* ತಮಿಳುನಾಡಿನಲ್ಲಿ ಮದ್ಯದ ಅಂಗಡಿಗಳು ರೀ ಓಪನ್* ಸಂಭ್ರಮದಿಂದ ಬರಮಾಡಿಕೊಂಡ ಮದ್ಯಪ್ರಿಯ*ಕಳೆದ ಮೇ 10 ರಿಂದ ತಮಿಳುನಾಡಿನಲ್ಲಿ ಮದ್ಯದ ಅಂಗಡಿಗಳು ಬಂದ್* ಮದ್ಯದ ಅಂಗಡಿ ಮುಂದೆ ಆರತಿ ಎತ್ತಿ ಬಾಟಲ್ ಹಿಡಿದು ಸಂಭ್ರಮ

ಚೆನ್ನೈ(ಜೂ. 14) ಕರ್ನಾಟಕದಂತೆ ಪಕ್ಕದ ತಮಿಳುನಾಡಿನಲ್ಲಿ ಮದ್ಯದ ಅಂಗಡಿಗಳು ತೆರೆದುಕೊಂಡಿವೆ. ಅಂಗಡಿ ತೆರೆದುಕೊಂಡಿದ್ದರೆ ಒಂದು ಸುದ್ದಿ ಎನ್ನಬಹುದಿತ್ತು. ಆದರೆ ಮದ್ಯಪ್ರಿಯನೊಬ್ಬ ಇದನ್ನು ಬರಮಾಡಿಕೊಂಡ ರೀತಿ ಮಾತ್ರ ಅದ್ಭುತ.

ಮದ್ಯ ಖರೀದಿಗೆ ತೆರಳುವ ಮುನ್ನ ಆರತಿ ಬೆಳಗಿದ ವ್ಯಕ್ತಿ ನಂತರ ಮದ್ಯದ ಬಾಟಲ್ ಗಳನ್ನು ಖರೀದಿ ಮಾಡಿ ತಂದು ಸಂಭ್ರಮಿಸಿದರು. ಒಂದು ಕೈಯಲ್ಲಿ ಒಂದು ಬಾಟಲ್, ಇನ್ನೊಂದು ಕೈಯಲ್ಲಿ ಮತ್ತೊಂದು ಬಾಟಲ್ ಹಿಡಿದ ವಿಡಿಯೋ ವೈರಲ್ ಆಯಿತು.

'ಹೊಡಿಯಯ್ಯಾ ಎಷ್ಟು ಬೇಕಾದರೂ ಹೊಡಿ' ಪೊಲೀಸರ ಜತೆ ಕುಡುಕನ ಅವಾಂತರ

ಕಳೆದ ಮೇ 10 ರಿಂದ ತಮಿಳುನಾಡಿನಲ್ಲಿ ಮದ್ಯದ ಅಂಗಡಿಗಳು ಬಂದ್ ಆಗಿದ್ದವು. ಕೊರೋನಾ ಕಾರಣಕ್ಕೆ ಕಠಿಣ ನಿಯಮಗಳನ್ನು ಅಳವಡಿಕೆ ಮಾಡಿಕೊಳ್ಳಲಾಗಿತ್ತು. ಒಟ್ಟಿನಲ್ಲಿ ಈ ಮದ್ಯಪ್ರಿಯರ ಸಂಭ್ರಮವನ್ನು ನೋಡಿಯೇ ಅನುಭವಿಸಬೇಕು. 

Scroll to load tweet…