ತಮಿಳುನಾಡು ಬಿಜೆಪಿ ಕಚೇರಿಯಲ್ಲಿದ್ದ ಭಾರತ ಮಾತೆ ಪ್ರತಿಮೆ ಎತ್ತಂಗಡಿ: ಪೊಲೀಸರ ಕ್ರಮಕ್ಕೆ ಬಿಜೆಪಿ ಖಂಡನೆ

ತಮಿಳುನಾಡಿನ ಬಿಜೆಪಿ ಕಚೇರಿಯಲ್ಲಿದ್ದ ಭಾರತ ಮಾತೆಯ ಪ್ರತಿಮೆಯನ್ನು ಪೊಲೀಸರು ಹಾಗೂ ಕಂದಾಯ ಅಧಿಕಾರಿಗಳು ತೆಗೆದು ಹಾಕಿದ್ದಾರೆ.

Tamilnadu Police removed statue of Bharat Mata from BJP office in Tamilnadu: BJP chief Annamalai condemns act of tamilnadu govt akb

ಚೆನ್ನೈ: ತಮಿಳುನಾಡಿನ ಬಿಜೆಪಿ ಕಚೇರಿಯಲ್ಲಿದ್ದ ಭಾರತ ಮಾತೆಯ ಪ್ರತಿಮೆಯನ್ನು ಪೊಲೀಸರು ಹಾಗೂ ಕಂದಾಯ ಅಧಿಕಾರಿಗಳು ತೆಗೆದು ಹಾಕಿದ್ದಾರೆ. ತಮಿಳುನಾಡು  ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಅವರ 'ಎನ್ ಮನ್, ಎನ್ ಮಕ್ಕಳ್' ಪಾದಯಾತ್ರೆಯೂ ತಮಿಳುನಾಡಿನ ವಿರುದುನಗರ ಜಿಲ್ಲೆಗೆ ಪ್ರವೇಶಿಸುವ ಮುನ್ನ ಅಲ್ಲಿನ ಪಕ್ಷದ ಪ್ರಧಾನ ಕಚೇರಿಯಲ್ಲಿದ್ದ ಪ್ರತಿಮೆಯನ್ನು ಸ್ಥಳಾಂತರಿಸಲಾಗಿದೆ. ತಮಿಳುನಾಡು ಸರ್ಕಾರದ ಈ ನಡೆಗೆ ಈಗ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. 

ಹೊಸದಾಗಿ ಪ್ರತಿಷ್ಠಾಪನೆ ಮಾಡಲಾಗಿದ್ದ ಪ್ರತಿಮೆಯನ್ನು  ತಮಿಳುನಾಡು ಪೊಲೀಸರು ಹಾಗೂ ಕಂದಾಯ ಅಧಿಕಾರಿಗಳು (revenue officials) ತೆಗೆದು ಹಾಕಿದ್ದಾರೆ. ಪಕ್ಷದ ವಿರುದುನಗರ ಜಿಲ್ಲಾ ಕಚೇರಿಯಲ್ಲಿ ಕಪ್ಪು ಬಣ್ಣದ ಕಲ್ಲುಗಳಿಂದ  ಕೆತ್ತನೆ ಮಾಡಲಾಗಿದ್ದ ಭಾರತ ಮಾತೆಯ ಬೃಹತ್ ಪ್ರತಿಮೆಯನ್ನು ಸೋಮವಾರವಷ್ಟೇ ಪ್ರತಿಷ್ಠಾಪನೆ ಮಾಡಲಾಗಿತ್ತು. ಅಣ್ಣಾಮಲೈ ಅವರ ಎನ್ ಮನ್ ಎನ್ ಮಕ್ಕಲ್ ಪಾದಯಾತ್ರೆಯೂ ವಿರುಧುನಗರ ಜಿಲ್ಲೆಗೆ ಇಂದು ಅಥವಾ ನವಂಬರ್ 11ರ ಒಳಗೆ ಆಗಮಿಸುವುದರಲ್ಲಿದೆ ಅಷ್ಟರಲ್ಲಿ ಅಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಪ್ರತಿಮೆಯನ್ನು ತೆಗೆದು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ತಮಿಳುನಾಡು ಪೊಲೀಸರ ಈ ಕ್ರಮವನ್ನು ಬಿಜೆಪಿ ತೀವ್ರವಾಗಿ ಟೀಕಿಸಿದೆ. 

ಹಾಸ್ಟೆಲ್ಲಲ್ಲೇ ಅಣ್ಣಾಮಲೈ ದಾಂಧಲೆ, ಮಸಾಲೆ‌ ದೋಸೆಗಾಗಿ ಉತ್ತರ ಭಾರತೀಯರನ್ನೇ ನಡುಗಿಸಿದ‌ ಸಿಂಗಂ!

