Asianet Suvarna News Asianet Suvarna News

'ಈ ಡ್ರೆಸ್‌ ಹಾಕಿದ್ರ ಪ್ರಯೋಜನ ಏನು?' ಕಟೌಟ್‌ ಡ್ರೆಸ್‌ನಲ್ಲಿ ಮಿಂಚಿದ ಮಿಯಾ ಖಲಿಫಾಗೆ ಬಂತು ಸಾಲು ಸಾಲು ಪ್ರಶ್ನೆ!

ಸನ್ನಿ ಲಿಯೋನ್‌ನಂತೆ (Sunny Leone) ನೀಲಿ ಜಗತ್ತಿನಿಂದ (Blue Film) ವಿಮುಖವಾಗಿರುವ ಮತ್ತೊಬ್ಬ ತಾರೆ ಮಿಯಾ ಖಲೀಫಾ (Mia Khalifa). ಹಾಗಿದ್ದರೂ ಇನ್ಸ್‌ಟಾಗ್ರಾಮ್‌ನಲ್ಲಿ ತಮ್ಮ ಹಾಟ್‌ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ ಅವರು ಪೋಸ್ಟ್‌ ಮಾಡಿದ ಕಪ್ಪು ಬಣ್ಣದ ಕಟೌಟ್‌ ಡ್ರೆಸ್‌ನ ಫೋಟೋಗಳಿಗೆ ಫ್ಯಾನ್ಸ್‌ ವಿಪರೀತ ಕಾಮೆಂಟ್‌ ಮಾಡಿದ್ದಾರೆ.

Mia Khalifa Shines in cut out dress fans ask whats the point of even wearing it san
Author
First Published Jun 3, 2024, 6:54 PM IST


ಮಿಯಾ ಖಲೀಫಾ (Mia Khalifa) ಇತ್ತೀಚೆಗೆ ತಮ್ಮ ಅಭಿಮಾನಿಗಳಿಗೆ ಕೆಲವು ಮಾದಕ ಚಿತ್ರಗಳ ಸರಣಿಯನ್ನೇ ಪೋಸ್ಟ್‌ ಮಾಡಿದ್ದರು. ಮಾಜಿ ನೀಲಿ ಚಿತ್ರ ತಾರೆ (Adult Film Star) ಮಾದಕ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ (Social Media) ಹಂಚಿಕೊಳ್ಳುವುದು ಹೊಸದೇನಲ್ಲ, ಆದರೆ, ಈ ಬಾರಿ ಅವರು ಹಂಚಿಕೊಂಡಿರುವ ಫೋಟೋದಲ್ಲಿ ಮೈಮೇಲೆ ಹೆಚ್ಚಾಗಿ ಬಟ್ಟೆಗಳೇ ಇದ್ದವು. ಹಾಗಿದ್ದರೂ ಅವರು ಧರಿಸಿದ್ದ ಯಾವುದೇ ಬಟ್ಟೆಗಳು ಬೇಕಾದ ಭಾಗ ಮುಚ್ಚುವಂತೆ ಇದ್ದಿರಲಿಲ್ಲ. ಇದರ ಬೆನ್ನಲ್ಲಿಯೇ ಅವರ ಅಭಿಮಾನಿಗಳು ನೀವು ಈ ಡ್ರೆಸ್ ಹಾಕಿದ್ದರ ಪ್ರಯೋಜನವಾದರೂ ಏನು ಎಂದು ಪ್ರಶ್ನೆ ಮಾಡಿದ್ದಾರೆ. ಎಲ್ಲವನ್ನೂ ತೋರಿಸೋದೇ ನಿಮ್ಮ ಉದ್ದೇಶವಾಗಿದ್ದರೆ, ಅದನ್ನೇ ಮಾಡಬಹುದಿತ್ತಲ್ಲ ಎಂದಿದ್ದಾರೆ. ಸನ್ನಿ ಲಿಯೋನ್‌ (Sunny Leone) ರೀತಿಯಲ್ಲೇ ಮಿಯಾ ಖಲೀಫಾ ಕೂಡ ಇತ್ತೀಚಿನ ವರ್ಷದಲ್ಲಿ ಅಡಲ್ಟ್‌ ಸಿನಿಮಾಗಳಿಂದ ದೂರುವುಳಿದುಕೊಂಡಿದ್ದಾರೆ. ಅಡಲ್ಟ್‌ ಪ್ರೊಡಕ್ಷನ್‌ ಹೌಸ್‌ಗಳಿಂದ ಅವರ ಯಾವುದೇ ಸಿನಿಮಾಗಳೂ ಬರುತ್ತಿಲ್ಲ ಹಾಗಂತ ಅವರು ಅಭಿಮಾನಿಗಳೊಂದಿಗೆ ಸಂವಹನ ಮಾಡೋದನ್ನ ಇನ್ಸ್‌ಟಾಗ್ರಾಮ್‌ ಮೂಲಕ ಮುಂದುವರಿಸಿದ್ದಾರೆ.

ಇತ್ತೀಚೆಗೆ ಅವರು ಮುಗ್ಲೆರ್‌ ವಿನ್ಯಾಸ ಮಾಡಿದ್ದ ಕಪ್ಪು ಬಣ್ಣದ ಕಟೌಟ್‌ ಡ್ರೆಸ್‌ ಧರಿಸಿ ತಮ್ಮ ಫೇಮಸ್‌ ಕರ್ವ್ಸ್‌ಗಳನ್ನ ಅಭಿಮಾನಿಗಳಿಗೆ ದರ್ಶನ ಮಾಡಿಸಿದ್ದಾರೆ. ಇದರೊಂದಿಗೆ ಸ್ಫೂರ್ತಿದಾಯಕ ಕ್ಯಾಪಶ್ನ್‌ ಕೂಡ ಅವರು ಬರೆದುಕೊಂಡಿದ್ದಾರೆ. 'ಕೆಲವೊಮ್ಮೆ ನಾನೇ ಪ್ರಶ್ನೆ ಮಾಡಿಕೊಳ್ಳುತ್ತೇನೆ: ಶಕ್ತಿಶಾಲಿ ಮಹಿಳೆ ಅನ್ನೋದರ ಮೂಲಕ ಅರ್ಥವೇನು? ಕೊನೆಗೆ ನಾನೇ ಕಂಡುಕೊಳ್ಳುವ ಉತ್ತರ ಏನೆಂದರೆ, ಒಬ್ಬ ಮಹಿಳೆ ನಿಜವಾದ ಸ್ವತಂತ್ರ್ಯ ಹೊಂದಿರುವುದು ಹಾಗೂ ತನ್ನನ್ನು ತಾನು ಖುಷಿಯಾಗಿಟ್ಟುಕೊಳ್ಳುವರೇ ಶಕ್ತಿಶಾಲಿ ಮಹಿಳೆ' ಎಂದು ಥಿಯರಿ ಮುಗ್ಲೆರ್‌ ಅವರ ಕೋಟ್‌ನೊಂದಿಗೆ ಬರೆದುಕೊಂಡಿದ್ದಾರೆ.

ಕ್ಯಾಲಿಫೋರ್ನಿಯಾದ ಆರೆಂಜ್‌ ಸನ್‌ಸೆಟ್‌ನ ಹಿನ್ನಲೆಯಲ್ಲಿ ಮಿಯಾ ಖಲೀಫಾ ಈ ಫೋಟೋಗಳನ್ನ ತೆಗೆಸಿಕೊಂಡಿದೆ. ಒಂದು ಚಿತ್ರದಲ್ಲಿ ಅವರು ನೀಡಿರುವ ಬ್ಯಾಕ್‌ಪೋಸ್‌ ಫೋಟೋಗೆ ಸಾಕಷ್ಟು ಕಾಮೆಂಟ್‌ಗಳು ಬಂದಿವೆ. 'ನಿಮ್ಮ ಕಾಲುಗಳನ್ನು ನೋಡಿ ಖುಷಿಯಾಗಿದೆ' ಎಂದು ಇಬ್ಬರು ಬರೆದಿದ್ದರೆ, ಇನ್ನೊಂದು, ನಿಮ್ಮನ್ನು ಮದುವೆಯಾಗುವುದು ನನ್ನ ಗೌರವ ಎಂದುಕೊಳ್ಳುತ್ತೇನೆ ಎಂದು ಬರೆದಿದ್ದಾರೆ. ಅದಕ್ಕೆ ಇನ್ನೊಬ್ಬರು ನಿಜಕ್ಕೂ ಈಕೆ ವೈಫ್‌ ಮೆಟಿರೀಯಲ್‌ ಎಂದಿದ್ದಾರೆ. ಇನ್ನೊಂದು ಕೆಟ್ಟ ವಿಚಾರವೇನೆಂದರೆ, ನೀವು ಬರೆದಿರುವ ಕ್ಯಾಪ್ಶನ್‌ ನಿಮಗೇ ಸೂಕ್ತ ಅನಿಸೋದಿಲ್ಲ ಎಂದು ಕಾಮೆಂಟ್‌ ಮಾಡಿದ್ದಾರೆ. ಇನ್ನು ಆಕೆ ಧರಿಸಿರುವ ಕಟೌಟ್‌ ಡ್ರೆಸ್‌ಅನ್ನೂ ಪ್ರಶ್ನೆ ಮಾಡಿರುವ ಇನ್ನೊಬ್ಬ ಯೂಸರ್‌, ಈ ಹಂತದಲ್ಲಿ ನನಗೆ ಅನಿಸೋದು ಏನೆಂದರೆ, ನೀವು ಈ ಡ್ರೆಸ್‌ ಧರಿಸಿದ ಉದ್ದೇಶವಾದರೂ ಏನು ಅನ್ನೋದು ಎಂದಿದ್ದಾರೆ.

Mia Khalifa Shines in cut out dress fans ask whats the point of even wearing it san

ಮಾಜಿ ವಯಸ್ಕ ಚಲನಚಿತ್ರ ನಟಿ ಮಿಯಾ ಖಲೀಫಾರ ಫೋಟೋ ವೈರಲ್‌!

ಇನ್ನು ಮಿಯಾ ಖಲೀಫಾ ಅವರ ಪರಮ ಅಭಿಮಾನಿಗಳು ಆಕೆಯ ಬೆಂಬಲ ನಿಂತಿದ್ದಾರೆ. ಆಕೆಯನ್ನು ಟೀಕಿಸೋದು ಬಿಡಿ. ನಾವು ಮನುಷ್ಯರು, ಪ್ರಾಣಿಗಳಲ್ಲ. ಆಕೆಯೊಬ್ಬಳು ಮುಕ್ತ ಮಹಿಳೆ. ತನ್ನದೇ ಆದ ಜೀವನವನ್ನು ಆನಂದಿಸಲು ಆಕೆ ಬಯಸಿದ್ದಾಳೆ. ಆಕೆಗೆ ಬರುವ ಇಂಥ ಯಾವುದೇ ಕಾಮೆಂಟ್‌ಗೂ ಆಕೆ ತಲೆ ಕೆಡಿಸಿಕೊಳ್ಳೋದಿಲ್ಲ ಎಂದಿದ್ದಾರೆ. ಇನ್ನೂ ಕೆಲವರು ಆಕೆಯ ಹೆಸರು ಮಿಯಾ ಖಲೀಫಾ ಅಲ್ಲವೇ ಅಲ್ಲ ಎಂದಿದ್ದಾರೆ. ಆಕೆಯ ಹೆಸರು ಸಾರಾಹ್‌ ಜೋಯ್‌, ಇಲ್ಲಿರುವ ಎಲ್ಲರೂ ಮಿಯಾ ಖಲೀಫಾ ಎನ್ನುವಾಕೆ ಮುಸ್ಲಿಂ ಅಲ್ಲ ಎಂದು ನಂಬುತ್ತಾರೆ. ಆಕೆಯ ನಿಜವಾದ ಹೆಸರು ಸಾರಾಹ್‌ ಜೋಯ್‌ ಚಾಮೌನ್‌. ಎಲ್ಲಾ ಲೆಬನಾನ್‌ ಪ್ರಜೆಗಳು ಮುಸ್ಲಿಂ ಅಲ್ಲ ಎಂದು ಇನ್ನೊಬ್ಬರು ಬರೆದಿದ್ದಾರೆ.

ನೀಲಿ ಚಿತ್ರ ತಾರೆಗೆ ಮತ್ತೊಂದು ಶಾಕ್, ಮಿಯಾ ಪೋರ್ನ್ ವಿಡಿಯೋ ಆದಾಯ ಇಸ್ರೇಲ್ ನಿಧಿಗೆ ದಾನ!

Mia Khalifa Shines in cut out dress fans ask whats the point of even wearing it san

 

Latest Videos
Follow Us:
Download App:
  • android
  • ios