Asianet Suvarna News Asianet Suvarna News

ಉಕ್ರೇನ್‌ನಲ್ಲಿ ಸಿಕ್ಕಾಕೊಂಡಿದ್ದಾನೆ ಮಗ, ಈ ಬಾರಿ 1400 ಕಿ. ಮೀ ಸ್ಕೂಟರ್ ಓಡಿಸಿ ಹೋಗಲು ಸಾಧ್ಯವಿಲ್ಲ ಈ ತಾಯಿಗೆ!

* ಉಕ್ರೇನ್‌ನಲ್ಲಿ ಸಿಕ್ಕಾಕೊಂಡಿರುವ ಭಾರತೀಯ ವಿದ್ಯಾರ್ಥಿಗಳು

* ಭಾರತೀಯರ ಸ್ಥಳಾಂತರಕ್ಕೆ ಕೇಂದ್ರದಿಂದ ಆಪರೇಷನ್ ಗಂಗಾ

* ಲಾಕ್ಡೌ‌ನ್ ವೇಳೆ ಮಗನ ಸುರಕ್ಷತೆಗಾಗಿ 1400 ಕಿ. ಮೀ ಸ್ಕೂಟರ್ ಓಡಿಸಿದ್ದ ತಾಯಿ ಇಂದು ಕಂಗಾಲು

Telangana woman who covered 1400 kms to rescue stranded son worried about ward stuck in Ukraine pod
Author
Bangalore, First Published Mar 4, 2022, 11:43 AM IST | Last Updated Mar 4, 2022, 11:47 AM IST

ಕೀವ್(ಮಾ.04): ಉಕ್ರೇನ್ ಮೇಲಿನ ರಷ್ಯಾ ದಾಳಿ ಇಡೀ ವಿಶ್ವವನ್ನೇ ಕಂಗಾಲುಗೊಳಿಸಿದೆ. ಒಂದೆಡೆ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗುತ್ತಿರುವ ಆತಂಕವಾದರೆ, ಇತ್ತ ತಮ್ಮ ಮಕ್ಕಳು ಸುರಕ್ಷಿತವಾಗಿ ತಮ್ಮ ಮಡಿಲು ಸೇರಲಿ ಎಂಬ ಪ್ರಾರ್ಥನೆ. ಇವೆಲ್ಲದರ ನಡುವೆ ಭಾರತ ಉಕ್ರೇನ್‌ನಲ್ಲಿ ಸಿಕ್ಕಾಖೊಂಡಿರುವ ತನ್ನ ನಾಗರಿಕರ ಸ್ಥಳಾಂತರಕ್ಕೆ ಆಪರೇಷನ್ ಗಮಗಾ ಎಂಬ ಕಾರ್ಯಾಚರಣೆ ಆರಂಭಿಸಿದ್ದು, ಈಗಾಗಲೇ ಇದರಡಿ ಅನೇಕ ಭಾರತೀಯರು ತಮ್ಮ ತಾಯ್ನಾಡು ಸೇರಿದ್ದಾರೆ. ಏರ್‌ ಇಂಡಿಯಾ ವಿಮಾನಗಳ ಮೂಲಕ ಆರಂಭವಾಗಿದ್ದ ಈ ಏರ್‌ಲಿಫ್‌ಟ್ಗೆ ಈಗ ಭಾರತೀಯ ವಾಯುಸೇನೆಯ ಬಲವೂ ಸಿಕ್ಕಿದ್ದು, ಕಾರ್ಯಾಚರಣೆ ಮತ್ತಷ್ಟು ವೇಗವಾಗಿ ಸಾಗುತ್ತಿದೆ. ಆದರೀಗ ಇವೆಲ್ಲದರ ನಡುವೆ ಉಕ್ರೇನ್‌ನಲ್ಲಿರುವ ತನ್ನ ಮಗನ ಸ್ಥಿತಿ ಬಗ್ಗೆ ಚಿಂತಿಸಿ ಕಂಗಾಲಾಗಿರೆಉವ ತಾಯಿಯ ಕತೆಯೊಂದು ವೈರಲ್ ಆಗಿದೆ.  

