ವೃದ್ಧೆಯನ್ನು ತೊಡೆ ಮೇಲೆ ಕೂರಿಸಿಕೊಂಡು ತೋಳುಗಳಲ್ಲಿ ಎತ್ತಿಕೊಂಡ ಸಚಿವ: ವಿಡಿಯೋ ವೈರಲ್
ತೆಲಂಗಾಣದ ಕಾರ್ಮಿಕ ಸಚಿವ ಮಲ್ಲಾ ರೆಡ್ಡಿ ಅವರು ತಮ್ಮ ತಮಾಷೆಯ ವರ್ತನೆಗೆ ಹೆಸರುವಾಸಿಯಾಗಿದ್ದಾರೆ. ಇವರು ಶುಕ್ರವಾರ ಪ್ರಚಾರ ಕಾರ್ಯಕ್ರಮದ ವೇಳೆ ವಯಸ್ಸಾದ ಮಹಿಳೆಯನ್ನು ತೊಡೆಯ ಮೇಲೆ ಕೂರಿಸಿಕೊಂಡಿದ್ದಲ್ಲದೆ ಎತ್ತಿಕೊಂಡಿದ್ದು, ಈ ಮೂಲಕ ನೋಡುಗರನ್ನು ಬೆರಗುಗೊಳಿಸಿದರು.
ಹೈದರಾಬಾದ್ (ಅಕ್ಟೋಬರ್ 28, 2023): ತೆಲಂಗಾಣದ ಕಾರ್ಮಿಕ ಸಚಿವ ಮಲ್ಲಾ ರೆಡ್ಡಿ ಅವರು ತಮ್ಮ ತಮಾಷೆಯ ವರ್ತನೆಗೆ ಹೆಸರುವಾಸಿಯಾಗಿದ್ದಾರೆ. ಆಗಾಗ್ಗೆ ಇವರು ವಿಲಕ್ಷಣ ನಡೆಗಳಿಂದ ಆಗಾಗ್ಗೆ ಸುದ್ದಿಯಾಗುತ್ತಿರುತ್ತಾರೆ. ಈಗ ವಯಸ್ಸಾದ ಮಹಿಳೆಯನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡು ಮತ್ತೆ ವೈರಲ್ ಆಗಿದ್ದಾರೆ.
ತೆಲಂಗಾಣದ ಕಾರ್ಮಿಕ ಸಚಿವ ಮಲ್ಲಾ ರೆಡ್ಡಿ ಅವರು ತಮ್ಮ ತಮಾಷೆಯ ವರ್ತನೆಗೆ ಹೆಸರುವಾಸಿಯಾಗಿದ್ದಾರೆ. ಇವರು ಶುಕ್ರವಾರ ಪ್ರಚಾರ ಕಾರ್ಯಕ್ರಮದ ವೇಳೆ ವಯಸ್ಸಾದ ಮಹಿಳೆಯನ್ನು ತೊಡೆಯ ಮೇಲೆ ಕೂರಿಸಿಕೊಂಡಿದ್ದಲ್ಲದೆ ಎತ್ತಿಕೊಂಡಿದ್ದು, ಈ ಮೂಲಕ ನೋಡುಗರನ್ನು ಬೆರಗುಗೊಳಿಸಿದರು.
ಇದನ್ನು ಓದಿ: ರಾಜಸ್ಥಾನ ಕಾಂಗ್ರೆಸ್‌ನಿಂದ 7 ಗ್ಯಾರಂಟಿ; ಅಧಿಕಾರಕ್ಕೆ ಬಂದ್ರೆ ಕರ್ನಾಟಕ ರೀತಿ ಎಲ್ಲ ಗ್ಯಾರಂಟಿ ಜಾರಿ: ಗೆಹ್ಲೋಟ್ ಘೋಷಣೆ
ನವೆಂಬರ್ 30 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮೇಡ್ಚಲ್ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದಾಗ, 70 ವರ್ಷ ವಯಸ್ಸಿನ ಸಚಿವರು ಮಹಿಳೆಯರ ಗುಂಪಿನೊಂದಿಗೆ ಕುಳಿತಿದ್ದರು. ಆ ವೇಳೆ, ಆಶ್ಚರ್ಯಕರ ನಡೆಯಲ್ಲಿ, ಅವರು ತನ್ನ ಪಕ್ಕದಲ್ಲಿ ಕುಳಿತಿದ್ದ ವಯಸ್ಸಾದ ಮಹಿಳೆಯನ್ನು ತನ್ನ ತೊಡೆಯ ಮೇಲೆ ಕುಳಿತುಕೊಳ್ಳಲು ಹೇಳಿದರು. ನಂತರ ಸಚಿವರು ಆ ವಯೋವೃದ್ಧೆಯನ್ನು ಮಗುವಿನಂತೆ ತನ್ನ ತೋಳುಗಳಲ್ಲಿ ಎತ್ತಿಕೊಂಡಿದ್ದಾರೆ. ಈ ಅನಿರೀಕ್ಷಿತ ನಡೆ ನೆರೆದಿದ್ದ ಎಲ್ಲರನ್ನು ಬೆರಗುಗೊಳಿಸಿದೆ.
