Asianet Suvarna News Asianet Suvarna News

Wah... Taj ಗುಲ್ಮಾರ್ಗ್‌ನಲ್ಲಿ ಶೂನ್ಯವೆಚ್ಚದಲ್ಲಿ ನಿರ್ಮಾಣವಾಯ್ತು ಹಿಮದ ತಾಜ್‌ಮಹಲ್‌

 

  • ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ನಿರ್ಮಾಣವಾಯ್ತು ತಾಜ್‌ಮಹಲ್
  • ಶೂನ್ಯ ವೆಚ್ಚದಲ್ಲಿ ಸಂಪೂರ್ಣ ಹಿಮದಿಂದ ನಿರ್ಮಾಣ
  • ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಹಿಮದ ತಾಜ್‌ಮಹಲ್
Tajmahal snow sculpture built with zero material cost akb
Author
Bangalore, First Published Feb 16, 2022, 3:04 PM IST | Last Updated Feb 16, 2022, 3:06 PM IST

ಪ್ರೇಮಸೌಧ ಎಂದು ಕರೆಯಲ್ಪಡುವ ತಾಜ್‌ಮಹಲ್‌ ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಒಂದು. ಈಗ ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ಶೂನ್ಯ ವೆಚ್ಚದಲ್ಲಿ ಹಿಮದಿಂದ ನಿರ್ಮಾಣವಾಗಿರುವ ತಾಜ್‌ಮಹಲ್‌ ಪ್ರವಾಸಿಗರ ಹೊಸ ಆಕರ್ಷಣೆಯಾಗಿದೆ. ತಾಜ್ ಮಹಲ್ ಐಸ್ ಶಿಲ್ಪವು ಗುಲ್ಮಾರ್ಗ್‌ನಲ್ಲಿ ಕಳೆದ ಕೆಲವು ದಿನಗಳಿಂದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸಿದ ಎರಡನೇ ಆಕರ್ಷಣೆಯಾಗಿದೆ. ಕೆಲವೇ ದಿನಗಳ ಹಿಂದೆ, ಪ್ರಸಿದ್ಧ ಸ್ಕೀ ರೆಸಾರ್ಟ್‌ನಲ್ಲಿರುವ ಸಂಪೂರ್ಣ ಹಿಮದಿಂದ ನಿರ್ಮಿತವಾದ ಐಸ್ ಇಗ್ಲೂ ಹೊಟೇಲ್‌ಗೆ ಹಲವಾರು ಜನರು ಭೇಟಿ ನೀಡಿದ್ದರು. ಗುಲ್ಮಾರ್ಗ್ ಈಗಾಗಲೇ ಹಿಮವನ್ನು ಇಷ್ಟಪಡುವ ದೇಶದ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೀಯ ತಾಣವಾಗಿದೆ. ಇದರ ಆಕರ್ಷಣೆಗೆ ಈ ತಾಜ್‌ಮಹಲ್‌ ಹೊಸ ಸೇರ್ಪಡೆ.

ತಾಜ್ ಮಹಲ್‌ನ ಸಂಕೀರ್ಣವಾದ ಕೆತ್ತನೆಯ ಈ ಹಿಮ ಶಿಲ್ಪದ ನಿರ್ಮಾಣಕ್ಕೆ 17 ದಿನಗಳು ಬೇಕಾಗಿತು. ಈ ಐತಿಹಾಸಿಕ  ಪ್ರತಿಕೃತಿಯನ್ನು ಹೋಟೆಲ್ ಗ್ರ್ಯಾಂಡ್ ಮುಮ್ತಾಜ್‌ನ (Grand Mumtaz) ಸದಸ್ಯರು ಶೂನ್ಯ ವೆಚ್ಚದಲ್ಲಿ ಕೆತ್ತಿಸಿದ್ದಾರೆ. ಗುಲ್ಮಾರ್ಗ್ ಅನ್ನು ಪ್ರವಾಸಿಗರಿಗೆ ಮತ್ತಷ್ಟು ಆಕರ್ಷಕವಾಗಿಸುವುದು ಮತ್ತು ಸ್ಮರಣೀಯವಾಗಿಸುವುದು ಅವರ ಮುಖ್ಯ ಗುರಿಯಾಗಿದೆ. ಮಂಜುಗಡ್ಡೆಯ ಶಿಲ್ಪವು 16 ಅಡಿ ಎತ್ತವಿದೆ.  24  x 24 ಅಡಿ ವಿಸ್ತೀರ್ಣವನ್ನು ಹೊಂದಿದೆ. ನಾಲ್ಕು ಸದಸ್ಯರ ತಂಡ 17 ದಿನಗಳ ಕಾಲ ಈ ಹಿಮಶಿಲ್ಪದ ತಯಾರಿ ಪ್ರಕ್ರಿಯೆಯಲ್ಲಿ ತೊಡಗಿತ್ತು. ಗಮನಾರ್ಹ ವಿಚಾರವೆಂದರೆ ಈ ರಚನೆಯನ್ನು ಪೂರ್ಣಗೊಳಿಸಲು ಹಿಮವನ್ನು ಹೊರತುಪಡಿಸಿ ಬೇರೆ ಯಾವುದೇ ವಸ್ತುಗಳನ್ನು ಬಳಸಿಲ್ಲ.

