ವಿದ್ಯಾರ್ಥಿನಿಯರಿಗೆ ವ್ಯಾಟ್ಸಾಪ್ ಮೂಲಕ ಚಾಟಿಂಗ್ ಶುರು ಮಾಡಿ ಬಳಿಕ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಶಿಕ್ಷಕನ ಪುರಾಣ ಬಯಲಾಗಿದೆ. ಕೆಲ ವಿದ್ಯಾರ್ಥಿನಿಯರನ್ನು ಹೊಟೆಲ್‌ಗೆ ಕರೆದೊಯ್ದಿರುವ ಘಟನೆಯೂ ಬೆಳಕಿಗೆ ಬಂದಿದೆ.
ರಾಂಚಿ (ಆ.20) ವಿದ್ಯಾರ್ಥಿನಿಯರಿಗೆ ತರಗತಿ, ಪಠ್ಯದ ಕುರಿತು ಮೆಸೇಜ್ ಮಾಡುತ್ತಾ ಚಾಟಿಂಗ್ ಆರಂಭಿಸಿದ ಶಿಕ್ಷಕ ಬಳಿಕ ಮೆಲ್ಲನೆ ಅಶ್ಲೀಲ ಮೆಸೇಜ್, ಫೋಟೋ ಕಳುಹಿಸಿ ವಿದ್ಯಾರ್ಥಿನಿಯರನ್ನು ತನ್ನ ಬೆಲೆಗೆ ಬೀಳಿಸಿಕೊಳ್ಳುತ್ತಿದ್ದ. ಬಳಿಕ ಹೊಟೆಲ್ ರೂಂಗೆ ಕರೆಯುತ್ತಿದ್ದ ಶಿಕ್ಷಕನ ಪುರಾಣ ಬಯಲಾಗಿದೆ. ಹಲವು ವಿದ್ಯಾರ್ಥಿನಿಯರು ತಮ್ಮ ಪೋಷಕರ ಬಳಿ ಹೇಳಿಕೊಂಡಿದ್ದಾರೆ. ಈ ಪೈಕಿ ಕೆವ ವಿದ್ಯಾರ್ಥಿನಿಯರು ಶಾಲೆಯನ್ನೇ ತೊರೆದ ಘಟನೆ ನಡೆದಿದೆ. ಈ ಶಿಕ್ಷಣ ಉಪಟ ಹೆಚ್ಚಾಗುತ್ತಿದ್ದಂತೆ ವಿದ್ಯಾರ್ಥಿನಿಯರು ತೋಡಿಕೊಂಡ ಅಳಲು ಆಧರಿಸಿ ಪೋಷಕರು ದೂರು ದಾಖಿಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಶಿಕ್ಷಕ ಪರಾರಿಯಾದ ಘಟನೆ ಜಾರ್ಖಂಡ್‌ನ ರಾಂಚಿಯಲ್ಲಿ ನಡೆದಿದೆ.
ಶಿಕ್ಷಕರ ರಜೆ ರದ್ದು, ತನಿಖೆ ಆರಂಭ
ರಾಂಚಿಯ ಶ್ರದ್ಧಾನಂದ ಬಾಲವಿದ್ಯಾಲಯದ ಈ ಘಟನೆ ನಡೆದಿದೆ. ಅಭಿಷೇಕ್ ಕುಮಾರ್ ಸಿನ್ಹ ಅನ್ನೋ ಶಿಕ್ಷಕನ ಮೇಲೆ ಗಂಭೀರ ಆರೋಪ ಕೇಳಿಬಂದಿದೆ. ಆರೋಪ ಹಾಗೂ ದೂರು ದಾಖಲಾಗುತ್ತಿದ್ದಂತೆ ಶಿಕ್ಷಕ ಪರಾರಿಯಾಗಿದ್ದಾನೆ. ಇತ್ತ ಜಿಲ್ಲಾ ಶಿಕ್ಷಣಾಧಿಕಾರಿ ನೇತೃತ್ವದಲ್ಲಿ ತನಿಖಾ ತಂಡ ರಚನೆಗೊಂಡಿದ್ದು, ತನಿಖೆ ಆರಂಭಗೊಂಡಿದೆ. ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದ ರಜೆ ರದ್ದು ಮಾಡಲಾಗಿದೆ. ಇತ್ತ ವಿದ್ಯಾರ್ಥಿಗಳಿಗೆ ಯಾವುದೇ ತರಗತಿ ನಡೆಸದಂತೆ ಸೂಚನೆ ನೀಡಲಾಗಿದೆ. ಪ್ರತಿ ದಿನ ವಿಚಾರಣೆ ಆರಂಭಗೊಂಡಿದೆ.
