ಊಟಿಯಲ್ಲಿ ಮತ್ತೆ ಶೂನ್ಯ ಸಮೀಪಕ್ಕೆ ತಾಪಮಾನ: ಉತ್ತರ ಭಾರತದಲ್ಲೂ ಭಾರಿ ಚಳಿ
ನೀಲಗಿರಿ ಪರ್ವತ ಶ್ರೇಣಿಯಲ್ಲಿರುವ ಪ್ರಸಿದ್ಧ ಗಿರಿಧಾಮ ತಮಿಳುನಾಡಿನ ಉದಕಮಂಡಲದಲ್ಲಿ(ಊಟಿ) ತಾಪಮಾನ ತೀವ್ರವಾಗಿ ಕುಸಿದಿದ್ದು ಗುರುವಾರ 1 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಷ ದಾಖಲಾಗಿದೆ. ಮತ್ತೊಂದೆಡೆ ಉತ್ತರ ಭಾರತದ ಹಲವೆಡೆ ಮೈ ಕೊರೆವ ಚಳಿ ಆವರಿಸಿದೆ.
ಊಟಿ: ನೀಲಗಿರಿ ಪರ್ವತ ಶ್ರೇಣಿಯಲ್ಲಿರುವ ಪ್ರಸಿದ್ಧ ಗಿರಿಧಾಮ ತಮಿಳುನಾಡಿನ ಉದಕಮಂಡಲದಲ್ಲಿ(ಊಟಿ) ತಾಪಮಾನ ತೀವ್ರವಾಗಿ ಕುಸಿದಿದ್ದು ಗುರುವಾರ 1 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಷ ದಾಖಲಾಗಿದೆ. ಮತ್ತೊಂದೆಡೆ ಉತ್ತರ ಭಾರತದ ಹಲವೆಡೆ ಮೈ ಕೊರೆವ ಚಳಿ ಆವರಿಸಿದೆ.
ಜಮ್ಮು ಕಾಶ್ಮೀರದಲ್ಲಿ ಹಲವು ಕಡೆ ತಾಪಮಾನ ಶೂನ್ಯಕ್ಕಿಂತ ಕೆಳಮಟ್ಟಕ್ಕೆ ಕುಸಿದಿದ್ದು, ಪಹಲ್ಗಾಂನಲ್ಲಿ -5.8 ಡಿ.ಸೆ., ಶ್ರೀನಗರ, ಗುಲ್ಮಾರ್ಗ್, ಕುಪ್ವಾರಾ ಮುಂತಾದೆಡೆ -4.5 ಡಿಗ್ರಿ ತಾಪಮಾನ ದಾಖಲಾಗಿದೆ. ಹಿಮಾಚಲದಲ್ಲಿ 5 ಸೆಂ.ಮೀಗೂ ದಪ್ಪನಾದ ಮಂಜು ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ. ಹಾಗೆಯೇ ಹರ್ಯಾಣ, ಪಂಜಾಬ್, ರಾಜಸ್ಥಾನ, ದೆಹಲಿ ಮತ್ತು ಜಾರ್ಖಂಡ್‌ನ ಹಲವು ನಗರಗಳಲ್ಲೂ ದಟ್ಟ ಮಂಜು ಆವರಿಸಿದೆ.
ಈ ನಡುವೆ ದೆಹಲಿ ವಿಮಾನ ನಿಲ್ದಾಣದಲ್ಲಿ ದಟ್ಟ ಮಂಜು ಆವರಿಸಿದ ಪರಿಣಾಮ ಜೈಪುರಕ್ಕೆ ಎರಡು, ಮುಂಬೈ ಹಾಗೂ ಹೈದರಾಬಾದ್‌ಗೆ ತಲಾ 1 ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿತ್ತು. ಜಾರ್ಖಂಡ್ ರಾಜಧಾನಿ ರಾಂಚಿಯಲ್ಲೂ ಸಹ ದಟ್ಟ ಮಂಜು ಆವರಿಸಿದ ಪರಿಣಾಮ 14 ವಿಮಾನಗಳ ಸಂಚಾರವನ್ನು ರದ್ದುಪಡಿಸಲಾಗಿದೆ.
ವಾಹನ ಸವಾರರೇ ಎಚ್ಚರ: ಚಳಿಗಾಲದಲ್ಲೇ ರಸ್ತೆ ಅಪಘಾತ ಹೆಚ್ಚು..!
ಊಟಿಯಲ್ಲಿ ದಟ್ಟ ಮಂಜು ಆವರಿಸಿದ ಪರಿಣಾಮ ಶೂನ್ಯದತ್ತ ತಾಪಮಾನ ಇಳಿದಿದೆ. ಉತ್ತರ ಭಾರತದಲ್ಲೂ ದಟ್ಟ ಮಂಜು ಆವರಿಸಿದೆ. ಈ ನಡುವೆ ದೆಹಲಿಯಲ್ಲಿ ಹಲವು ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಜಾರ್ಖಂಡ್‌ನಲ್ಲಿ ಹಲವು ವಿಮಾನಗಳ ಸಂಚಾರ ರದ್ದುಪಡಿಸಲಾಗಿದೆ.
ಉತ್ತರದಲ್ಲಿ ತೀವ್ರ ಚಳಿ: ಕೆಲವೆಡೆ ಶೂನ್ಯ ತಾಪಮಾನ, ಜಮ್ಮುನಲ್ಲಿ 2.2 ಡಿಗ್ರಿ