Asianet Suvarna News Asianet Suvarna News

ತೆಲಂಗಾಣ ‘ಶಾಸಕರ ಆಪರೇಷನ್‌’ ಪ್ರಕರಣ ಸಿಬಿಐಗೆ: ಕೆಸಿಆರ್‌ಗೆ ಹಿನ್ನೆಡೆ..!

ತೆಲಂಗಾಣ ಆಪರೇಶನ್‌ ಕಮಲ ಆರೋಪ ಕೇಸು ತನಿಖೆ ಸಿಬಿಐಗೆ ವಹಿಸಬೇಕೆಂದು ತೆಲಂಗಾಣ ಹೈಕೋರ್ಟ್‌ ಮಹತ್ವದ ಆದೇಶ ನೀಡಿದೆ. ಈ ಮೂಲಕ ರಾಜ್ಯ ಎಸ್‌ಐಟಿ ತನಿಖೆಗೆ ಬ್ರೇಕ್‌ ಹಾಕಿದೆ. ಇದರಿಂದ ಮುಖ್ಯಮಂತ್ರಿ ಕೆಸಿಆರ್‌ಗೆ ಭಾರಿ ಹಿನ್ನಡೆಯಾಗಿದೆ. 

telangana mla poaching case transferred to cbi by high court ash
Author
First Published Dec 27, 2022, 7:48 AM IST

ಹೈದರಾಬಾದ್‌: ತೆಲಂಗಾಣ (Telangana) ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ (K. Chandrasekhar Rao) ಅವರ ಬಿಆರ್‌ಎಸ್‌ (BRS) ಪಕ್ಷದ ಶಾಸಕರನ್ನು ಬಿಜೆಪಿಗರು (BJP) ಖರೀದಿಸಲು ಯತ್ನಿಸಿದ್ದರು ಎನ್ನಲಾದ ‘ಆಪರೇಶನ್‌ ಕಮಲ’ (Operation Lotus) ಆರೋಪದ ಪ್ರಕರಣದ ತನಿಖೆಯನ್ನು ಸಿಬಿಐಗೆ (CBI) ವಹಿಸಿ ತೆಲಂಗಾಣ ಹೈಕೋರ್ಟ್‌ (Telangana High Court) ಮಹತ್ವದ ಆದೇಶ ಹೊರಡಿಸಿದೆ. ಇದರಿಂದಾಗಿ ಕೆಸಿಆರ್‌ಗೆ ಭಾರಿ ಹಿನ್ನಡೆಯಾಗಿದೆ. ಹೈಕೋರ್ಟ್‌ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ, ಈವರೆಗೆ ಪ್ರಕರಣದ ತನಿಖೆ ನಡೆಸುತ್ತಿದ್ದ ವಿಶೇಷ ತನಿಖಾ ತಂಡ (Special Investigation Team) (ಎಸ್‌ಐಟಿ)  (SIT) ಹೇಳಿದೆ. ಆದರೆ ಹೈಕೋರ್ಟ್‌ ಆದೇಶವನ್ನು ಬಿಜೆಪಿ ಸ್ವಾಗತಿಸಿದೆ.

ಬಿಜೆಪಿ ಏಜೆಂಟರು ಎನ್ನಲಾದ ಮೂವರು ತಮ್ಮನ್ನು ಭೇಟಿ ಮಾಡಿ, 4 ಬಿಆರ್‌ಎಸ್‌ (ಅಂದಿನ ಟಿಆರ್‌ಎಸ್‌) ಶಾಸಕರು ಬಿಜೆಪಿ ಸೇರಿದರೆ 250 ಕೋಟಿ ರೂ. ನೀಡುವುದಾಗಿ ಆಮಿಷ ಒಡ್ಡಿದ್ದರು ಎಂದು ಬಿಆರ್‌ಎಸ್‌ ಶಾಸಕ ಪೈಲಟ್‌ ರೋಹಿತ್‌ ರೆಡ್ಡಿ ಕೆಲವು ತಿಂಗಳ ಹಿಂದೆ ದೂರು ನೀಡಿದ್ದರು. ಜತೆಗೆ ‘ಆಮಿಷದ’ ವಿಡಿಯೋವನ್ನು ಬಹಿರಂಗಪಡಿಸಿದ್ದರು. ಬಳಿಕ ತೆಲಂಗಾಣ ಸರ್ಕಾರ, ಇದರ ತನಿಖೆಗೆ ಎಸ್‌ಐಟಿ ರಚಿಸಿತ್ತು. ಆಗ ಆಮಿಷ ಒಡ್ಡಿದ್ದರು ಎನ್ನಲಾದ ಮೂವರನ್ನೂ ಎಸ್‌ಐಟಿ ಬಂಧಿಸಿತ್ತು. ಬಂಧಿತರು ನೀಡಿದ ಹೇಳಿಕೆ ಆಧರಿಸಿ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಸೇರಿದಂತೆ ಇನ್ನೂ ನಾಲ್ವರ ಮೇಲೆ ಪ್ರಕರಣ ದಾಖಲಿಸಿತ್ತು.