ಬಿಜೆಪಿ ಕಚೇರಿಯಲ್ಲಿ  (party office) ಪೂರ್ವಾನುಮತಿ ಪಡೆಯದೆ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು, ಹೈಕೋರ್ಟ್ ನಿರ್ದೇಶನ ಮತ್ತು ಸರ್ಕಾರದ ಆದೇಶಕ್ಕೆ ವಿರುದ್ಧವಾಗಿದೆ ಎಂದು ಈ ಪ್ರತಿಮೆಯನ್ನು ಕಚೇರಿಯಿಂದ ತೆಗೆಯಲಾಗಿದೆ ಎಂದು ಹಿರಿಯ ಅಧಿಕಾರಿಗಳು ಇಂಡಿಯಾ ಟುಡೇಗೆ ತಿಳಿಸಿದ್ದಾರೆ. ಇದಕ್ಕೂ ಮೊದಲು, ಕಂದಾಯ ಅಧಿಕಾರಿಗಳು ಪ್ರತಿಮೆಯನ್ನು ತೆಗೆದು ಹಾಕುವಂತೆ ಬಿಜೆಪಿ ಕಾರ್ಯಕರ್ತರನ್ನು ಕೇಳಿದರು ಆದರೆ ಅವರು ತೆಗೆದು ಹಾಕಲು  ನಿರಾಕರಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪೊಲೀಸ್ ಅಧಿಕಾರಿಯೊಬ್ಬರು ಬಿಜೆಪಿ ಕಚೇರಿಯ ಗೋಡೆಯನ್ನು ಹತ್ತಿ ಇತರ ಅಧಿಕಾರಿಗಳು ಪ್ರವೇಶಿಸಲು ಗೇಟ್‌ಗಳಲ್ಲಿ ಒಂದನ್ನು ತೆರೆಯುವುದನ್ನು ನೋಡಬಹುದು. 

ಆಕೆಗೆ ನನಗಿಂತ ಒಳ್ಳೆ ಗಂಡ ಸಿಗಬೇಕಿತ್ತು! ಮೊದಲ ಬಾರಿಗೆ ಹೆಂಡ್ತಿ ಬಗ್ಗೆ ಮಾತನಾಡಿದ ಅಣ್ಣಾಮಲೈ

ಘಟನೆಯನ್ನು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ (Tamil Nadu BJP chief) ಕೆ. ಅಣ್ಣಾಮಲೈ (K Annamalai) ಖಂಡಿಸಿದ್ದಾರೆ.  ತಮಿಳುನಾಡಿನ (Tamil Nadu) ಭ್ರಷ್ಟ ಡಿಎಂಕೆ ಸರ್ಕಾರದ (DMK government) ಚಅಡಿಯಲ್ಲಿ, ಪಕ್ಷದ ಒಡೆತನದ ಸ್ಥಳದಲ್ಲಿಯೂ ಭಾರತ ಮಾತೆಯ ಪ್ರತಿಮೆಯನ್ನು ಸ್ಥಾಪಿಸುವ ಹಕ್ಕಿಲ್ಲ. ನಮ್ಮ ಎನ್ ಮನ್, ಎನ್ ಮಕ್ಕಳ್ ಯಾತ್ರೆಯು ಡಿಎಂಕೆ ಸರ್ಕಾರದ ಭ್ರಷ್ಟಾಚಾರವನ್ನು ಬಯಲಿಗೆಳೆಯುತ್ತಿದೆ ಎಂಬ ಭಯದಿಂದ ಇಬ್ಬರು ಡಿಎಂಕೆ ಸಚಿವರ ನಿರ್ದೇಶನದಲ್ಲಿ ಈ ಕೃತ್ಯವೆಸಗಲಾಗಿದೆ ಎಂದು ಅವರು ಟೀಕಿಸಿದ್ದಾರೆ.  ಈ ವರ್ಷದ ಮಾರ್ಚ್‌ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ತಮಿಳುನಾಡಿನಲ್ಲಿ ಉದ್ಘಾಟಿಸಿದ ಪಕ್ಷದ ಹತ್ತು ಕಚೇರಿಗಳಲ್ಲಿ ವಿರುಧುನಗರ (Virudhunagar) ಬಿಜೆಪಿ ಪ್ರಧಾನ ಕಚೇರಿಯೂ (BJP headquarter) ಒಂದಾಗಿದೆ.

Latest Videos
Follow Us:
Download App:
  • android
  • ios