ನಂತರ, ಸಚಿವರು ಮಹಿಳೆಗೆ ಪುಷ್ಪಗುಚ್ಛ ನೀಡಿ ಕ್ಯಾಮರಾಗೆ ಥಂಬ್ಸ್-ಅಪ್ ತೋರಿಸಿದ್ದು, ವೃದ್ಧೆಗೂ ಸಹ ಅದೇ ರೀತಿ ತೋರಿಸುವಂತೆ ಹೇಳಿದ್ದಾರೆ. ವಯೋವೃದ್ಧೆ ಅದೇ ರೀತಿ ಮಾಡಿದ್ದು, ಈ ವಿಡಿಯೋ ಇದೀಗ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಾರತ್ ರಾಷ್ಟ್ರ ಸಮಿತಿಯ (ಬಿಆರ್‌ಎಸ್) ನಾಯಕ ಮಲ್ಲಾ ರೆಡ್ಡಿ ಪ್ರಸ್ತುತ ಮೇಡ್ಚಲ್ ಕ್ಷೇತ್ರದ ಶಾಸಕ ಆಗಿದ್ದು, ಮರು ಆಯ್ಕೆ ಬಯಸಿದ್ದಾರೆ. ವಿವಿಧ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತಮ್ಮ ತಮಾಷೆಯ ವರ್ತನೆಗಳಿಂದ ಸಾರ್ವಜನಿಕರನ್ನು ರಂಜಿಸಲು ಅವರು ಪ್ರಸಿದ್ಧರಾಗಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ಜತೆ ವೇದಿಕೆ ಹಂಚ್ಕೊಳ್ಳಲ್ಲ: ಮೈತ್ರಿ ಪಕ್ಷದ ಸಿಎಂ ಸಡ್ಡು
ಈ ಹಿಂದೆಯೂ ಮಲ್ಲಾ ರೆಡ್ಡಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಆಯೋಜಿಸಿದ್ದ ವಿಶ್ವ ಹೃದಯ ದಿನದಂದು (ಸೆಪ್ಟೆಂಬರ್ 29) ನಡೆದ ವಾಕಥಾನ್‌ನಲ್ಲಿ ವೇದಿಕೆಗೆ ಏರಿ ನೃತ್ಯ ಮಾಡಿದ್ದರು. ಈ ಮೂಲಕ ವಾಕಥಾನ್‌ನಲ್ಲಿ ಭಾಗವಹಿಸಿದವರಿಗೆ ಆಶ್ಚರ್ಯ ಮತ್ತು ಸಂತೋಷವನ್ನುಂಟು ಮಾಡಿದ್ದರು. ಕೆಲವು ನಿಮಿಷಗಳ ನೃತ್ಯದ ನಂತರ, ಅವರು ತಮ್ಮ ಜುಂಬಾ ಕೌಶಲ್ಯಗಳನ್ನು ಪ್ರದರ್ಸಲು ನೃತ್ಯ ತಾಲೀಮು ಮಾಡ್ತಿದ್ದವರೊಂದಿಗೆ ಸೇರಿಕೊಂಡಿದ್ದರು.
ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳ ನೆಟ್‌ವರ್ಕ್ ಅನ್ನು ಮೇಲ್ವಿಚಾರಣೆ ಮಾಡುವ ಮಲ್ಲಾ ರೆಡ್ಡಿ, ತಾವು ಭಾಗವಹಿಸುವ ಪ್ರತಿಯೊಂದು ಕಾರ್ಯಕ್ರಮದಲ್ಲೂ ಹೆಚ್ಚಿನ ಶಕ್ತಿಯ ಮಟ್ಟ ಮತ್ತು ನೃತ್ಯ ಸಾಮರ್ಥ್ಯವನ್ನು ತೋರಿಸುತ್ತಾರೆ. 70ರ ಹರೆಯದಲ್ಲೂ ಅವರು ಜನಪ್ರಿಯ ಹಾಡುಗಳಿಗೆ ಅನಾಯಾಸವಾಗಿ ಡ್ಯಾನ್ಸ್ ಮಾಡುತ್ತಾರೆ ಮತ್ತು ಯುವಕರಿಗೂ ಇವರು ಸಡ್ಡು ಹೊಡೆಯುತ್ತಾರೆ.