9ನೇ ದಿನಕ್ಕೆ ಕಾಲಿಟ್ಟ ರಷ್ಯಾ ಉಕ್ರೇನ್ ನಡುವಿನ ಯುದ್ಧ ಮಿಲಿಟರಿ ಸಮವಸ್ತ್ರದ ಮೇಲೆ ಸುಖನಿದ್ದೆಗೆ ಜಾರಿದ ಕಂದ ಫೋಟೋ ಹೇಳುತ್ತಿದೆ ಯುದ್ಧದ ಭಯಾನಕ ಪರಿಣಾಮ

ರಷ್ಯಾ-ಉಕ್ರೇನ್‌ ಯುದ್ಧದ ನಡುವೆ ಮಿಲಿಟರಿ ಸಮವಸ್ತ್ರದ ಮೇಲೆ ಪುಟ್ಟ ಕಂದನೋರ್ವ ಶಾಂತಿಯುತವಾಗಿ ಮಲಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಲ್ಲು ಹೃದಯದವರನ್ನು ಕರಗಿಸುವಂತಿರುವ ಈ ಫೋಟೋ ಉಕ್ರೇನ್‌ ರಷ್ಯಾ ಯುದ್ಧದ ಭಯಾನಕ ಪರಿಣಾಮವನ್ನು ಜಗತ್ತಿನ ಮುಂದೆ ತೆರೆದಿಡುತ್ತಿದೆ. ಏನು ಮಾಡದ ತಪ್ಪಿಗೆ ಪುಟ್ಟ ಮಗುವೊಂದು ತನ್ನ ತಂದೆಯನ್ನು ಕಳೆದುಕೊಂಡು ತಬ್ಬಲಿಯಾಗುತ್ತಿರುವುದನ್ನು ಸಾಂಕೇತಿಕವಾಗಿ ಅಭಿವ್ಯಕ್ತಿಸುವ ಚಿತ್ರ ಇದಾಗಿದೆ. ಇದೊಂದು ಸಣ್ಣ ಉದಾಹರಣೆಯಷ್ಟೇ. ಈ ಯುದ್ಧದ ಪರಿಣಾಮವನ್ನು ಊಹಿಸಲು ಸಾಧ್ಯವಿಲ್ಲ. 

ರಷ್ಯಾದ ಆಕ್ರಮಣದ ನಡುವೆ ಮಿಲಿಟರಿ ಸಮವಸ್ತ್ರದ (military uniform) ಮೇಲೆ ಮಗು ವಿಶ್ರಾಂತಿ ಪಡೆಯುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ನೋಡುಗರ ಕಣ್ಣನ್ನು ತೇವಗೊಳಿಸುವ ಈ ಫೋಟೋದಲ್ಲಿ ಉಕ್ರೇನಿಯನ್ ಮಗುವೊಂದು ತನ್ನ ಪೋಷಕರ ಸಮವಸ್ತ್ರದ ಮೇಲೆ ಶಾಂತಿಯುತವಾಗಿ ಮಲಗಿರುವುದನ್ನು ತೋರಿಸುತ್ತಿದೆ. ಈ ಫೋಟೋ ವೈರಲ್ ಆಗಿದ್ದು, 'ಗುಡ್ ಬೈ ನನ್ನ ಪುಟ್ಟ ಕಂದ, ಬದುಕುಳಿದು ಮತ್ತೆ ನಿನ್ನ ನೋಡುವ ಭರವಸೆ ಇಟ್ಟುಕೊಳ್ಳುವೆ' 'ಗುಡ್ ಬೈ ಮೈ ಲಿಟಲ್ ಬಾಯ್..ಐ ಹೋಪ್ ಸೀ ಯು ಇನ್ ಇನ್ ಟೈಮ್ ಐ ಸರ್ವೈವ್' ಎಂಬ ಶೀರ್ಷಿಕೆಯೊಂದಿಗೆ ಈ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

Scroll to load tweet…

ಈ ಫೋಟೋ ಟ್ವಿಟರ್‌ನಲ್ಲಿ ವೈರಲ್ ಆಗಿದ್ದು, 46,000 ಕ್ಕೂ ಹೆಚ್ಚು ಜನ ಇದನ್ನು ಲೈಕ್ ಮಾಡಿದ್ದಾರೆ ಜೊತೆಗೆ 4,100 ಕ್ಕೂ ಹೆಚ್ಚು ಬಾರಿ ಈ ಫೋಟೋ ರೀಟ್ವೀಟ್‌ ಆಗಿದೆ . ಅಲ್ಲದೇ ಇತರ ಸಾಮಾಜಿಕ ಜಾಲತಾಣಗಳಾದ ಇನ್ಸ್ಟಾಗ್ರಾಮ್ (Instagram) ಫೇಸ್‌ಬುಕ್‌(Facebook) ಮತ್ತು ರೆಡ್ಡಿಟ್‌ (Reddit)ನಲ್ಲಿಯೂ ವ್ಯಾಪಕವಾಗಿ ವೈರಲ್‌ ಆಗುತ್ತಿದ್ದು, ಪುಟ್ಟ ಕಂದನಿಗಾಗಿ ಹಾಗೂ ಯುದ್ಧದ ಭೀಕರ ಪರಿಣಾಮಗಳನ್ನು ಎದುರಿಸುತ್ತಿರುವ ಮಕ್ಕಳಿಗಾಗಿ ಜನ ಮರುಗುತ್ತಿದ್ದಾರೆ. ಒಬ್ಬ ಬಳಕೆದಾರ, 'ಇದು ನಾನು ನೋಡಿದ ಅತ್ಯಂತ ಹೃದಯವಿದ್ರಾವಕ ಟ್ವೀಟ್' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹೀಗೆ ನೂರಾರು ಮಂದಿ ಭಾವುಕರಾಗಿ ಈ ಫೋಟೋಗೆ ಪ್ರತಿಕ್ರಿಯಿಸಿದ್ದು, ಒಂದು ಫೋಟೋ ಸಾವಿರ ಕತೆ ಹೇಳುವಂತಿದೆ.

Russia Ukraine War: ಸೆರೆಸಿಕ್ಕ ರಷ್ಯಾ ಯೋಧನಿಗೆ ಉಕ್ರೇನಿಗಳಿಂದ ಟೀ, ಬನ್‌!

ರಷ್ಯಾ ಉಕ್ರೇನ್‌ ಮೇಲೆ ಆಕ್ರಮಣ ಆರಂಭಿಸಿ ಇಂದಿಗೆ 9ನೇ ದಿನ ಕಳೆದಿದೆ. ಅಲ್ಲದೇ ರಷ್ಯಾ ತನ್ನ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸುತ್ತಲೇ ಇದೆ. ಈ ನಡುವೆ ಕಳೆದ ಕೆಲ ದಿನಗಳಿಂದ ಅಮೆರಿಕ ಸೇರಿದಂತೆ ನ್ಯಾಟೋ ದೇಶಗಳಿಗೆ ಹಲವು ಬಾರಿ ಪರಮಾಣು ದಾಳಿಯ ಪರೋಕ್ಷ ಎಚ್ಚರಿಕೆ ನೀಡುತ್ತಲೇ ಬಂದಿದ್ದ ರಷ್ಯಾ, ಇದೀಗ ಪೂರ್ಣ ಉಲ್ಟಾ ಹೊಡೆದಿದೆ. ಪರಮಾಣು ದಾಳಿಯ ವಿಷಯ ಗಿರಕಿ ಹೊಡೆಯುತ್ತಿರುವುದು ಪಾಶ್ಚಾತ್ಯ ದೇಶಗಳ ತಲೆಯಲ್ಲೇ ಹೊರತೂ ನಮ್ಮಲ್ಲಲ್ಲ ಎಂದಿದೆ. ಈ ಮೂಲಕ ಪರಮಾಣು ಯುದ್ಧದ ಭೀತಿಯನ್ನು ಸ್ವಲ್ಪ ತಿಳಿಗೊಳಿಸುವ ಯತ್ನ ಮಾಡಿದೆ. ಗುರುವಾರ ದೇಶಿ ಮತ್ತು ವಿದೇಶಿ ಪತ್ರಕರ್ತರೊಂದಿಗೆ ಸಂವಾದ ನಡೆಸಿದ ರಷ್ಯಾದ ವಿದೇಶಾಂಗ ಸಚಿವ ಸೆರ್ಗೇಯ್‌ ಲಾವ್ರೋವ್‌(Sergei Lavrov) ಈ ವಿಚಾರ ಸ್ಪಷ್ಟಪಡಿಸಿದರು. ಆದರೆ ಉಕ್ರೇನ್‌ಗೆ ನ್ಯಾಟೋ ಸೇರಿದಂತೆ ಯಾವುದೇ ದೇಶಗಳು ಪರಮಾಣು ಅಸ್ತ್ರವನ್ನು ನೀಡಿದರೆ ಸುಮ್ಮನಿರುವುದಿಲ್ಲ ಎಂದು ಪರೋಕ್ಷವಾಗಿ ಎಚ್ಚರಿಸಿದರು.

Russia Ukraine War: ರಷ್ಯಾನೋ? ಉಕ್ರೇನೋ? ನಿಲುವು ಸ್ಪಷ್ಟಪಡಿಸಿ: ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಅಮೆರಿಕ ಆಕ್ರೋಶ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಕಳೆದ ಭಾನುವಾರ ಅಣ್ವಸ್ತ್ರ ಪಡೆಗಳಿಗೆ ಸನ್ನದ್ಧ ಸ್ಥಿತಿಯಲ್ಲಿ ಇರುವಂತೆ ಸೂಚಿಸಿದ್ದರು. ಅದರ ಬೆನ್ನಲ್ಲೇ ರಷ್ಯಾದ ಪರಮಾಣು ಪಡೆಯು ಸತತವಾಗಿ ಸಮರಾಭ್ಯಾಸ ನಡೆಸುತ್ತಲೇ ಇದೆ.