ವಿದ್ಯಾರ್ಥಿನಿಯರಿಗೆ ರಾತ್ರಿ ವಿಡಿಯೋ ಕಾಲ್
ಪಠ್ಯ, ತರಗತಿ ವಿಚಾರ ಹೇಳಿ ಮನೆಯಲ್ಲಿ ಮೊಬೈಲ್ ಬಳಸುವ ವಿದ್ಯಾರ್ಥಿಗಳು, ತಮ್ಮದೇ ಮೊಬೈಲ್ ಇಟ್ಟಕೊಂಡ ವಿದ್ಯಾರ್ಥಿಗಳ ನಂಬರ್ ಕಲೆ ಹಾಕಿದ ಶಿಕ್ಷಕ ಅಭಿಷೇಕ್ ಕುಮಾರ್ ಸಿನ್ಹ ಚಾಟಿಂಗ್ ಆರಂಭಿಸಿದ್ದಾರೆ. ಚಾಟಿಂಗ್, ವಿಡಿಯೋ ಕಾಲ್ ಮೂಲಕ ವಿದ್ಯಾರ್ಥಿನಿಯರನ್ನು ತನ್ನ ಬೆಲೆಗೆ ಬೀಳಿಸಿಕೊಳ್ಳುತ್ತಿದ್ದ. ಹಲವು ಆಮಿಷ, ಅಂಕದ ಬೆದರಿಕೆ ವಿದ್ಯಾರ್ಥಿನಿಯರು ಅನಿವಾರ್ಯವಾಗಿ ಶಿಕ್ಷಕನ ಬಲೆ ಬಿದ್ದಿದ್ದಾರೆ. 15ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಈತನ ಮೋಸದ ಜಾಲಕ್ಕೆ ಸಿಲುಕಿದ್ದಾರೆ. ಈ ಪೈಕಿ ಕೆಲ ವಿದ್ಯಾರ್ಥಿನಿಯರನ್ನು ಹೊಟೆಲ್ ಭೇಟಿಗೂ ಕರೆದೊಯ್ದಿದ್ದಾರೆ ಎಂದು ವಿದ್ಯಾರ್ಥಿನಿಯರು ಅಳಲು ತೋಡಿಕೊಂಡಿದ್ದಾರೆ.
ಶಾಲೆಗೆ ತೆರಳಲು ಒಪ್ಪದ ವಿದ್ಯಾರ್ಥಿನಿಯಿಂದ ಪ್ರಕರಣ ಬಯಲು
ಶಿಕ್ಷನ ಈ ಮೋಸದ ಬಲೆಗೆ ಬಿದ್ದ ವಿದ್ಯಾರ್ಥಿಯನ್ನು ಹೊಟೆಲ್‌ಗೆ ಕರೆದೊಯ್ದಿದ್ದಾನೆ. ಈ ಬೆಳವಣಿಗೆ ಬಳಿಕ ವಿದ್ಯಾರ್ಥಿನಿ ಶಾಲೆಗೆ ತೆರಳಲು ನಿರಾಕರಿಸಿದ್ದಾರೆ. ಪೋಷಕರು ಅದೆಷ್ಟೇ ಒತ್ತಾಯಿಸಿದರೂ ಶಾಲೆಗೆ ತೆರಳಲು ವಿದ್ಯಾರ್ಥಿನಿ ನಿರಾಕರಿಸಿದ್ದರೆ. ಶಾಲೆ ತನಗೆ ಭಯ ಎಂದು ಹೇಳಿದ್ದಾಳೆ. ಈ ಕುರಿತು ಶಾಲೆಯಲ್ಲೂ ವಿಚಾರಿಸಿದ್ದಾರೆ. ಆರಂಭದಲ್ಲಿ ಗೌಪ್ಯವಾಗಿಟ್ಟ ಈ ವಿಚಾರವನ್ನು ಕೊನೆಗೆ ವಿದ್ಯಾರ್ಥಿನಿ ಬಾಯ್ಬಿಟ್ಟಿದ್ದಾಳೆ. ಆಕ್ರೋಷಗೊಂಡ ಪೋಷಕರು ಶಾಲೆಗೆ ತೆರೆಳಿ ಆಕ್ರೋಶ ಹೊರಹಾಕಿದ್ದಾರೆ. ಇದೇ ವೇಳ ಹಲವು ವಿದ್ಯಾರ್ಥಿನಿಯರಿಗೆ ಇದೇ ರೀತಿ ಕಿರುಕುಳ ನೀಡಿರುವುದು ಬಯಲಾಗಿದೆ.
ಪೋಷಕರು ಶಾಲೆಗೆ ಆಗಮಿಸಿ ಪ್ರತಿಭಟನ ನಡೆಸುತ್ತಿದ್ದಂತೆ ಶಿಕ್ಷಕ ಪರಾರಿ
ಪೋಷಕರು ಪ್ರತಿಭಟನೆ ನಡೆಸುತ್ತಿದ್ದಂತೆ ಶಿಕ್ಷಕ ಪರಾರಿಯಾಗಿದ್ದಾನೆ. ಪೊಲೀಸರು ಶಿಕ್ಷನ ಹುಡುಕಾಟ ಆರಂಭಿಸಿದ್ದಾರೆ. ಜಿಲ್ಲಾ ಶಿಕ್ಷಣಾಧಿಕಾರಿ ಸೇರಿದಂತೆ ಅಧಿಕಾರಿ ತಂಡ ಈ ತನಿಖೆ ನಡೆಸುತ್ತಿದೆ.
