾ ಪ್ರತಿಷ್ಠಾಪನೆಗೆ ಸಮಯದ ಮುಹೂರ್ತ ನಿಗದಿಪಡಿಸಲಾಗಿದೆ. ಅಂದು ಮಧ್ಯಾಹ್ನ 12.20ಕ್ಕೆ ರಾಮನ ಪ್ರತಿಷ್ಠಾಪನೆ ಮಾಡಲು ನಿರ್ಣಯಿಸಲಾಗಿದೆ.
ಅಯೋಧ್ಯೆ: ಅಯೋಧ್ಯೆಯ ರಾಮಮಂದಿರದಲ್ಲಿ ಜ.22ರಂದು ನಡೆಯಲಿರುವ ರಾಮಲಲ್ಲಾ ಪ್ರತಿಷ್ಠಾಪನೆಗೆ ಸಮಯದ ಮುಹೂರ್ತ ನಿಗದಿಪಡಿಸಲಾಗಿದೆ. ಅಂದು ಮಧ್ಯಾಹ್ನ 12.20ಕ್ಕೆ ರಾಮನ ಪ್ರತಿಷ್ಠಾಪನೆ ಮಾಡಲು ನಿರ್ಣಯಿಸಲಾಗಿದೆ. 2024ರ ಜನವರಿ 22ರಂದು ಅಭಿಜಿತ್ ಮುಹೂರ್ತದಲ್ಲಿ ಪ್ರಾಣ ಪ್ರತಿಷ್ಠೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ. ಈ ವೇಳೆ ಜಟಾಯು ಪ್ರತಿಮೆಯನ್ನೂ ಮೋದಿ ಅನಾವರಣ ಮಾಡಲಿದ್ದಾರೆ. ಪ್ರತಿಷ್ಠಾಪನೆಯ ಮಾರನೇ ದಿನ ಭಕ್ತರಿಗೆ ದೇವಾಲಯ ತೆರೆಯಲಾಗುತ್ತದೆ. ಈ ನಡುವೆ, ಪ್ರತಿಷ್ಠಾಪನೆ ವೇಳೆ ದೇಶಾದ್ಯಂತ ವಿವಿಧ ದೇಗುಲಗಳಲ್ಲಿ ಪೂಜೆ ಹಮ್ಮಿಕೊಳ್ಳಲಾಗುತ್ತದೆ ಎಂದು ರಾಮಮಂದಿರ ಟ್ರಸ್ಟ್ ಹೇಳಿದೆ.
ಅಯೋಧ್ಯೆ ರಾಮಭಕ್ತರಿಗೆ ಟೆಂಟ್ ಸಿಟಿ
ಅಯೋಧ್ಯೆ: ಶ್ರೀ ರಾಮ ಮಂದಿರದ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಗಮಿಸಲಿರುವ ಲಕ್ಷಾಂತರ ಭಕ್ತರಿಗೆ ವಾಸ್ತವ್ಯ ಸೇರಿದಂತೆ ಇತರ ಮೂಲ ಸೌಕರ್ಯಗಳನ್ನು ಒದಗಿಸುವ ಸಲುವಾಗಿ ಅಯೋಧ್ಯೆಯಲ್ಲಿ ಹಲವಾರು ಟೆಂಟ್ ಸಿಟಿಗಳನ್ನು ನಿರ್ಮಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮತ್ತು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು ಮಜಾ ಗುಪ್ತರ್ ಘಾಟ್, ಬಾಗ್ ಬಿಜೆಸಿ ಮತ್ತು ಬ್ರಹ್ಮಕುಂಡ್‌ನಂತಹ ಸ್ಥಳಗಳಲ್ಲಿ ಈ ಟೆಂಟ್ ನಗರಗಳನ್ನು ಸ್ಥಾಪಿಸುತ್ತಿದೆ. ಈ ಪೈಕಿ ಮಜಾ ಗುಪ್ತಾರ್ ಘಾಟ್‌ನಲ್ಲಿ 20 ಎಕರೆ ಪ್ರದೇಶದಲ್ಲಿ ಟೆಂಟ್ ನಿರ್ಮಿಸಲಾಗುತ್ತಿದ್ದು, ಇದು 20,000 ರಿಂದ 25,000 ಭಕ್ತರಿಗೆ ಸೌಕರ್ಯ ಒದಗಿಸಲಿದೆ.
Ayodhya ರಾಮಮಂದಿರದಲ್ಲಿ ಸಾಮಾಜಿಕ ಸೇವೆಯೇ ಹರಕೆ: ಪೇಜಾವರ ಶ್ರೀ
ಉಳಿದಂತೆ ಬ್ರಹ್ಮಕುಂಡ್ ಬಳಿ ಇರುವ ಟೆಂಟ್ ಸಿಟಿ 35 ದೊಡ್ಡ ಡೇರೆಗಳನ್ನು ಹೊಂದಿರಲಿದ್ದು ಇಲ್ಲಿ 30,000 ಭಕ್ತರು ಮತ್ತು ಬಾಗ್ ಬಿಜೆಸಿಯಲ್ಲಿ 25 ಎಕರೆ ಪ್ರದೇಶದ ಟೆಂಟ್ ಸಿಟಿಯಲ್ಲಿ 25,000 ಜನರಿಗೆ ಆಹಾರ ಸಂಗ್ರಹಣೆ, ಶೌಚಾಲಯ ಮತ್ತು ವೈದ್ಯಕೀಯ ಶಿಬಿರದ ವ್ಯವಸ್ಥೆಗಳಿರುತ್ತದೆ ಎಂದು ಪ್ರಾಧಿಕಾರದ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಜ.22ರಿಂದ 48 ದಿನ ಅಯೋಧ್ಯೆ ಬ್ರಹ್ಮಕಲಶೋತ್ಸವ: ದೇಶಾದ್ಯಂತ ಸಡಗರ ಆಚರಣೆಗೆ ಪೇಜಾವರ ಶ್ರೀ ಕರೆ