ಇದನ್ನು ಓದಿ: ‘ಆಪರೇಷನ್‌ ಕಮಲ’ಕ್ಕೆ ಪುತ್ತೂರು ಲಿಂಕ್‌..! ತೆಲಂಗಾಣ ಪೊಲೀಸರಿಂದ ಶೋಧ ಕಾರ್ಯ

ಆದರೆ, ‘ಎಸ್‌ಐಟಿ ತನಿಖೆ ಬೇಡ. ಸಿಬಿಐ ತನಿಖೆ ಬೇಕು’ ಎಂದು ಆರೋಪಿಗಳು, ಬಿಜೆಪಿ ಹಾಗೂ ವಕೀಲರೊಬ್ಬರ ವತಿಯಿಂದ 5 ಅರ್ಜಿಗಳನ್ನು ಹೈಕೋರ್ಟ್‌ಗೆ ಸಲ್ಲಿಸಲಾಗಿತ್ತು. ಈ ಪೈಕಿ 4 ಅರ್ಜಿಗಳನ್ನು ಮಾನ್ಯ ಮಾಡಿರುವ ಹೈಕೋರ್ಟ್‌, ಸಿಬಿಐ ತನಿಖೆಗೆ ಆದೇಶಿಸಿದೆ ಹಾಗೂ ಕೂಡಲೇ ತನಿಖೆ ನಿಲ್ಲಿಸಿ ಎಂದು ಎಸ್‌ಐಟಿಗೆ ಸೂಚಿಸಿದೆ.

‘ಪ್ರಕರಣದ ಆರೋಪಿಗಳ ವಿರುದ್ಧದ ಟೇಪ್‌ಗಳು ತಮ್ಮ ಕಡೆ ಇವೆ ಎಂದು ಖುದ್ದು ಮುಖ್ಯಮಂತ್ರಿ ಕೆಸಿಆರ್‌ ಹೇಳಿದ್ದಾರೆ. ಹೀಗಿದ್ದಾಗ ಅವರ ಅಧೀನದಲ್ಲೇ ಬರುವ ಎಸ್‌ಐಟಿಯಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ’ ಎಂದು ಆರೋಪಿಗಳು ಹಾಗೂ ಬಿಜೆಪಿ ವಾದಿಸಿದ್ದರು. ಈ ವಾದಕ್ಕೆ ಕೋರ್ಟ್‌ ಮನ್ನಣೆ ನೀಡಿದೆ.

