ತಮಿಳುನಾಡಿನಲ್ಲಿ ರಾಮಮಂದಿರ ಪ್ರಾಣಪ್ರತಿಷ್ಠೆ ನೇರಪ್ರಸಾರ ಬ್ಯಾನ್, ನಿರ್ಮಲಾ ಗಂಭೀರ ಆರೋಪ!
ತಮಿಳುನಾಡಿನಲ್ಲಿ ರಾಮ ಮಂದಿರ ಪ್ರಾಣಪ್ರತಿಷ್ಠೆ ನೇರಪ್ರಸಾರ, ಶ್ರೀರಾಮನ ಹೆಸರಿನಲ್ಲಿ ಕಾರ್ಯಕ್ರಮ, ಭಜನೆ, ಅನ್ನಸಂತರ್ಪಣೆಗಳನ್ನು ನಿಷೇಧಿಸಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ತಮಿಳುನಾಡಿನಲ್ಲಿ ನಡೆಯುತ್ತಿರುವ ಸದ್ದಿಲ್ಲದ ಕಾರ್ಯಾಚರಣೆಯನ್ನು ಸೀತಾರಾಮನ್ ಬಹಿರಂಗಪಡಿಸಿದ್ದಾರೆ.
ಚೆನ್ನೈ(ಜ.21) ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಇಡೀ ದೇಶವೇ ಸಜ್ಜಾಗಿದೆ. ದೇಶದ ಮೂಲೆ ಮೂಲೆಯಲ್ಲಿ ಸಂಭ್ರಮ ಮನೆ ಮಾಡಿದೆ. ಪ್ರತಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ, ಪ್ರಸಾದ ವಿತರಣೆ, ಭಜನೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಗಲ್ಲಿ ಗಲ್ಲಿಯಲ್ಲಿ ಶ್ರೀರಾಮನ ಭಜನೆ, ರಾಮಕಥಾ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ವಿವಿಧ ಸಂಘಟನೆಗಳು ಆಯೋಜಿಸಿದೆ. ಆದರೆ ತಮಿಳುನಾಡು ಸರ್ಕಾರ ಶ್ರೀರಾಮನ ಹೆಸರಿನಲ್ಲಿ ಯಾವುದೇ ಕಾರ್ಯಕ್ರಮ,ಪ್ರಸಾದ ವಿತರಣೆ ಹಾಗೂ ಆಯೋಧ್ಯೆ ರಾಮ ಮಂದಿರದ ಪ್ರಾಣಪ್ರತಿಷ್ಠೆ ನೇರಪ್ರಸಾರವನ್ನೂ ನಿಷೇದಿಸಿದೆ ಎಂದು ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್ ಗಂಭೀರ ಆರೋಪ ಮಾಡಿದ್ದಾರೆ.
ತಮಿಳುನಾಡು ಸರ್ಕಾರ ಮೌಖಿಕ ಆದೇಶ ನೀಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ನಿರ್ಮಲಾ ಸೀತಾರಾಮನ್, ಪೊಲೀಸರ ರಹಸ್ಯ ಕಾರ್ಯಾಚರಣೆ ಕುರಿತ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ. ಜನವರಿ 22ರಂದು ಆಯೋಧ್ಯೆ ರಾಮ ಮಂದದಿರದಲ್ಲಿ ನಡೆಯುವ ಪ್ರಾಣಪ್ರತಿಷ್ಠೆ ಕಾರ್ಯಕ್ರಮದ ನೇರಪ್ರಸಾರ ವೀಕ್ಷಿಸುವುದನ್ನು ತಮಿಳುನಾಡು ಸರ್ಕಾರ ನಿಷೇಧಿಸಿದೆ. ತಮಿಳುನಾಡಿನಲ್ಲಿ ಶ್ರೀರಾಮನ 200ಕ್ಕೂ ಹೆಚ್ಚು ದೇವಾಲಯಗಳಿವೆ. ತಮಿಳುನಾಡಿನ ಧಾರ್ಮಿಕ ದತ್ತಿ ಇಲಾಖೆ ಅಡಿಯಲ್ಲಿರುವ ದೇವಸ್ಥಾನದಲ್ಲಿ ಶ್ರೀರಾಮನ ಹೆಸರಿನಲ್ಲಿ ಪೂಜೆ, ಭಜನೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆಯನ್ನೂ ನಿರ್ಬಂಧಿಸಿದೆ. ಇಷ್ಟೇ ಅಲ್ಲ ಖಾಸಗಿ ದೇವಸ್ಥಾನದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವುದು, ರಾಮ ಮಂದಿರ ಪ್ರಾಣಪ್ರತಿಷ್ಠೆ ನೇರ ಪ್ರಸಾರ ಮಾಡುವುದನ್ನೂ ತಮಿಳುನಾಡು ಪೊಲೀಸರು ತಡೆಯುತ್ತಿದ್ದಾರೆ. ಪೆಂಡಾಲ್‌ಗಳನ್ನು ಕಿತ್ತು ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ. ತಮಿಳುನಾಡು ಸರ್ಕಾರದ ಹಿಂದೂ ವಿರೋಧಿ, ದ್ವೇಷಪೂರಿತ ಕ್ರಮವನ್ನು ಬಲವಾಗಿ ಖಂಡಿಸುತ್ತೇನೆ ಎಂದು ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದ್ದಾರೆ.
ಇಂದು ರಾತ್ರಿ 8 ಗಂಟೆಯಿಂದ ಜ.23ರ ವರೆಗೆ ಆಯೋಧ್ಯೆ ಗಡಿ ಬಂದ್, ಅನುಮತಿ ಇಲ್ಲದೆ ಪ್ರವೇಶವಿಲ್ಲ!
ರಾಮ ಮಂದಿರ ಪ್ರಾಣ ಪ್ರತಿಷ್ಠೆ ನೇರ ಪ್ರಸಾದಕ್ಕೆ ನಿಷೇಧಿಸಿರುವ ತಮಿಳುನಾಡು ಸರ್ಕಾರ ಕಾನುನು ಮತ್ತು ಸುವ್ಯವಸ್ಥೆ ಕಾರಣಗಳನ್ನು ಹೇಳಿಕೊಳ್ಳುತ್ತಿದೆ. ಲೈವ್ ಟೆಲಿಕಾಸ್ಟ್‌ನಿಂದ ತಮಿಳುನಾಡಿನಲ್ಲಿ ಕೋಮು ಸಂಘರ್ಷ ಹೆಚ್ಚಾಗುವ ಸಾಧ್ಯತೆ ಇದೆ ಅನ್ನೋ ಕಾರಣವನ್ನೂ ಸರ್ಕಾರ ಅನಧಿಕೃತವಾಗಿ ಪ್ರಚಾರ ಮಾಡುತ್ತಿದೆ. ಆದರೆ ರಾಮ ಮಂದಿರ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಬಂದ ದಿನವೂ ತಮಿಳುನಾಡು ಮಾತ್ರವಲ್ಲ, ದೇಶದ ಯಾವುದೆ ಭಾಗದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಿಲ್ಲ. ತಮಿಳುನಾಡಿನಲ್ಲಿ ಕಾನೂನು ಸುವ್ಯಸ್ಥೆ ಹಾಳುಮಾಡುವಂತ ಪರಿಸ್ಥಿತಿ ಇಲ್ಲ. ಪ್ರಧಾನಿ ಮೋದಿ ರಾಮ ಮಂದಿರ ಶಿಲನ್ಯಾಸ ಮಾಡಿದ ದಿನವೂ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆಯಾಗಿಲ್ಲ. ಹಿಂದೂಗಳುು ಸ್ವಯಂ ಪ್ರೇರಿತವಾಗಿ ರಾಮ ಮಂದಿರ ಪ್ರಾಣಪ್ರತಿಷ್ಠೆಯನ್ನು ಸಂಭ್ರಮಿಸಲು ಡಿಎಂಕೆ ಸರ್ಕಾರ ನಿರ್ಬಂಧವಿಧಿಸಿರುವುದು ಖಂಡನೀಯ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ರಾಮಲಲ್ಲಾ ಪ್ರಾಣಪ್ರತಿಷ್ಠೆ To ಸಾರ್ವಜನಿಕ ಕಾರ್ಯಕ್ರಮ, ಜ.22ರ ಪ್ರಧಾನಿ ಮೋದಿ ವೇಳಾಪಟ್ಟಿ ವಿವರ!