ಮಗನಗಾಗಿ 1400 ಕಿ. ಮೀ ಸ್ಕೂಟರ್ ಓಡಿಸಿದ್ದರು

ಕೊರೋನಾ ವೈರಸ್ ಭಾರತಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಅದನ್ನು ನಿಯಂತ್ರಿಸುವ ಸಲುವಾಗಿ ದೇಶಾದ್ಯಂತ ಲಾಕ್‌ಡೌನ್ ಘೋಷಿಸಲಾಗಿತ್ತುಯ. ಏಕಾಏಕಿ ಘೋಷಣೆಯಾದ ಈ ನಿರ್ಬಂಧದಿಂದ ಅನೇಕರು ಅತಂತ್ರರಾಗಿದ್ದರು. ಜನರು ತಮ್ಮ ಊರು ಸೇರಲು ಕಾಲ್ನಡಿಗೆ ಮೂಲಕವೇ ಪ್ರಯಾಣ ಆರಂಭಿಸಿದ್ದರು. ಹೀಗಿರುವಾಗ ಮಗನನ್ನು ಸುರಕ್ಷಿತವಾಗಿ ಮನೆಗೆ ಕರೆತರುವ ಸಲುವಾಗಿ ಒಬ್ಬಂಟಿ ತಾಯಿಯೊಬ್ಬಳು 1400 ಕಿ. ಮೀ ದೂರ ಸ್ಕೂಟರ್‌ ಓಡಿಸಿದ್ದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಇದೇ ತಾಯಿ ಉಕ್ರೇನ್‌ನಲ್ಲಿ  ಸಿಕ್ಕಾಕೊಂಡ ತನ್ನ 19 ವರ್ಷದ ಮಗ ಸುರಕ್ಷಿತವಾಗಿ ಮರಳಿ ಬರಲಿ ಎಂದು ಪ್ರಾರ್ಥಿಸುತ್ತಿದ್ದಾಳೆ. 

Opearation Ganga: ಪ್ರಧಾನಿ ಮೋದಿ ಭಾರತದ ಭರವಸೆಯ ಸೇತು: ಸಚಿವ ಗೋಯಲ್‌ ಪೋಸ್ಟ್‌

ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿರುವ ರಜಿಯಾ ಬೇಗಂ, ಪೂರ್ವ ಯುರೋಪಿಯನ್ ರಾಷ್ಟ್ರದ ಸುಮಿಯಲ್ಲಿ ಎಂಬಿಬಿಎಸ್ ಮೊದಲ ವರ್ಷ ವ್ಯಾಸಂಗ ಮಾಡುತ್ತಿರುವ ತನ್ನ ಮಗ ನಿಜಾಮುದ್ದೀನ್ ಅಮಾನ್ ಸುರಕ್ಷಿತವಾಗಿ ಮರಳಲಿ ಎಂದಷ್ಟೇ ಬೇಡಿಕೊಳ್ಳುತ್ತಿದ್ದಾರೆ. ಇನ್ನು ಸುಮಿ ರಷ್ಯಾದ ಗಡಿಯ ಸಮೀಪದಲ್ಲಿದೆ ಮತ್ತು ಹೆಚ್ಚಿನ ಭಾರತೀಯ ವಿದ್ಯಾರ್ಥಿಗಳು ಸುಮಿ ರಾಜ್ಯ ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ಸೇರಿದ್ದಾರೆ ಎಂಬುವುದು ಉಲ್ಲೇಖನೀಯ.

ರಷ್ಯಾ ಮತ್ತು ಉಕ್ರೇನ್ ನಡುವಿನ ಉದ್ವಿಗ್ನ ನಿಲುವಿನ ಮಧ್ಯೆ ತನ್ನ ಮಗ ಮತ್ತು ಇತರ ಭಾರತೀಯ ವಿದ್ಯಾರ್ಥಿಗಳು ಸುರಕ್ಷಿತವಾಗಿ ಮರಳಲು ಬೇಕಾದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್, ರಾಜ್ಯ ಗೃಹ ಸಚಿವ ಮೊಹಮ್ಮದ್ ಮಹಮೂದ್ ಅಲಿ ಅವರನ್ನು ಒತ್ತಾಯಿಸಿದ್ದಾರೆ. 

ಪ್ರಸ್ತುತ ನಿಜಾಮುದ್ದೀನ್ ಅಮಾನ್ ಬಂಕರ್‌ನಲ್ಲಿ ಉಳಿದುಕೊಂಡಿದ್ದಾರೆ. ಆತ ತನ್ನ ತಾಯಿ ಜೊತೆ ಫೋನ್‌ನಲ್ಲಿ ಸಂವಹನ ನಡೆಸುತ್ತಿದ್ದಾರೆ. ನಾನು ಕ್ಷೇಮವಾಗಿದ್ದೇನೆ, ಸುರಕ್ಷಿತವಾಗಿದ್ದೇನೆ. ನನ್ನ ಬಗ್ಗೆ ಚಿಂತಿಸಬೇಡ ಎಂದು ಮಗ ತಿಳಿಸಿರುವುದಾಗಿ ರಜಿಯಾ ಹೇಳಿದ್ದಾರೆ. ಆದರೆ ಮಗನಿರುವ ಪ್ರದೇಶದಲ್ಲಿ ಯಾವುದೇ ಸಾರಿಗೆ ಸಂಪರ್ಕ ಸಿಗುತ್ತಿಲ್ಲ ಎಂಬುವುದು ರಜಿಯಾರ ಆತಂಕಕ್ಕೆ ಕಾರಣವಾಗಿದೆ. 

ಆಪರೇಷನ್ ಗಂಗಾ’ದಡಿ, ಮಗ ಶೀಘ್ರದಲ್ಲೇ ಹಿಂತಿರುಗುತ್ತಾನೆ

ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ರಕ್ಷಿಸಲು ಸರ್ಕಾರ 'ಆಪರೇಷನ್ ಗಂಗಾ' ನಡೆಸುತ್ತಿದೆ. ಪೋಲೆಂಡ್, ರೊಮೇನಿಯಾ ಮತ್ತು ಹಂಗೇರಿ ಮೂಲಕ ಭಾರತೀಯರನ್ನು ಕರೆತರಲಾಗುತ್ತಿದೆ. ಹೀಗಿರುವಾಗ ಶೀಘ್ರದಲ್ಲೇ ತಮ್ಮ ಮಗ ನಿಜಾಮುದ್ದೀನ್ ಅಮಾನ್ ತಾಯ್ನಾಡಿಗೆ ಮರಳುತ್ತಾನೆ, ತನ್ನ ಮಡಿಲು ಸೇರುತ್ತಾನೆ ಎಂದು ರಜಿಯಾ ಬೇಗಂ ಭರವಸೆ ವ್ಯಕ್ತಪಡಿಸಿದ್ದಾರೆ. 

ಮಿಲಿಟರಿ ಸಮವಸ್ತ್ರದ ಮೇಲೆ ಸುಖನಿದ್ದೆಗೆ ಜಾರಿದ ಕಂದ... ಫೋಟೋ ಹೇಳುತ್ತಿದೆ ಯುದ್ಧದ ದುರಂತ ಕತೆ

ಎರಡು ವರ್ಷಗಳ ಹಿಂದೆ, ಕೋವಿಡ್-19 ಹರಡುವುದನ್ನು ತಡೆಯಲು ರಾಷ್ಟ್ರವ್ಯಾಪಿ ಲಾಕ್‌ಡೌನ್ ಹೇರಿದ ಸಂದರ್ಭದಲ್ಲಿ ನೆರೆಯ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಸಿಕ್ಕಿಬಿದ್ದ ತನ್ನ ಮಗನನ್ನು ಮರಳಿ ಕರೆತರಲು ರಜಿಯಾ ಬೇಗಂ ದೀರ್ಘ ಮತ್ತು ಪ್ರಯಾಸಕರ ಪ್ರಯಾಣವನ್ನು ಕೈಗೊಂಡರು. ಸ್ಥಳೀಯ ಪೋಲೀಸರ ಅನುಮತಿಯೊಂದಿಗೆ ಅವರು ನೆಲ್ಲೂರಿಗೆ ಏಕಾಂಗಿಯಾಗಿ ಸ್ಕೂಟರ್ ಸವಾರಿ ಮಾಡಿ ತನ್ನ ಮಗನೊಂದಿಗೆ ಹಿಂದಿರುಗಿದ್ದರು. ಆಕೆಯ ಮಮತೆ ಅಂದು ಇಡೀ ದೇಶವನ್ನು ಭಾವುಕಗೊಳಿಸಿತ್ತು. ಆದರೆ ಇಂದು ಅದೇ ತಾಯಿ ಸಂಕಷ್ಟದಲ್ಲಿರುವ ತನ್ನ ಮಗನ ಪರಿಸ್ಥಿತಿ ಕಂಡು ಕಣ್ಣೀರಿಡುತ್ತಿದ್ದಾರೆ. ಬಹುಶಃ ಉಕ್ರೇನ್‌ಗೆ ಹೋಗಿ ಮಗನನ್ನು ಕಾಫಾಡುವ ಅವಕಾಶವಿದ್ದಿದ್ದರೆ ಈ ತಾಯಿ ಒಂದು ಕ್ಷಣವೂ ಯೋಚಿಸದರೆ ಮಗನನ್ನು ಕರೆ ತರುತ್ತಿದ್ದಳೇನೋ. 

Latest Videos
Follow Us:
Download App:
  • android
  • ios