ಉತ್ತರದಲ್ಲಿ ತೀವ್ರ ಚಳಿ: ಕೆಲವೆಡೆ ಶೂನ್ಯ ತಾಪಮಾನ, ಜಮ್ಮುನಲ್ಲಿ 2.2 ಡಿಗ್ರಿ
ಈ ಬಾರಿಯ ಚಳಿಗಾಲದಲ್ಲಿ ತೀವ್ರತರವಾದ ಶೀತ ಗಾಳಿ, ದಟ್ಟ ಮಂಜು ಮತ್ತು ಚಳಿಗೆ ಮತ್ತೆ ಉತ್ತರ ಭಾರತ ತತ್ತರಿಸಿ ಹೋಗಿದೆ. ಕಾಶ್ಮೀರದಲ್ಲಿ ತಾಪಮಾನ ಮೈನಸ್ ಇದ್ದರೆ, ರಾಜಧಾನಿ ದೆಹಲಿ ಸೇರಿದಂತೆ ಉತ್ತರದ ಅನೇಕ ರಾಜ್ಯಗಳಲ್ಲಿ ತಾಪಮಾನ ತೀವ್ರ ಕುಸಿತಗೊಂಡಿದೆ.
ನವದೆಹಲಿ: ಈ ಬಾರಿಯ ಚಳಿಗಾಲದಲ್ಲಿ ತೀವ್ರತರವಾದ ಶೀತ ಗಾಳಿ, ದಟ್ಟ ಮಂಜು ಮತ್ತು ಚಳಿಗೆ ಮತ್ತೆ ಉತ್ತರ ಭಾರತ ತತ್ತರಿಸಿ ಹೋಗಿದೆ. ಕಾಶ್ಮೀರದಲ್ಲಿ ತಾಪಮಾನ ಮೈನಸ್ ಇದ್ದರೆ, ರಾಜಧಾನಿ ದೆಹಲಿ ಸೇರಿದಂತೆ ಉತ್ತರದ ಅನೇಕ ರಾಜ್ಯಗಳಲ್ಲಿ ತಾಪಮಾನ ತೀವ್ರ ಕುಸಿತಗೊಂಡಿದ್ದು, ಮಂಜಿನಿಂದ ಗೋಚರತೆ ಪ್ರಮಾಣವೂ ಕುಸಿಯುತ್ತಿದ್ದು ಹಲವೆಡೆ ತಾಪಮಾನ ತೀವ್ರ ಕನಿಷ್ಟ ಮಟ್ಟಕ್ಕೆ ಕುಸಿದಿದೆ.
ರಾಜಸ್ಥಾನದ ಹಲವು ಪ್ರದೇಶಗಳಲ್ಲಿ ದಟ್ಟು ಮಂಜು ಆವರಿಸಿದ್ದು ಅಲ್ವರ್‌ನಲ್ಲಿ 3.8 ಸೆಲ್ಸಿಯಸ್‌ನಷ್ಟು ಕನಿಷ್ಠ ತಾಪಮಾನ ದಾಖಲಾಗಿದೆ. ಉಳಿದಂತೆ ಜೈಪುರದಲ್ಲಿ 7.8. ದಿಲ್ಲಿಯಲ್ಲಿ 8.2 ಮತ್ತು ಕರೌಲಿಯಲ್ಲಿ 5.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಕಾಶ್ಮೀರದಲ್ಲೂ ಕೊರೆಯುವ ಚಳಿ ಮುಂದುವರೆದಿದ್ದು ಹಿಮಪಾತ ಆಗುತ್ತಿದೆಯಲ್ಲದೇ ನೀರುಘನೀಕರಣಗೊಳ್ಳುತ್ತಿದೆ.
ಕರ್ನಾಟಕ ಸೇರಿ 7 ರಾಜ್ಯದಲ್ಲಿ ಮುಂದಿನ 2 ದಿನ ಮಳೆ ಸಾಧ್ಯತೆ, ಕೆಲವೆಡೆ ಅತೀವ ಚಳಿ!
ರಾಜಧಾನಿ ಶ್ರೀನಗರದಲ್ಲಿ ಶನಿವಾರ -5.6 ಡಿಗ್ರಿ ಸೆಲ್ಸಿಯಸ್ ಮತ್ತು ಕೊಕ ರ್ನಾಗ್‌ನಲ್ಲಿ -2.7 ಡಿಗ್ರಿ ಸೆಲ್ಸಿಯಸ್ ಕನಿಷ್ಟ ತಾಪಮಾನ ದಾಖಲಾಗಿದೆ. ಅಲ್ಲದೇ ಜಮ್ಮು ವಿನ ಬನಿಹಾಲ್‌ನಲ್ಲಿ -2.2 ಡಿಗ್ರಿ ಸೆಲ್ಸಿಯಸ್ ನಷ್ಟು ಕನಿಷ್ಟ ತಾಪಮಾನ ದಾಖಲಾಗಿದೆ. ಇನ್ನು ಪಂಜಾಬ್‌ನ ಅಮೃತಸರದಲ್ಲಿ 5.8 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪವಿದೆ.
ಚಳಿ: ದೆಹಲಿ, ಪಂಜಾಬ್, ಚಂಡೀಗಢದಲ್ಲಿ ಶಾಲಾ ರಜೆ 1 ವಾರ ವಿಸ್ತರಣೆ
ರಾಜಧಾನಿ ದೆಹಲಿ, ಚಂಡೀಗಢ ಹಾಗೂ ಪಂಜಾಬ್ ಈ ಬಾರಿಯ ಶೀತಗಾಳಿಯಿಂದ ತೀವ್ರ ಕೊರೆವ ಚಳಿಗೆ ಸಾಕ್ಷಿಯಾಗಿವೆ. ಹೀಗಾಗಿ ಚಂಡೀಗಢದಲ್ಲಿ 8ನೇಕ್ಲಾಸ್‌ವರೆಗಿನ ಶಾಲೆಗಳನ್ನು ಜ.13 ರವರೆಗೆ, ಪಂಜಾಬ್‌ನಲ್ಲಿ 1ರಿಂದ 10ನೇ ಕ್ಲಾಸ್‌ವರೆಗಿನ ಶಾಲೆಯನ್ನು ಜ.14 ರವರೆಗೆ ರಜೆ ನೀಡಲಾಗಿದೆ. ದಿಲ್ಲಿಯಲ್ಲಿ1 ರಿಂದ 5ನೇ ತರಗತಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ನೀಡಲಾಗಿರುವ ಚಳಿಗಾಲದ ರಜೆ ಅವಧಿಯನ್ನು ಜ.12ರವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಚಳಿಗಾಲದಲ್ಲಿ ಬೆಲ್ಲಿ ಫ್ಯಾಟ್ ಕಡಿಮೆ ಮಾಡ್ಕೊಳ್ಳೋಕೆ ಈ ಐದು ಪಾನೀಯ ಕುಡೀರಿ ಸಾಕು