ಗಂಜಿ ಬೇಯಿಸುತ್ತಿದ್ದ ಪಾತ್ರೆಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದ್ದು, ಘಟನೆಯ ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಗಂಜಿ ಬೇಯಿಸುತ್ತಿದ್ದ ಪಾತ್ರೆಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದ್ದು, ಘಟನೆಯ ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಜುಲೈ 29 ರಂದು ಈ ಘಟನೆ ನಡೆದಿದ್ದು, 65% ಶೇಕಡಾ ಸುಟ್ಟಗಾಯಗಳಿಂದ ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ (ಆಗಸ್ಟ್ 2) ಇಂದು ಸಾವನ್ನಪ್ಪಿದ್ದಾರೆ.
ಮೃತ ವ್ಯಕ್ತಿಯನ್ನು ಮುತ್ತುಕುಮಾರ್ ಎಂದು ಗುರುತಿಸಲಾಗಿದೆ. ಮಧುರೈನ ಪಜಂಗನಾಥಂ ಬಳಿ ಮುತ್ತು ಮಾರಿಯಮ್ಮಮ್ ದೇವಸ್ಥಾನದ ಭಕ್ತರಿಗಾಗಿ ಶುಕ್ರವಾರ ದೊಡ್ಡದಾದ ಪಾತ್ರದಲ್ಲಿ ಅನ್ನ ಬೇಯಿಸಲಾಗುತ್ತಿತ್ತು. ಬಿಸಿ ಗಂಜಿಗೆ ಬಿದ್ದ ಮುತ್ತುಕುಮಾರ್ ಅಡುಗೆ ಕೆಲಸಕ್ಕೆ ಸಹಾಯ ಮಾಡುತ್ತಿದ್ದು, ಈ ವೇಳೆ ತಲೆ ತಿರುಗಿ ಬಿಸಿ ಗಂಜಿಗೆ ಬಿದ್ದಿದ್ದಾರೆ ಎನ್ನಲಾಗಿದೆ. ಕೂಡಲೇ ಅಲ್ಲಿದ್ದ ಅನೇಕರು ಮುತ್ತುಕುಮಾರ್ ಅವರನ್ನು ಬಿಸಿ ಗಂಜಿ ಇದ್ದ ಪಾತ್ರದಿಂದ ಹೊರ ತೆಗೆಯಲು ಪ್ರಯತ್ನಿಸಿದ್ದಾರೆ. ಆದರೆ ಸಾಧ್ಯವಾಗಿಲ್ಲ. ಕೊನೆಗೆ ಅವರು ಇಡೀ ಪಾತ್ರವನ್ನೇ ಕೆಳಗೆ ಮಗುಚಿದ್ದಾರೆ. ನಂತರ ಮುತ್ತು ಕುಮಾರ್ ಅರನ್ನು ರಾಜಾಜಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಗಂಭೀರ ಸ್ಥಿತಿಯಲ್ಲಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಎಲ್ಲಾ ದೃಶ್ಯಗಳು ಸೆರೆ ಆಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.