Asianet Suvarna News Asianet Suvarna News

ಕಾವೇರಿ ನೀರು ಹರಿಸಲು ತಮಿಳುನಾಡು ರೈತರ ಪ್ರತಿಭಟನೆ, ಸಿಎಂ ಸಿದ್ದು ಭಾವಚಿತ್ರಕ್ಕೆ ಎಡೆ ಇಟ್ಟು ಪ್ರೊಟೆಸ್ಟ್!

ಕಾವೇರಿ ನದಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯ ಸರಿಪಡಿಸಲು ಆಗ್ರಹಿಸಿ ಇಂದು ಬೆಂಗಳೂರು ಬಂದ್ ಮಾಡಿ ಪ್ರತಿಭಟನೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಭಾರಿ ಪ್ರತಿಭಟನೆ ನಡೆಯುತ್ತಿದೆ. ಇದರ ನಡುವೆ ತಮಿಳುನಾಡಿನಲ್ಲೂ ಪ್ರತಿಭಟನೆ ನಡೆಯುತ್ತಿದೆ. ಕಾವೇರಿ ನೀರು ಹರಿಸುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಭಾವಚಿತ್ರಕ್ಕೆ ಎಡೆ ಇಟ್ಟು ಪುಷ್ಪನಮನ ಸಲ್ಲಿಸಿ ಪ್ರತಿಭಟನೆ ನಡೆಸಿದ್ದಾರೆ.
 

Cauvery Water dispute Tamil nadu farmers stage protest against Karnataka Govt to release water cm
Author
First Published Sep 26, 2023, 3:28 PM IST

ಚೆನ್ನೈ(ಸೆ.26) ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಬರಗಾಲದ ಪರಿಸ್ಥಿತಿ ಎದುರಾಗಿದೆ. ಮಳೆ ಕೊರತೆಯಿಂದ ನದಿ, ಕೊಳ್ಳಲು ಈಗಲೇ ಬತ್ತಿ ಹೋಗುತ್ತಿದೆ. ಪ್ರಮುಖವಾಗಿ ಕರ್ನಾಟಕದ ಜೀವನದಿ ಕಾವೇರಿ ಬರಿದಾಗುತ್ತಿದ್ದಾಳೆ. ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಇದರ ನಡುವೆ ನೀರಿಗಾಗಿ ಪಟ್ಟು ಹಿಡಿದಿರುವ ತಮಿಳುನಾಡು ಯಶಸ್ಸು ಸಾಧಿಸಿದೆ. ಕಾವೇರಿ ನದಿ ನೀರು ಪ್ರಾದಿಕಾರ, ನೀರು ನಿಯಂತ್ರಣ ಮಂಡಳಿ, ಸುಪ್ರೀಂ ಕೋರ್ಟ್‌ನಿಂದಲೂ ತಮಿಳುನಾಡು ಪರ ಆದೇಶ ಬಂದಿದೆ. ಕರ್ನಾಟಕಕ್ಕೆ ಕುಡಿಯಲು ನೀರು ಇಲ್ಲದಿರುವ ಪರಿಸ್ಥಿತಿ ಇರುವಾಗ ನೀರು ಹಂಚಿಕೆ ಅಸಾಧ್ಯ ಅನ್ನೋ ಕರ್ನಾಟಕ ವಾದಕ್ಕೆ ಎಳ್ಳಷ್ಟು ಮನ್ನಣೆ ಸಿಕ್ಕಿಲ್ಲ. ಕರ್ನಾಟಕಕ್ಕೆ ಆಗಿರುವ ಅನ್ಯಾಯ ವಿರೋಧಿಸಿ ಇಂದು ಬೆಂಗಳೂರು ಬಂದ್ ನಡೆಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಅತ್ತ ತಮಿಳುನಾಡಿನಲ್ಲೂ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕರ್ನಾಟಕ ಸಮಪರ್ಕವಾಗಿ ನೀರು ಬಿಡುತ್ತಿಲ್ಲ, ತಕ್ಷಣವೇ ನಮ್ಮ ಪಾಲಿನ ನೀರು ಹರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ತಮಿಳುನಾಡು ರೈತರು ನಮ್ಮ ಪಾಲಿನ ನೀರು ಬಿಟ್ಟುಬಿಡಿ. ಕರ್ನಾಟಕ ಇದುವರೆಗೆ ಶೇಕಡಾ 30 ರಷ್ಟು ಮಾತ್ರ ನೀರು ಹರಿಸಿದೆ. ಇನ್ನೂ ಶೇಕಡಾ 70 ರಷ್ಟು ನೀರು ಹರಿಸದೆ ನಿಯಮಕ್ಕೆ ವಿರುದ್ಧವಾಗಿ ನಡೆದುಕೊಂಡಿದೆ ಎಂದು ಆರೋಪಿಸಿದೆ. ಇಷ್ಟೇ ಅಲ್ಲ ತಮಿಳುನಾಡಿನ ರೈತರು ಕರ್ನಾಟಕ ಸರ್ಕಾರದ ವಿರುದ್ಧ ಭಾರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾವಚಿತ್ರಕ್ಕೆ ಎಡೆಇಟ್ಟು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಪುಷ್ಪನಮನ ಸಲ್ಲಿಸಿ ಕಾವೇರಿ ನದಿ ನೀರು ಹರಿಸುವಂತೆ ಪ್ರತಿಭಟನೆ ನಡೆಸಿದ್ದಾರೆ.

