ರಾಮಲಲ್ಲಾ ಪ್ರಾಣಪ್ರತಿಷ್ಠೆ To ಸಾರ್ವಜನಿಕ ಕಾರ್ಯಕ್ರಮ, ಜ.22ರ ಪ್ರಧಾನಿ ಮೋದಿ ವೇಳಾಪಟ್ಟಿ ವಿವರ!
ಆಯೋಧ್ಯೆ ರಾಮ ಮಂದಿರದಲ್ಲಿ ಜನವರಿ 22ರಂದು ರಾಮಲಲ್ಲಾ ಪ್ರಾಣಪ್ರತಿಷ್ಠೆ ನಡೆಯಲಿದೆ. ಪ್ರಧಾನಿ ಮೋದಿ ಪ್ರಾಣಪ್ರತಿಷ್ಠೆ ನೆರವೇರಿಸಲಿದ್ದಾರೆ. ಬಳಿಕ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಷಣ ಮಾಡಲಿದ್ದಾರೆ. ಜೊತೆ ಶಿವ ಮಂದಿರ ದರ್ಶನ ಸೇರಿದಂತೆ ಹಲವು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಜನವರಿ 22 ರಂದು ಆಯೋಧ್ಯೆಯಲ್ಲಿ ಪ್ರಧಾನಿ ಮೋದಿ ವೇಳಾಪಟ್ಟಿ ಇಲ್ಲಿದೆ.
ಆಯೋಧ್ಯೆ(ಜ.20) ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ದೇಶವೆ ಸಜ್ಜಾಗಿದೆ. ಸಂಭ್ರಮ, ಸಡಗರ ಮನೆ ಮಾಡಿದೆ. ಸತತ ಹೋರಾಟ, ತ್ಯಾಗ, ಬಲಿದಾನಗಳ ಬಳಿಕ ಶ್ರೀರಾಮ ಮತ್ತೆ ತನ್ನ ಜನ್ಮಸ್ಥಾನದಲ್ಲಿ ವಿರಾಜಮಾನನಾಗುತ್ತಿದ್ದಾನೆ. ಪ್ರಧಾನಿ ನರೇಂದ್ರ ಮೋದಿ ಜನವರಿ 22ರಂದು ರಾಮಲಲ್ಲಾನ ಪ್ರಾಣಪ್ರತಿಷ್ಠೆ ನೆರವೇರಿಸಲಿದ್ದಾರೆ. ರಾಮ ಮಂದಿರದಲ್ಲಿ ಈಗಾಗಲೋ ಪೂಜಾ ಕೈಂಕರ್ಯಗಳು ನಡೆಯುತ್ತಿದೆ. ಜನವರಿ 22ರಂದು ಪ್ರಾಣಪ್ರತಿಷ್ಠೆ ಬಳಿಕ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮೋದಿ ಮಾತನಾಡಲಿದ್ದಾರೆ. ಇಷ್ಟೇ ಅಲ್ಲ ಹಲವು ಕಾರ್ಯಕ್ರಮಗಳಲ್ಲಿ ಮೋದಿ ಪಾಲ್ಗೊಳ್ಳುತ್ತಿದ್ದಾರೆ.
ಆಯೋಧ್ಯೆಯಲ್ಲಿ ಪ್ರಧಾನಿ ಮೋದಿ ವೇಳಾಪಟ್ಟಿ(ಜನವರಿ 22)
ಮಧ್ಯಾಹ್ನ 12.05ಕ್ಕೆ ರಾಮ ಮಂದಿರದ ಗರ್ಭಗುಡಿಗೆ ಪ್ರಧಾನಿ ಮೋದಿ ಪ್ರವೇಶ
ರಾಮಲಲ್ಲಾ ಪ್ರಾಣಪ್ರತಿಷ್ಠೆ ನೇರವೇರಿಸಲಿರುವ ಪ್ರಧಾನಿ ಮೋದಿ
ರಾಮಲಲ್ಲಾಗೆ ವಿಶೇಷ ಆರತಿ ಪೂಜೆ ನೆರವೇರಿಸಲಿರುವ ಪ್ರಧಾನಿ ಮೋದಿ
ಮಧ್ಯಾಹ್ನ 1 ಗಂಟೆಗೆ ಆಯೋಧ್ಯೆಯಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿ
2.30ಕ್ಕೆ ಆಯೋಧ್ಯೆಯಲ್ಲಿರುವ ಶಿವ ಮಂದಿರ ಕುಬೇರ ಟೀಲಾ ದೇವಸ್ಥಾನಕ್ಕೆ ಮೋದಿ ಬೇಟಿ ಹಾಗೂ ದರ್ಶನ
ರಾಮೇಶ್ವರದಲ್ಲಿ ಪವಿತ್ರ ಸಮುದ್ರ ಸ್ನಾನ ಮಾಡಿ ರಾಮನಾಥನ ದರ್ಶನ ಪಡೆದ ಮೋದಿ!
ರಾಮ ಮಂದಿರ ಪ್ರಾಣಪ್ರತಿಷ್ಠೆಗೂ ಮೊದಲು ಪ್ರಧಾನಿ ಮೋದಿ ಸರಯು ನದಿಯಲ್ಲಿ ಪವಿತ್ರ ಸ್ನಾನ ಮಾಡಲಿದ್ದಾರೆ. ರಾಮ ಮಂದಿರ ಪ್ರಾಣ ಪ್ರತಿಷ್ಠೆ ಹಿನ್ನಲೆಯಲ್ಲಿ ಈಗಾಗಲೇ 11 ದಿನಗಳ ಕಠಿಣ ವೃತ ಕೈಗೊಂಡಿರುವ ಪ್ರಧಾನಿ ಮೋದಿ, ರಾಮಾಯಣ ಕಾಲದಿಂದ ಗುರುತಿಸಲ್ಪಟ್ಟಿರುವ ಹಲವು ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇಂದು ರಾಮೇಶ್ವರಂ ರಂಗನಾಥಸ್ವಾಮಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ವ್ರತಾಚರಣೆ ಮಾಡುತ್ತಿರುವ ಮೋದಿ, ನೆಲದ ಮೇಲೆ ಮಲಗುತ್ತಿದ್ದಾರೆ ಹಾಗೂ ಕೇವಲ ಎಳನೀರು ಮಾತ್ರ ಸೇವಿಸುತ್ತ ಕಠಿಣ ಉಪವಾಸ ಮಾಡುತ್ತಿದ್ದಾರೆ ಎಂಬುದು ತಿಳಿದಿತ್ತು. ಆದರೆ ಇದರೊಂದಿಗೆ ಮೋದಿ, ಶಾಸ್ತ್ರಗಳ ಪ್ರಕಾರ ಗೋ ಪೂಜೆ, ಗೋವಿಗೆ ಆಹಾರ ನೀಡುವುದು, ಅನ್ನದಾನ ಮತ್ತು ವಸ್ತ್ರದಾನ ಸೇರಿದಂತೆ ಇತರ ಅನೇಕ ಆಚರಣೆ ಮಾಡುತ್ತಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ರಾಮಾಯಣ ಅಥವಾ ಶ್ರೀರಾಮನಿಗೆ ಸಂಬಂಧಿಸಿದ ಸ್ಥಳಗಳೆಂಬ ಇತಿಹಾಸವನ್ನು ಹೊಂದಿರುವ ದೇವಸ್ಥಾನಗಳಿಗೆ ಮೋದಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ನಾಸಿಕ್‌ನಿಂದ ಆರಂಭಗೊಂಡ ಪ್ರಧಾನಿ ಮೋದಿ ಯಾತ್ರೆ ಇದೀಗ ತಮಿಳುನಾಡಿನ ರಾಮೇಶ್ವರಂ ತಲುಪಿದೆ.
ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಅಮೆರಿಕ, ಬ್ರಿಟನ್ ಸೇರಿ 56 ದೇಶದ 100 ಗಣ್ಯರು!