ನಾರ್ವೆ ಚೆಸ್ ಟೂರ್ನಿ ಗೆದ್ದ ಗ್ರ್ಯಾಂಡ್‌ಮಾಸ್ಟರ್ ಆರ್. ಪ್ರಜ್ಞಾನಂದರನ್ನು ತಮಿಳುನಾಡು ಸಿಎಂ ವಿಜಯ್ ಜೋಸೆಫ್ ಸನ್ಮಾನಿಸಿ, ₹50 ಲಕ್ಷ ನಗದು ಬಹುಮಾನ ನೀಡಿದರು. ಈ ಸಂದರ್ಭದಲ್ಲಿ ಸಿಎಂ ವಿಜಯ್, ಪ್ರಜ್ಞಾನಂದರೊಂದಿಗೆ ಚೆಸ್ ಆಡಿ ಸೋಲನುಭವಿಸಿದರು. ವೈರಲ್ ಆಗಿರೋ ವಿಡಿಯೋ ನೋಡಿ ಇಲ್ಲಿದೆ.

ಚೆನ್ನೈ (ಜೂ.9): ಇತ್ತೀಚೆಗಷ್ಟೇ ನಾರ್ವೆ ಚೆಸ್‌ ಟೂರ್ನಿಯಲ್ಲಿ ಗೆದ್ದು, ಈ ಸಾಧನೆ ಮಾಡಿದ ಮೊದಲ ಭಾರತೀಯ ಎನಿಸಿಕೊಂಡಿದ್ದ ಗ್ರ್ಯಾಂಡ್‌ಮಾಸ್ಟರ್‌ ಆರ್‌.ಪ್ರಜ್ಞಾನಂದಗೆ ಸೋಮವಾರ ತಮಿಳುನಾಡು ಮುಖ್ಯಮಂತ್ರಿ ವಿಜಯ್‌ ಜೋಸೆಫ್‌ ಅವರು ಸನ್ಮಾನಿಸಿ, ₹50 ಲಕ್ಷ ನಗದು ಬಹುಮಾನ ಹಸ್ತಾಂತರಿಸಿದರು.

ತಮ್ಮ ಪೋಷಕರ ಜೊತೆ ಮುಖ್ಯಮಂತ್ರಿಯ ಅಧಿಕೃತ ನಿವಾಸಕ್ಕೆ ಆಗಮಿಸಿದ ಪ್ರಜ್ಞಾನಂದರನ್ನು ವಿಜಯ್‌ ಶಾಲು ಹೊದಿಸಿ ಗೌರವಿಸಿದರು. ಬಳಿಕ ಪ್ರಜ್ಞಾನಂದ ಜೊತೆ ವಿಜಯ್‌ ಚೆಸ್‌ ಆಡಿ ಸೋಲನುಭವಿಸಿದರು. ಆರ್‌.ಪ್ರಜ್ಞಾನಂದ ತಮಿಳುನಾಡು ಅಷ್ಟೇ ಅಲ್ಲ ಭಾರತ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾನೆ ಎಂದು ಶ್ಲಾಘಿಸಿದರು. ಇದರ ವಿಡಿಯೋವನ್ನು ತ.ನಾಡು ಸರ್ಕಾರ ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ.

Scroll to load tweet…