 

 

ಬಂದ್ ನಡುವೆ ಕರ್ನಾಟಕ್ಕೆ ಶಾಕ್, ತಮಿಳುನಾಡಿಗೆ ನಿತ್ಯ 3 ಸಾವಿರ ಕ್ಯೂಸೆಕ್ ನೀರು ಬಿಡಲು ಶಿಫಾರಸು!

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ವಿರೋಧಿಸಿ ಇಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಸಂಪೂರ್ಣ ಬೆಂಗಳೂರು ಬಂದ್ ನಡೆಸಲಾಗಿದೆ. ಕನ್ನಡ ಪರ ಸಂಘಟನೆಗಳು, ರೈತ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳು ಜೊತೆಗೂಡಿ ಬೆಂಗಳೂರು ಬಂದ್ ಪ್ರತಿಭಟನೆ ನಡೆಸುತ್ತಿದೆ. ಇನ್ನು ಶುಕ್ರವಾರ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಅತ್ತ ತಮಿಳುನಾಡಿನ ತಿರುಚಿ ಭಾಗದ ರೈತರು ಕರ್ನಾಟಕ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. 

ಬೆಂಗಳೂರು ಬಂದ್‌ಗೂ ಮೊದಲು ಮಂಡ್ಯ ಜಿಲ್ಲಾ ಹಿತರಕ್ಷಣಾ ಸಮಿತಿ ಸೇರಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಮಂಡ್ಯ ನಗರ, ಮದ್ದೂರು ತಾಲೂಕು ಬಂದ್ ಬಂದ್‌ಗೆ ಶನಿವಾರ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು.. ಪ್ರತಿಭಟನೆ, ರಸ್ತೆ ತಡೆಗಳ ಹೊರತಾಗಿಯೂ ಬಂದ್‌ ಸಂಪೂರ್ಣ ಶಾಂತಿಯುತವಾಗಿತ್ತು. ವರ್ತಕರು, ವ್ಯಾಪಾರಿಗಳು ಹಾಗೂ ವಾಣಿಜ್ಯೋದ್ಯಮಿಗಳು ಬಂದ್‌ಗೆ ಪೂರ್ಣ ಬೆಂಬಲ ಘೋಷಿಸಿದ್ದ ಹಿನ್ನೆಲೆಯಲ್ಲಿ ವಾಣಿಜ್ಯ ಮತ್ತು ವ್ಯಾಪಾರ ಬಹುತೇಕ ಸ್ಥಗಿತಗೊಂಡಿತ್ತು. ಬಹುತೇಕ ಎಲ್ಲಾ ಶಾಲಾ-ಕಾಲೇಜುಗಳಿಗೂ ರಜೆ ಘೋಷಿಸಿದ್ದರಿಂದ ವಿದ್ಯಾರ್ಥಿಗಳೂ ಬೀದಿಗಿಳಿದು ಹೋರಾಟದಲ್ಲಿ ಪಾಲ್ಗೊಂಡರು. ಇನ್ನು ವಕೀಲರು ಕೂಡ ಕೋರ್ಟ್‌ ಕಲಾಪ ಬಹಿಷ್ಕರಿಸಿ ಮೆರವಣಿಗೆ ನಡೆಸಿ ಬಂದ್‌ಗೆ ಕೈಜೋಡಿಸಿದರು.

ಬೆಂಗಳೂರು ಬಂದ್‌ ಹಿಂಪಡೆದ ಕುರುಬೂರು ಶಾಂತಕುಮಾರ್‌: ಯಶಸ್ವಿಗೊಳಿಸಿದ ಎಲ್ಲರಿಗೂ ಧನ್ಯವಾದ ಅರ್ಪಣೆ

Follow Us:
Download App:
  • android
  • ios