ಹಲ್ಲಿ ಬೀರ್ ಟ್ರೈ ಮಾಡಿದ್ದೀರಾ: ಬಡ್‌ವೈಸರ್ ಬೀರ್‌ನಲ್ಲಿ ಗ್ರಾಹಕನಿಗೆ ಸಿಕ್ತು ಹಲ್ಲಿ
ಬಡ್‌ವೈಸರ್ ಬಿಯರ್ ಬಾಟಲಿಯಲ್ಲಿ ಹಲ್ಲಿ ಪತ್ತೆಯಾಗಿದೆ ಎನ್ನಲಾದ ವೀಡಿಯೊ ವೈರಲ್ ಆಗಿದೆ. ತೆಲಂಗಾಣದ ವಿಕಾರಾಬಾದ್‌ನಲ್ಲಿ ಈ ಘಟನೆ ನಡೆದಿದೆ..
ಬಡ್ವೈಸರ್ ಬೀರ್‌ನಲ್ಲಿ ಹಲ್ಲಿ ಪತ್ತೆಯಾಗಿದೆ ಎನ್ನಲಾದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆರೆಯ ತೆಲಂಗಾಣದಲ್ಲಿ ಈ ಘಟನೆ ನಡೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಇದರ ವೀಡಿಯೋ ವೈರಲ್ ಆಗಿದೆ. ವೀಡಿಯೋದಲ್ಲಿ ಕಾಣಿಸುವಂತೆ ವ್ಯಕ್ತಿಯೊಬ್ಬರು ಬೀರ್ ಬಾಟಲ್‌ನಲ್ಲಿ ಹಲ್ಲಿ ಇರುವುದನ್ನು ತೋರಿಸುತ್ತಿದ್ದಾರೆ. ಹಲ್ಲಿ ಇರುವುದನ್ನು ತೋರಿಸುವ ಸಲುವಾಗಿ ಹಲವು ಬಾರಿ ಬಾಟಲ್ ಅನ್ನು ಅಲುಗಾಡಿಸುತ್ತಿರುವುದನ್ನು ಕಾಣಬಹುದಾಗಿದೆ.
ತೆಲಂಗಾಣದ ವಿಕರಾಬಾದ್‌ನಲ್ಲಿ ಈ ಘಟನೆ ನಡೆದಿದೆ. ವೀಡಿಯೋದಲ್ಲಿ ಕಾಣಿಸುವಂತೆ ಬಡ್ವೈಸರ್ ಬೀರ್ ಬಾಟಲ್‌ನಲ್ಲಿ ಹಲ್ಲಿ ತೇಲಾಡುತ್ತಿರುವುದು ಕಾಣಿಸುತ್ತಿದೆ. ಅದರೆ ಅದು ಸೀಲ್ಡ್ ಬಾಟಲ್ ಅಥವಾ ತೆರೆದ ಬಾಟಲ ಎಂಬುದು ಸ್ಪಷ್ಟವಾಗಿಲ್ಲ. ವರದಿಯ ಪ್ರಕಾರ, ತೆಲಂಗಾಣದ ಕರೇಲಿ ಗ್ರಾಮದ ಲಕ್ಷ್ಮಿಕಾಂತ್ ರೆಡ್ಡಿ ಹಾಗೂ ಅನಂತಯ್ಯ ಅವರು ಈ ಬೀರ್ ಬಾಟಲನ್ನು ಖರೀದಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಹಂಚುವುದಕ್ಕಾಗಿ ಧರುರ್‌ನ ಲೋಕಲ್ ವೈನ್ ಶಾಪೊಂದರಲ್ಲಿ ಅವರು ಒಟ್ಟು 4 ಸಾವಿರ ರೂಪಾಯಿ ಮೌಲ್ಯದ ಬೀರನ್ನು ಖರೀದಿಸಿದ್ದಾರೆ. ಆದರೆ ಸಂಜೆ ಟೈಮ್ ಬಾಟಲ್ ಒಪನ್ ಮಾಡುವ ವೇಳೆ ಅದರೊಳಗೆ ಏನೋ ಒಂದು ಹರಿದಾಡುತ್ತಿರುವುದು ಅವರ ಗಮನಕ್ಕೆ ಬಂದಿದೆ. ಅವರಲ್ಲೊಬ್ಬ ವ್ಯಕ್ತಿ ಬಾಟಲನ್ನು ಶೇಕ್ ಮಾಡಿ ಹಲ್ಲಿ ಹಾಗೂ ಬಾಟಲ್‌ನ್ನು ಕ್ಯಾಮರಾಗೆ ಕಾಣುವಂತೆ ಝೂಮ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಹೀಗೆ ಆಹಾರದಲ್ಲಿ ಸತ್ತ ಪ್ರಾಣಿಗಳು ಕಂಡು ಬರುತ್ತಿರುವುದು ಇದು ಮೊದಲೇನಲ್ಲ, ಈ ಹಿಂದೆಯೂ ಇಂತಹ ಹಲವು ಪ್ರಕರಣಗಳು ನಡೆದಿವೆ. ಹೈದರಾಬಾದ್‌ನ ಲೋಕಲ್ ರೆಸ್ಟೋರೆಂಟ್‌ವೊಂದರಿಂದ ಆರ್ಡರ್ ಮಾಡಿದ ಬಿರಿಯಾನಿಯಲ್ಲಿ ಸತ್ತ ಹಲ್ಲಿಯೊಂದು ಪತ್ತೆಯಾದ ಘಟನೆ ಕಳೆದ ವರ್ಷ ನಡೆದಿತ್ತು. ಇನ್ನೇನು ಬಾಯಿಗಿಡಬೇಕು ಎನ್ನುವಷ್ಟರಲ್ಲಿ ತಟ್ಟೆಯಲ್ಲಿ ಹಲ್ಲಿ ಕಾಣಿಸಿಕೊಂಡಿತ್ತು. ಝೋಮ್ಯಾಟೋದಲ್ಲಿ ಈ ಆರ್ಡರ್ ಮಾಡಲಾಗಿತ್ತು.
ಹಾಗೆಯೇ ಕಳೆದ ಜೂನ್‌ನಲ್ಲಿ ತೆಲಂಗಾಣದ ಸುಲ್ತಾನ್‌ಪುರದಲ್ಲಿ ಜೆಎನ್‌ಟಿಯುಹೆಚ್ ಇಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್‌ನಲ್ಲಿ ದ್ಯಾರ್ಥಿಗಳಿಗೆ ರೆಡಿ ಮಾಡಿದ್ದ ಚಟ್ನಿ ಪಾತ್ರೆಗೆ ಇಲಿಯೊಂದು ಬಿದ್ದು ಈಜಾಡಿದ ಘಟನೆ ನಡೆದಿತ್ತು. ಚಟ್ನಿ ತುಂಬಿಸಿ ಇಟ್ಟಿದ ಕಠಾರದ ಒಳಗೆ ಬಿದ್ದ ಇಲ್ಲಿ ಸ್ವಿಮ್ಮಿಂಗ್ ಫುಲ್‌ನಲ್ಲಿ ಈಜಾಡುವಂತೆ ಅತ್ತಿಂದಿತ್ತ ಓಡಾಡಿತ್ತು. ಇದರ ವೀಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು.