Watch: ಕಾವೇರಿ ನೀರಿಗಾಗಿ ಸತ್ತ ಇಲಿಗಳನ್ನು ಬಾಯಲಿಟ್ಟುಕೊಂಡು ಪ್ರತಿಭಟಿಸಿದ ತಮಿಳುನಾಡು ರೈತರು!
ಕಾವೇರಿ ಜಲವಿವಾದಕ್ಕೆ ಸಂಬಂಧಪಟ್ಟಂತೆ ತಮಿಳುನಾಡಿನಲ್ಲೂ ಭಾರಿ ಪ್ರತಿಭಟನೆಗಳಾಗಿವೆ. ತಮಿಳುನಾಡಿನಲ್ಲಿ ನಡೆದ ಪ್ರತಿಭಟನೆಯ ವೇಳೆ ರೈತರು ಸತ್ತ ಇಲಿಯನ್ನು ಬಾಯಲ್ಲಿ ಇಟ್ಟುಕೊಂಡು ಕರ್ನಾಟಕ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಬೆಂಗಳೂರು (ಸೆ.26): ಕಾವೇರಿ ನೀರಿನ ವಿಚಾರವಾಗಿ ರಾಜ್ಯಗಳ ನಡುವೆ ನಡೆಯುತ್ತಿರುವ ಜಟಾಪಟಿಯ ನಡುವೆಯೇ ತಿರುಚಿರಾಪಳ್ಳಿಯಲ್ಲಿ ತಮಿಳುನಾಡಿನ ರೈತರ ಗುಂಪೊಂದು ಸತ್ತ ಇಲಿಗಳನ್ನು ಬಾಯಿಯಲ್ಲಿ ಇಟ್ಟುಕೊಂದು ಕರ್ನಾಟಕ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿತು. ಸುದ್ದಿ ಸಂಸ್ಥೆ ಎಎನ್‌ಐ "ಪ್ರತಿಭಟನೆ" ಯ ವೀಡಿಯೊವನ್ನು ಹಂಚಿಕೊಂಡ ಒಂದು ಗಂಟೆಯೊಳಗೆ ಈಗಾಗಲೇ 62,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ದಾಖಲಾಗಿದೆ. ಕರ್ನಾಟಕವು ಕಾವೇರಿ ನೀರನ್ನು ಬಿಡುಗಡೆ ಮಾಡದಿದ್ದರೆ, ನೀರಿನ ಸಮಸ್ಯೆಯಿಂದ ಭತ್ತದ ಕೃಷಿಯ ಮೇಲೆ ಪರಿಣಾಮ ಬೀರುತ್ತದೆ. ಈಗಾಗಲೇ ಬಡತನಕ್ಕೆ ತಳ್ಳಲ್ಪಟ್ಟಿರುವ ರೈತರು, ಬದುಕುವ ಸಲುವಾಗಿ ಇಲಿ ಮಾಂಸವನ್ನು ತಿನ್ನಲು ಒತ್ತಾಯಿಸಲಾಗುತ್ತದೆ ಎನ್ನುವ ಸೂಚ್ಯಾರ್ಥವಾಗಿ ಬಾಯಲ್ಲಿ ಇಲ್ಲಿಯನ್ನು ಇಟ್ಟುಕೊಂಡು ಪ್ರತಿಭಟನೆ ಮಾಡಿದ್ದಾರೆ. ಹಾಗಂತ ತಿರುಚನಾಪಳ್ಳಿಯ ರೈತರು ಸತ್ತ ಇಲಿಯನ್ನು ಬಾಯಲ್ಲಿ ಇಟ್ಟುಕೊಂಡು ಪ್ರತಿಭಟನೆ ನಡೆಸಿದ್ದು ಇದು ಮೊದಲೇನಲ್ಲ.
2017 ರಲ್ಲಿ, 65 ವರ್ಷದ ಚಿನ್ನಗೊಡಂಗಿ ಪಳನಿಸಾಮಿ ತಮಿಳುನಾಡಿನ ರೈತರ ಸಂಕಷ್ಟಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಜೀವಂತ ಇಲಿಯನ್ನು ಬಾಯಲ್ಲಿ ಕಚ್ಚಿಕೊಂಡು ಪ್ರತಿಭಟನೆ ನಡೆಸಿದ್ದರು. "ನಾನು ಮತ್ತು ನನ್ನ ಸಹ ರೈತರ ಪರಿಸ್ಥಿತಿ ಸುಧಾರಿಸದಿದ್ದರೆ, ಇಲ್ಲಿನ ರೈತರು ಬದುಕುವ ಸಲುವಾಗಿ ಇಲಿಗಳನ್ನೇ ತಿನ್ನಬೇಕಾಗುತ್ತದೆ ಎನ್ನುವ ಸಂದೇಶವನ್ನು ರವಾನಿಸಲು ಪ್ರಯತ್ನಿಸುತ್ತಿದ್ದೇವೆ" ಎಂದು ಅವರು ತಿಳಿಸಿದ್ದರು.
ಕಾವೇರಿ ನೀರು ಹರಿಸಲು ತಮಿಳುನಾಡು ರೈತರ ಪ್ರತಿಭಟನೆ, ಸಿಎಂ ಸಿದ್ದು ಭಾವಚಿತ್ರಕ್ಕೆ ಎಡೆ ಇಟ್ಟು ಪ್ರೊಟೆಸ್ಟ್!
2016ರಲ್ಲಿ ತಮಿಳುನಾಡಿನ ತಿರುಚ್ಚಿಯಲ್ಲಿ ಸುಮಾರು 30 ರೈತರ ಗುಂಪು ಸತ್ತ ಇಲಿಗಳನ್ನು ಬಾಯಿಯಲ್ಲಿ ಹಿಡಿದುಕೊಂಡು ಪ್ರತಿಭಟನೆ ನಡೆಸಿತ್ತು. ನೀರಿನ ಬಿಕ್ಕಟ್ಟು ಭತ್ತದ ಕೃಷಿಯ ಮೇಲೆ ಪರಿಣಾಮ ಬೀರಿದೆ ಮತ್ತು ಸರ್ಕಾರವು ಅವರಿಗೆ ಸಹಾಯ ಮಾಡದಿದ್ದರೆ ಬಡತನದಿಂದ ಇಲಿ ಮಾಂಸವನ್ನು ತಿನ್ನುವುದು ಅನಿವಾರ್ಯವಾಗುತ್ತದೆ ಎಂದು ಹೇಳಿದ್ದರು.
ಮಾತು ಜೋರು.. ನಿರ್ಧಾರ ನಿಧಾನ.. ನಡೆ ನಿಗೂಢ..! ಸಿದ್ದು ಸೈಲೆಂಟ್ ಆಟದ ಹಿಂದಿದ್ಯಾ ಪೊಲಿಟಿಕಲ್ ಗೇಮ್‌ಪ್ಲಾನ್..?