Asianet Suvarna News Asianet Suvarna News

ಬುಲೆಟ್ ರೈಲು ಮಾರ್ಗದಲ್ಲಿ ಜ. 17ರಿಂದ ಖಾಸಗಿ ತೇಜಸ್!

ದಿಲ್ಲಿ-ಲಖನೌ ಬಳಿಕ ಮುಂಬೈ- ಅಹಮದಾಬಾದ್‌ಗೂ ಖಾಸಗಿ ತೇಜಸ್‌ ರೈಲು| ಬುಲೆಟ್ ರೈಲು ಮಾರ್ಗದಲ್ಲಿ ಜ. 17ರಿಂದ ಖಾಸಗಿ ತೇಜಸ್!

Tejas Train Between Ahmedabad Mumbai To Be Launched In January Says Report
Author
Bangalore, First Published Dec 29, 2019, 7:22 AM IST

ನವದೆಹಲಿ[ಡಿ.29]: ಮುಂಬೈ ಹಾಗೂ ಅಹಮದಾಬಾದ್‌ ನಡುವೆ ಖಾಸಗಿ ಸಂಸ್ಥೆಯಿಂದ ನಿರ್ವಹಿಸಲ್ಪಡುತ್ತಿರುವ ತೇಜಸ್‌ ರೈಲು ಸೇವೆ ಜ.17ರಿಂದ ಆರಂಭವಾಗಲಿದೆ. ಅತ್ಯಾಧುನಿಕ ಸೇವೆಯನ್ನೊಳಗೊಂಡಿರುವ ತೇಜಸ್‌ ರೈಲಿನ ಪ್ರಯಾಣವು ಪ್ರಯಾಣಿಕರಿಗೆ ಸುಖಕರವಾಗಿರಲಿದ್ದು, ಗುರುವಾರ ಹೊರತುಪಡಿಸಿ, ಉಳಿದೆಲ್ಲಾ ದಿನವೂ ಈ ರೈಲು ಸಂಚಾರ ಸಾರ್ವಜನಿಕರಿಗೆ ಮುಕ್ತವಾಗಿರಲಿದೆ.

ಪ್ರತಿ ದಿನ ಬೆಳಗ್ಗೆ 6.40ಕ್ಕೆ ಅಹಮದಾಬಾದ್‌ನಿಂದ ಹೊರಡುವ ರೈಲು ಮಧ್ಯಾಹ್ನ 1.10ಕ್ಕೆ ಮುಂಬೈಗೆ ಆಗಮಿಸಲಿದೆ. ಮುಂಬೈನಿಂದ ಸಂಜೆ 3.40ಕ್ಕೆ ಹೊರಡುವ ರೈಲು ರಾತ್ರಿ 9.55ಕ್ಕೆ ಅಹಮದಾಬಾದ್‌ ತಲುಪುಲಿದೆ. ಪ್ರಯಾಣದ ಅವಧಿ 6 ಗಂಟೆ 30 ನಿಮಿಷವಾಗಿರಲಿದ್ದು, ಕೇವಲ 6 ಕಡೆ ನಿಲುಗಡೆ ಹೊಂದಿರಲಿದೆ.

ಈ ರೈಲು ಪ್ರಯಾಣ 1 ಗಂಟೆ ತಡವಾದಲ್ಲಿ, ಈ ರೈಲಿನಲ್ಲಿ ಪ್ರಯಾಣಿಸಿದ ಪ್ರಯಾಣಿಕರಿಗೆ ಪರಿಹಾರವಾಗಿ 100 ರು. ಅಥವಾ 2 ಗಂಟೆ ತಡವಾದರೆ, 250 ರು. ಪರಿಹಾರ ನೀಡಲಾಗುತ್ತದೆ. ಖಾಸಗಿ ಸಂಸ್ಥೆಯಾದ ಐಆರ್‌ಸಿಟಿಸಿಯಿಂದ ನಿರ್ವಹಿಸಲ್ಪಡುತ್ತಿರುವ ಮೊದಲ ತೇಜಸ್‌ ರೈಲು ದೆಹಲಿ-ಲಖನೌ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಇದರಲ್ಲೂ ರೈಲು ತಡವಾದರೆ, ಪ್ರಯಾಣಿಕರಿಗೆ ಪರಿಹಾರ ಹಣ ನೀಡಲಾಗುತ್ತಿದೆ. ಆದರೆ ಈ ರೈಲಿನಲ್ಲಿ ಯಾವುದೇ ರಿಯಾಯಿತಿ ಟಿಕೆಟ್‌ ಇರುವುದಿಲ್ಲ. ಸಾಮಾನ್ಯ ರೈಲಿಗಿಂತ ಹೆಚ್ಚು ದರ ಇರುತ್ತದೆ. ವಿಮಾನಮಾನ ಸೇವೆಗಳು ಲಭ್ಯವಿರುತ್ತದೆ.

Follow Us:
Download App:
  • android
  • ios