ಇದನ್ನೂ ಓದಿ: Telangana ಶಾಸಕರ ಖರೀದಿ ಯತ್ನ ಆರೋಪ: ಅಮಿತ್ ಶಾ ಬಂಧಿಸಿ ಎಂದ Manish Sisodia

ಎಸ್‌ಐಟಿ ನಿಷ್ಪಕ್ಷಪಾತ ತನಿಖೆ ನಡೆಸಲು ಸಾಧ್ಯವಿಲ್ಲ ಎಂಬುದು ನಮ್ಮ ವಾದವಾಗಿತ್ತು, ಎಂದು ಬಿಜೆಪಿ ನಾಯಕ ಮತ್ತು ವಕೀಲ ಎನ್ ರಾಮಚಂದರ್ ರಾವ್ ಅವರು ಹೈಕೋರ್ಟ್ ತೀರ್ಪನ್ನು ಸ್ವಾಗತಿಸಿ ಪ್ರತಿಕ್ರಿಯೆ ನೀಡಿದ್ದಾರೆ. "ಮುಖ್ಯಮಂತ್ರಿ ಅವರು ಸ್ಟಿಂಗ್ ಕಾರ್ಯಾಚರಣೆಯ ಭಾಗವಾಗಿ ದಾಖಲಿಸಲಾದ ಎಲ್ಲಾ ಟೇಪ್‌ಗಳಿಗೆ ತಾವು ಪ್ರವೇಶ ಹೊಂದಿರುವುದಾಗಿ ಹೇಳಿದರು. ಪತ್ರಿಕಾಗೋಷ್ಠಿ ನಡೆಸಿ ಈ ಘೋಷಣೆ ಮಾಡಿದರು. ಇಂತಹ ಪರಿಸ್ಥಿತಿಯಲ್ಲಿ ಎಸ್‌ಐಟಿಯಿಂದ ತನಿಖೆ ನಿಷ್ಪಕ್ಷಪಾತವಾಗಿರಲು ಸಾಧ್ಯವಿಲ್ಲ ಎಂದು ನಾವು ಭಾವಿಸಿದ್ದೇವೆ ಎಂದೂ ಅವರು ಹೇಳಿದರು.

ಆರೋಪಿಯಿಂದ ಮೂರು, ಬಿಜೆಪಿಯಿಂದ ಒಂದು, ಮತ್ತು ಐದನೇ ಅರ್ಜಿ ವಕೀಲರಿಂದ ಸಲ್ಲಿಕೆಯಾಗಿತ್ತು. ತಾಂತ್ರಿಕ ಕಾರಣಗಳಿಂದ ಬಿಜೆಪಿ ಅರ್ಜಿಯನ್ನು ತಳ್ಳಿಹಾಕಲಾಗಿದೆ ಎಂದೂ ಎನ್. ರಾಮಚಂದರ್ ರಾವ್ ಮಾಹಿತಿ ನೀಡಿದರು. "ಇದು ಹೈಕೋರ್ಟ್‌ನ ಅತ್ಯಂತ ಮಹತ್ವದ ಆದೇಶವಾಗಿದೆ. ನಾವು ಇದನ್ನು ಸ್ವಾಗತಿಸುತ್ತೇವೆ," ಎಂದೂ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: : Telangana ಶಾಸಕರಿಗೆ ಹಣದ ಆಮಿಷ ಆರೋಪ: ಪ್ರಧಾನಿ ಮೋದಿ ವಿರುದ್ಧ ಕೆಸಿಆರ್‌ ವಾಗ್ದಾಳಿ

ತೆಲಂಗಾಣದ ಮೊಯಿನಾಬಾದ್‌ನಲ್ಲಿರುವ ತೋಟದ ಮನೆಯೊಂದರ ಮೇಲೆ ದಾಳಿ ನಡೆಸಿದ 2 ತಿಂಗಳ ನಂತರ ಹೈಕೋರ್ಟ್‌ ಈ ಆದೇಶ ನೀಡಿದೆ. ಮತ್ತು ತಲಾ ₹ 100 ಕೋಟಿಗೆ ನಾಲ್ಕು ಶಾಸಕರನ್ನು 'ಖರೀದಿಸುವ' ಮೂಲಕ ಆಡಳಿತಾರೂಢ ಬಿಆರ್‌ಎಸ್ ಸರ್ಕಾರವನ್ನು ಉರುಳಿಸುವ ಪಿತೂರಿಯನ್ನು ಸೈಬರಾಬಾದ್ ಪೊಲೀಸರು ಬಹಿರಂಗಪಡಿಸಿದ್ದರು. 

ಇದನ್ನೂ ಓದಿ: ಕೆಸಿಆರ್‌ ಪಕ್ಷದ ನಾಲ್ವರು ಶಾಸಕರಿಗೆ BJPಯಿಂದ ತಲಾ 50 ಕೋಟಿ ಆಫರ್‌..?

Follow Us:
Download App:
  • android
  • ios