ಇಂದು ರಾತ್ರಿ 8 ಗಂಟೆಯಿಂದ ಜ.23ರ ವರೆಗೆ ಆಯೋಧ್ಯೆ ಗಡಿ ಬಂದ್, ಅನುಮತಿ ಇಲ್ಲದೆ ಪ್ರವೇಶವಿಲ್ಲ!
ಆಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಇನ್ನು ಎರಡು ದಿನ ಮಾತ್ರ ಬಾಕಿ. ಜನವರಿ 22ರಂದು ಪ್ರಾಣಪ್ರತಿಷ್ಠೆ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಸೇರಿದಂತೆ ಗಣ್ಯರು ಆಯೋಧ್ಯೆಯತ್ತ ಆಗಮಿಸುತ್ತಿದ್ದಾರೆ. ಇಂದು ರಾತ್ರಿ 8 ಗಂಟೆಯಿಂದ ಆಯೋಧ್ಯೆ ಗಡಿಗಳು ಬಂದ್ ಆಗಲಿದೆ. ಅನುಮತಿ ಇಲ್ಲದೆ ಯಾರಿಗೂ ಪ್ರವೇಶವಿಲ್ಲ. ಕೇವಲ ಪಾಸ್ ಹೊಂದಿದವರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ.
ಆಯೋಧ್ಯೆ(ಜ.20) ಭಗವಾನ್ ಶ್ರೀರಾಮ ಮಂದಿರ ಪ್ರಾಣಪ್ರತಿಷ್ಠೆ ಜನವರಿ 22ರಂದು ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆ ನೆರವೇರಿಸಲಿದ್ದಾರೆ. ಈಗಾಗಲೇ ಗಣ್ಯರು ಆಯೋಧ್ಯೆಗೆ ಆಗಮಿಸುತ್ತಿದ್ದಾರೆ. ಪ್ರಧಾನಿ ಮೋದಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ 6000ಕ್ಕೂ ಹೆಚ್ಚು ಗಣ್ಯರು ಪ್ರಾಣಪ್ರತಿಷ್ಠೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದೀಗ ಸುರಕ್ಷತೆ ದೃಷ್ಟಿಯಿಂದ ಇಂದು(ಜ.20) ರಾತ್ರಿ 8 ಗಂಟೆಯಿಂದ ಆಯೋಧ್ಯೆ ಗಡಿಗಳು ಬಂದ್ ಆಗಲಿದೆ. ಅನುಮತಿ ಇಲ್ಲದೆ ಯಾರಿಗೂ ಪ್ರವೇಶವಿಲ್ಲ. ಗಡಿಯಿಂದ ಆಯೋಧ್ಯೆ ಒಳ ಪ್ರವೇಶಿಸಲು ಪಾಸ್ ಅಗತ್ಯವಿದೆ.
ಮೋದಿ ಸೇರಿದಂತ ಸಾವಿರಾರು ಗಣ್ಯರು ಆಗಮಿಸುವ ಹಿನ್ನಲೆಯಲ್ಲಿ ಭದ್ರತಾ ಎಜೆನ್ಸಿಗಳು ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. ಭದ್ರತಾ ಕಾರಣದಿಂದ ಇಂದು ರಾತ್ರಿಯಿಂದಲೇ ಆಯೋಧ್ಯೆ ಗಡಿಗಳನ್ನು ಬಂದ್ ಮಾಡಲಾಗುತ್ತದೆ. ಬೇರೆಕಡೆಯಿಂದ ಅಯೋಧ್ಯೆ ಪ್ರವೇಶಕ್ಕೆ ಅನುಮತಿ ಕಡ್ಡಾಯವಾಗಿದೆ. ಆಯೋಧ್ಯೆಯಿಂದ ಹೊರ ಹೊಗಲು ಸಮಸ್ಯೆ ಇಲ್ಲ. ಆದರೆ ಆಯೋಧ್ಯೆ ಒಳ ಪ್ರವೇಶಿಸಲು ಮಾತ್ರ ಅನುಮತಿ ಅಗತ್ಯವಿದೆ.
