Asianet Suvarna News Asianet Suvarna News

ಕೃಷ್ಣ ವೇಷ ತೊಟ್ಟ ಪ್ರವಾಸಿಗೆ ತಾಜ್‌ಮಹಲ್ ಪ್ರವೇಶ ನಿರಾಕರಿಸಿದ ಭದ್ರತಾ ಸಿಬ್ಬಂದಿ!

  • ಕೃಷ್ಣಜನ್ಮಾಷ್ಠಮಿ ಪ್ರಯುಕ್ತ ಶ್ರೀ ಕೃಷ್ಣನ ವೇಷದಲ್ಲಿ ಬಂದಿದ್ದ ಪ್ರವಾಸಿ
  • ತಾಜ್‌ಮಹಲ್ ವೀಕ್ಷಣೆಗೆ ಅವವಕಾಶ ನೀಡಿದ ಅಧಿಕಾರಿ ವರ್ಗ
  • ಕೃಷ್ಣವೇಷದಲ್ಲಿರುವ ಪ್ರವಾಸಿಗೆ ತಾಜ್‌ಮಹಲ್ ಗೇಟ್ ಪ್ರವೇಶಕ್ಕೆ ನಿರ್ಬಂಧ
Taj mahal Security personnel denied entry to a visitor who dressed as Sri Krishna ckm
Author
Bengaluru, First Published Aug 31, 2021, 5:26 PM IST

ಆಗ್ರಾ(ಆ.31); ವಿಶ್ವದ ಅದ್ಭುತಗಳಲ್ಲೊಂದಾದ ಆಗ್ರಾದಲ್ಲಿರುವ ತಾಜ್‌ಮಹಲ್ ಪ್ರೀತಿಯ ಸಂಕೇತ ಎಂದು ಕರೆಯುತ್ತಾರೆ. 17ನೇ ಶತಮಾನದಲ್ಲಿ ನಿರ್ಮಿಸಲಾದ ಈ ಪ್ರೀತಿಯ ದ್ಯೋತಕ ವೀಕ್ಷಣೆ ಪ್ರವಾಸಿಗರಿಗೆ ಅವಕಾಶ ಮಾಡಿಕೊಡಲಾಗಿದೆ. ಕೊರೋನಾ ಕಾರಣ ಮುಚ್ಚಲಾಗಿದ್ದ ತಾಜ್‌ಮಹಲ್ ಗೇಟ್ ಒಪನ್ ಆಗಿದೆ. ಆದರೆ ಪ್ರೀತಿಯ ಉಣಬಡಿಸಿದ್ದ ಶ್ರೀಕೃಷ್ಣನ ಜನ್ಮಾಷ್ಠಮಿಯಂದು  ಕೃಷ್ಣ ವೇಷ ತೊಟ್ಟ ಪ್ರವಾಸಿಗನಿಗೆ ತಾಜ್‌ಮಹಲ್ ಪ್ರವೇಶಕ್ಕೆ ನಿರಾಕರಿಸಿದ ಘಟನೆ ನಡೆದಿದೆ.

ಕೃಷ್ಣ ನಿಂದ ಕಂಸನ ಸಂಹಾರ: ಕೃಷ್ಣಾಷ್ಟಮಿ ಆಚರಣೆ ಹಿಂದಿನ ಆಶಯವೇನು?

2ನೇ ಅಲೆ ಕಾರಣ ತಾಜ್‌ಮಹಲ್ ಪ್ರವಾಸಿಗರ ವೀಕ್ಷಣೆಗೆ ನಿರ್ಬಂಧ ಹೇರಲಾಗಿತ್ತು. ಆದರೆ ಕೊರೋನಾ ಪ್ರಕರಣ ತಗ್ಗಿದ ಕಾರಣ ಪ್ರವಾಸಿಗರ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಶ್ರೀ ಕೃಷ್ಣಜನ್ಮಾಷ್ಠಮಿಯಿಂದು ಹೆಚ್ಚು ಪ್ರವಾಸಿಗರು ತಾಜ್‌ಮಹಲ್ ವೀಕ್ಷಿಸಿದ್ದಾರೆ. ಇದೇ ರೀತಿ ಕೃಷ್ಣನ ವೇಷ ತೊಟ್ಟು ತಾಜ್‌ಮಹಲ್ ವೀಕ್ಷಣೆಗೆ ಬಂದ ಪ್ರವಾಸಿಗೆ ಅಧಿಕಾರಿಗಳು ತಾಜ್‌ಮಹಲ್ ಗೇಟ್ ಒಳ ಪ್ರವೇಶಿಸಲು ನಿರಾಕರಿಸಿದ್ದಾರೆ.

ಆಗ್ರಾದ ತಾಜ್‌ಮಹಲ್‌ ನೋಡ ಹೊರಟ ಪ್ರವಾಸಿಗರಿಗೊಂದು ಕಹಿ ಸುದ್ದಿ!

ಪ್ರವೇಶ ನಿರಾಕರಿಸಿರುವ ಕುರಿತು ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಭದ್ರತಾ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ. ತಾಜ್‌ಮಹಳ ಒಳಕ್ಕೆ ಯಾವುದೇ ಧರ್ಮಕ್ಕೆ, ಅಥವಾ ಸಂಸ್ಥಗೆ ಸೀಮಿತವಾಗಿರುವ ಧ್ವಜ, ಬ್ಯಾನರ್, ಪೋಸ್ಟರ್ ತೆಗೆದುಕೊಂಡು ಹೋಗುವಂತಿಲ್ಲ. ಸ್ವಯಂ ಪ್ರಚಾರ ಮಾಡುವಂತಿಲ್ಲ. ಧರ್ಮಕ್ಕೆ ಸೀಮಿತ ಪ್ರಸಂಗಗಳನ್ನು ತಾಜ್‌ಮಹಲ್ ಒಳಗಡೆ ಮಾಡುವಂತಿಲ್ಲ. ಹೀಗಾಗಿ ಪ್ರವೇಶ ನಿರಾಕರಿಸಲಾಗಿದೆ ಎಂದು ಭದ್ರತಾ ಅಧಿಕಾರಿಗಳು ಹೇಳಿದ್ದಾರೆ.

ಈ ಹಿಂದೆ ಶ್ರೀರಾಮ ಕೇಸರಿ ಶಾಲು ಹಾಕಿ ತಾಜ್‌ಮಹಲ್ ವೀಕ್ಷಣೆಗೆ ಬಂದಿದ್ದ ಪ್ರವಾಸಿಗರನ್ನು ತಡೆದ ಪ್ರಕರಣ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಶ್ರೀಕೃಷ್ಣನಿಗೆ ಪ್ರವೇಶ ನಿರಾಕರಿಸಿದ ಕಾರಣ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. 

ತಾಜ್‌ಮಹಲ್‌ಗೆ ಗಂಗಾಜಲ ಪ್ರೋಕ್ಷಣೆ: ಹಿಂದೂ ಜಾಗರಣ ಮಂಚ್‌ ಸದಸ್ಯರಿಂದ ವಿವಾದ!

ಭದ್ರತಾ ಸಿಬ್ಬಂದಿಗಳು ಕೃಷ್ಣ ವೇಷ ತೊಟ್ಟ ಪ್ರವಾಸಿಗೆ ಪ್ರವೇಶ ನಿರಾಕರಿಸಿದಾಗ ನೆರೆದಿದ್ದವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಕೃಷ್ಣ ವೇಷ ತೊಟ್ಟ ಪ್ರವಾಸಿ ಗೇಟ್ ಹೊರಗೆ ನಿಂತು ಕೊಳಲನುಡಿಸಿದ್ದಾನೆ. ಇತ್ತ ತಾಜ್‌ಮಹಲ್ ವೀಕ್ಷಣೆಗೆ ಬಂದಿದ್ದ ಪ್ರವಾಸಿಗರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದ್ದಾರೆ.
 

Follow Us:
Download App:
  • android
  • ios