ನಾವು ಹೋಟೆಲ್‌ನ ಹೆಸರಿನೊಂದಿಗೆ ಸ್ವಲ್ಪ ಹೋಲಿಕೆ ಇರುವ ದೀರ್ಘಕಾಲ ಜನ ಮಾತನಾಡ ಬಹುದಾದಂತಹ ಶಿಲ್ಪವನ್ನು ರಚಿಸಲು ಬಯಸಿದ್ದೆವು. ನಾವು ಅದನ್ನು ಜನರಿಗೆ ಸ್ಮರಣೀಯವಾಗಿಸಲು ಬಯಸಿದ್ದೇವೆ. ಇದರ ನಿರ್ಮಾಣಕ್ಕೆ ಸರಿಸುಮಾರು 100 ಗಂಟೆಗಳ ಸಮಯ ಕಳೆದಿದೆ. ಈ ಸ್ಥಳವು ಈಗಾಗಲೇ ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿದೆ ಎಂದು ಗ್ರ್ಯಾಂಡ್ ಮುಮ್ತಾಜ್ ಹೋಟೆಲ್‌ನ ಜನರಲ್ ಮ್ಯಾನೇಜರ್ ಸತ್ಯಜೀತ್ ಗೋಪಾಲ್ (Satyajeet Gopal) ಹೇಳಿದರು. ಗುಲ್ಮಾರ್ಗ್‌ನಲ್ಲಿ ಇದು ಎರಡನೇ ಆಕರ್ಷಣೆಯಾಗಿದ್ದು, ಕಳೆದ ಕೆಲವು ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸಿದೆ. ಕೆಲವೇ ದಿನಗಳ ಹಿಂದೆ, ಪಟ್ಟಣದಲ್ಲಿರುವ ಇಗ್ಲೂ ಕೆಫೆಯು (igloo cafe) ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಹೆಚ್ಚು ಮಾತನಾಡುವ ಪ್ರವಾಸಿ ಆಕರ್ಷಣೆಯಾಗಿತ್ತು.

ಕೃಷ್ಣ ವೇಷ ತೊಟ್ಟ ಪ್ರವಾಸಿಗೆ ತಾಜ್‌ಮಹಲ್ ಪ್ರವೇಶ ನಿರಾಕರಿಸಿದ ಭದ್ರತಾ ಸಿಬ್ಬಂದಿ!

ಹಿಮದಿಂದ ನಿರ್ಮಿತವಾದ 'ಸ್ನೋಗ್ಲು' ಹೊಟೇಲ್‌ ಅನ್ನು ಈಗಾಗಲೇ  ಗುಲ್ಮಾರ್ಗ್‌ನ ಪ್ರಸಿದ್ಧ ಸ್ಕೀ ರೆಸಾರ್ಟ್‌ನಲ್ಲಿ (ski resort) ಸ್ಥಾಪಿಸಲಾಗಿದೆ. ಇದು 37.5 ಅಡಿ ಎತ್ತರ ಮತ್ತು 44.5 ಅಡಿ ವ್ಯಾಸವನ್ನು ಹೊಂದಿದೆ ಮತ್ತು 40 ಅತಿಥಿಗಳು ಕುಳಿತುಕೊಳ್ಳುವ ಆಸನ ಸಾಮರ್ಥ್ಯವನ್ನು ಇದು ಹೊಂದಿದ್ದು, ವಿಶ್ವದ ಅತಿದೊಡ್ಡ ಇಗ್ಲೂ ಕೆಫೆ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇಗ್ಲೂ ಸೃಷ್ಟಿಕರ್ತ ಸೈಯದ್ ವಾಸಿಮ್ ಷಾ (Syed Wasim Shah)ಅವರು ಈ ರಚನೆಯನ್ನು ವಿಶ್ವದ ಅತಿದೊಡ್ಡ ಕೆಫೆ ಎಂದು ಹೇಳಿದ್ದಾರೆ.

ಪತ್ನಿಗಾಗಿ ತಾಜ್‌ ಮಹಲ್‌ನಂತೆ ಮನೆ ಕಟ್ಟಿಸಿದ ಪತಿ..!

ಕೆಲವು ವರ್ಷಗಳ ಹಿಂದೆ ನಾನು ಈ ಐಸ್‌ ಹೊಟೇಲ್‌ ಪರಿಕಲ್ಪನೆಯನ್ನು ಸ್ವಿಟ್ಜರ್ಲೆಂಡ್‌ನಲ್ಲಿ ನೋಡಿದ್ದೆ, ಅಲ್ಲಿ ಅವರು ಅದರಲ್ಲಿ ಮಲಗುವ ತಿನ್ನವ  ಸೌಲಭ್ಯಗಳನ್ನು ಹೊಂದಿರುವ ಹೋಟೆಲ್‌ಗಳನ್ನು ಹೊಂದಿದ್ದಾರೆ. ಹಾಗೆಯೇ ಭಾರತದ ಗುಲ್ಮಾರ್ಗ್ ಕೂಡ ಬಹಳಷ್ಟು ಹಿಮ ಬೀಳುವ ಪ್ರದೇಶವಾಗಿದೆ ಮತ್ತು ಈ ಪರಿಕಲ್ಪನೆಯನ್ನು ಇಲ್ಲಿ ಏಕೆ ಪ್ರಾರಂಭಿಸಬಾರದು ಎಂದು ನಾನು ಭಾವಿಸಿದೆ ಎಂದು ಶಾ ಪಿಟಿಐಗೆ ತಿಳಿಸಿದರು.

 

Latest Videos
Follow Us:
Download App:
  • android
  • ios