ರಾಮಲಲ್ಲಾ ಪ್ರಾಣಪ್ರತಿಷ್ಠೆ To ಸಾರ್ವಜನಿಕ ಕಾರ್ಯಕ್ರಮ, ಜ.22ರ ಪ್ರಧಾನಿ ಮೋದಿ ವೇಳಾಪಟ್ಟಿ ವಿವರ!
ಆಹ್ವಾನಿತ ಗಣ್ಯರು, ಪಾಸ್ ಹೊಂದಿದ ವ್ಯಕ್ತಿಗಳಿಗೆ ಮಾತ್ರ ಆಯೋಧ್ಯೆಗೆ ಪ್ರವೇಶ ನೀಡಲಾಗುತ್ತದೆ. ಜನವರಿ 20 ರಾತ್ರಿ 8 ಗಂಟೆಯಿಂದ ಜನವರಿ 23ರ ವರೆಗೆ ಆಯೋಧ್ಯೆ ಗಡಿಗಳು ಬಂದ್ ಆಗಿರಲಿದೆ. ಜನವರಿ 22ರಂದು ಪ್ರಾಣಪ್ರತಿಷ್ಠೆ ಬಳಿಕವೂ ಗಡಿಗಳು ತೆರೆದುಕೊಳ್ಳುವುದಿಲ್ಲ. ಜನವರಿ 23ರಿಂದ ಆಯೋಧ್ಯೆ ಗಡಿಗಳು ತೆರೆದುಕೊಳ್ಳಲಿದೆ. ಜನವರಿ 23ರಿದಂದಲೇ ರಾಮ ಮಂದಿರ ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಲಿದೆ.
ಮಾಧ್ಯಮ ಹಾಗೂ ಪತ್ರಕರ್ತರು ತಮ್ಮ ವಾಹನಗಳನ್ನು ಫಟಿಕ ಶಿಲಾ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡುವುದು ಕಡ್ಡಾಯವಾಗಿದೆ. ಆಯೋಧ್ಯೆಯಲ್ಲಿ ಯಾವುದೇ ವಾಹನ ಓಡಾಡುವಂತಿಲ್ಲ. ಕೇವಲ ಅನುಮತಿ ಹೊಂದಿದ ವಾಹನಗಳು, ಟ್ರಸ್ಟ್, ಭದ್ರತಾ ಪಡೆ ಸೇರಿದಂತೆ ಆಯ್ದ ವಾಹನಗಳಿಗೆ ಮಾತ್ರ ಅವಕಾಶವಿದೆ.
ಸಾರ್ವಜನಿಕರಿಗೆ ರಾಮ ಮಂದಿರ ದರ್ಶನಕ್ಕೆ ಜನವರಿ 23ರಿಂದ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ಯಾವುದೇ ಅನಾನುಕೂಲತೆಗಳು ಆಗದಂತೆ ನೋಡಿಕೊಳ್ಳಲು ಟ್ರಸ್ಟ್ ಮುಂಜಾಗ್ರತ ಕ್ರಮ ಕೈಗೊಂಡಿದೆ. ಇನ್ನು ಆಯೋಧ್ಯೆಗೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. ವಿಮಾನ ಸಾರಿಗೆ ಕೂಡ ಲಭ್ಯವಿದೆ. ಆಯೋಧ್ಯೆ ಹಾಗೂ ಸುತ್ತಮುತ್ತಲಿನ ಪಟ್ಟಣಗಳಲ್ಲಿನ ಹೊಟೆಲ್ ಸಂಪೂರ್ಣ ಬುಕ್ ಆಗಿವೆ.
ರಾಮೇಶ್ವರದಲ್ಲಿ ಪವಿತ್ರ ಸಮುದ್ರ ಸ್ನಾನ ಮಾಡಿ ರಾಮನಾಥನ ದರ್ಶನ ಪಡೆದ ಮೋದಿ!