Asianet Suvarna News Asianet Suvarna News

ತಮಿಳುನಾಡಿನ ಧಾರ್ಮಿಕ ಉತ್ಸವದ ಹೋರ್ಡಿಂಗ್‌ನಲ್ಲಿ ಹಾಲಿನ ಕೊಡ ಹೊತ್ತ ಪೋರ್ನ್‌ ಸ್ಟಾರ್‌ ಮಿಯಾ ಖಲೀಫಾ!

Aadi Perukku festival Mia Khalifa Photo ಹೋರ್ಡಿಂಗ್‌ನಲ್ಲಿ ಮಿಯಾ ಖಲೀಫಾರನ್ನು ಸಾಂಪ್ರದಾಯಿಕ ಹಾಲಿನ ಕೊಡ ಹೊತ್ತ ರೂಪದಲ್ಲಿ ಚಿತ್ರಿಸಲಾಗಿದೆ. ಇದನ್ನು ಗಮನಿಸಿದ ಬೆನ್ನಲ್ಲಿಯೇ ಸ್ಥಳದಲ್ಲಿ ಗೊಂದಲಮಯ ವಾತಾವರಣ ನಿರ್ಮಾಣವಾಗಿತ್ತು.

Tamil Nadu Ex Porn Star Mia Khalifa in Religious Hoarding san
Author
First Published Aug 8, 2024, 9:56 PM IST | Last Updated Aug 8, 2024, 9:56 PM IST

ನವದೆಹಲಿ (ಆ.8): ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿ ಧಾರ್ಮಿಕ ಉತ್ಸವದ ಹೋರ್ಡಿಂಗ್‌ನಲ್ಲಿ ಮಾಜಿ ಪೋರ್ನ್‌ ಸ್ಟಾರ್‌ ಮಿಯಾ ಖಲೀಫಾ ಚಿತ್ರವನ್ನು ಬಳಸಿದ್ದು ವಿವಾದಕ್ಕೆ ಕಾರಣವಾಗಿದೆ. ಆದಿ ಪೆರುಕ್ಕು ಹಬ್ಬದ ಅಲಂಕಾರದ ಭಾಗವಾಗಿದ್ದ ಹೋರ್ಡಿಂಗ್‌ನಲ್ಲಿ ಪೋರ್ನ್‌ ಸ್ಟಾರ್‌ ಮಿಯಾ ಖಲೀಫಾ ಸಾಂಪ್ರದಾಯಿಕ ಹಾಲಿನ ಕೊಡವನ್ನು ಹೊತ್ತ ರೀತಿಯಲ್ಲಿ ಚಿತ್ರಿಸಲಾಗಿದೆ. ಇದು ಗೊತ್ತಾದ ಬೆನ್ನಲ್ಲಿಯೇ ಸ್ಥಳದಲ್ಲಿ ಗೊಂದಲಮಯ ವಾತಾವರಣ ನಿರ್ಮಾಣವಾಗಿತ್ತು. ಆದಿ ಪೆರುಕ್ಕು ಉತ್ಸವವು ಪಾರ್ವತಿಯ ಅವತಾರವಾದ ಅಮ್ಮನ್‌ಗೆ ಸಮರ್ಪಿತವಾದ ದೇವಾಲಯಗಳಲ್ಲಿ ದೊಡ್ಡದಾಗಿ ಆಚರಣೆ ಮಾಡಲಾಗುತ್ತದೆ. ಕುರುವಿಮಲೈನಲ್ಲಿ, ನಾಗತಮ್ಮನ್ ಮತ್ತು ಸೆಲ್ಲಿಯಮ್ಮನ್ ದೇವಾಲಯಗಳು ಉತ್ಸವದ ಅಂಗವಾಗಿ ದೀಪಗಳು ಮತ್ತು ಹೋರ್ಡಿಂಗ್‌ಗಳಿಂದ ಅಲಂಕರಿಸಲ್ಪಟ್ಟವು. ಇಲ್ಲಿ ಹಾಕಲಾಗಿದ್ದ ಹೋರ್ಡಿಂಗ್‌ನ ಒಂದರಲ್ಲಿ ಮಿಯಾ ಖಲೀಫಾರನ್ನು ಸಾಂಪ್ರದಾಯಿಕವಾಗಿ ಚಿತ್ರಿಸಲಾಗಿದೆ. ಹಳದಿ ಬಣ್ಣದ ಡ್ರೆಸ್‌ನಲ್ಲಿ ಹಾಲಿನ ಕೊಡವನ್ನು ತಲೆಯ ಮೇಲೆ ಹೊತ್ತಂತೆ ಆಕೆಯ ಫೋಟೋವನ್ನು ಹಾಕಲಾಗಿದೆ.

ಆಧಾರ್ ಕಾರ್ಡ್ ಮಾದರಿಯಲ್ಲಿ ಸ್ಥಳೀಯ ವ್ಯಕ್ತಿಗಳ ಚಿತ್ರಗಳನ್ನು ಕೂಡ  ಹೋರ್ಡಿಂಗ್‌ನಲ್ಲಿ ಹಾಕಲಾಗಿದೆ. ಈ ವಿಚಾರ ಗೊತ್ತಾದ ಬೆನ್ನಲ್ಲಿಯೇ ಅನಾಮಿಕರೊಬ್ಬರು ಇದನ್ನು ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದು, ಚರ್ಚೆಗೆ ಕಾರಣವಾಗಿದೆ. ಕೊನೆಗೆ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದು, ಅಧಿಕಾರಿಗಳು ಕೂಡಲೇ ಹೋರ್ಡಿಂಗ್ ಅನ್ನು ತೆಗೆದುಹಾಕುವ ಮೂಲಕ ಕ್ರಮ ಕೈಗೊಂಡರು.

ಹೋರ್ಡಿಂಗ್‌ನಲ್ಲಿ ಮಿಯಾ ಖಲೀಫಾ ಅವರ ಚಿತ್ರವನ್ನು ಹೇಗೆ ಬಳಸಲಾಯಿತು ಎಂಬುದರ ಕುರಿತು ಸ್ಥಳೀಯ ಅಧಿಕಾರಿಗಳು ಇನ್ನೂ ವಿವರಣೆಯನ್ನು ನೀಡಿಲ್ಲ ಮತ್ತು ಇದು ಉದ್ದೇಶಪೂರ್ವಕ ಕೃತ್ಯವೇ ಅಥವಾ ಕಣ್ತಪ್ಪಿನಿಂದ ಆದ ಕೃತ್ತವೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

'ಈ ಡ್ರೆಸ್‌ ಹಾಕಿದ್ರ ಪ್ರಯೋಜನ ಏನು?' ಕಟೌಟ್‌ ಡ್ರೆಸ್‌ನಲ್ಲಿ ಮಿಂಚಿದ ಮಿಯಾ ಖಲಿಫಾಗೆ ಬಂತು ಸಾಲು ಸಾಲು ಪ್ರಶ್ನೆ!

ಹಲವಾರು ದಿನಗಳ ಕಾಲ ಈ ಉತ್ಸವ ನಡೆಯುತ್ತದೆ. ತಮಿಳುನಾಡಿನಲ್ಲಿ ಮಳೆಗಾಲವು ಸಾಮಾನ್ಯವಾಗಿ ಈ ತಿಂಗಳಲ್ಲಿ ಆರಂಭವಾಗುತ್ತದೆ. ನದು ನದಿಗಳ ಮಟ್ಟದಲ್ಲಿ ಏರಿಕೆಗೆ ಕಾರಣವಾಗುತ್ತದೆ. ಈ ಹಿನ್ನಲೆಯಲ್ಲಿ ನದಿಮೂಲಗಳಿಗೆ ಧನ್ಯವಾದ ಹೇಳುವ ಸಲುವಾಗಿ ಆದಿ ಪೆರಕ್ಕು ಹಬ್ಬವನ್ನು ಆಚರಣೆ ಮಾಡಲಾಗುತ್ತದೆ.

ಮಾಜಿ ವಯಸ್ಕ ಚಲನಚಿತ್ರ ನಟಿ ಮಿಯಾ ಖಲೀಫಾರ ಫೋಟೋ ವೈರಲ್‌!

Latest Videos
Follow Us:
Download App:
  • android
  • ios