ತಬ್ಲೀಘಿಗಳಿಂದಾಗಿ ಹಲವು ಮಂದಿಗೆ ಕೊರೋನಾ: ಕೇಂದ್ರ!
ತಬ್ಲೀಘಿಗಳಿಂದಾಗಿ ಹಲವು ಮಂದಿಗೆ ಕೊರೋನಾ: ಕೇಂದ್ರ| ರಾಜ್ಯಸಭೆಗೆ ಗೃಹ ಖಾತೆ ರಾಜ್ಯ ಸಚಿವ ಕಿಶನ್‌ರೆಡ್ಡಿ ಲಿಖಿತ ಉತ್ತರ| ದಿಲ್ಲಿ ಪೊಲೀಸರಿಂದ 233 ತಬ್ಲೀಘಿಗಳ ಬಂಧನ| ಸರ್ಕಾರದ ಸೂಚನೆಗಳನ್ನು ತಬ್ಲೀಘಿಗಳು ಪಾಲಿಸಿರಲಿಲ್ಲ
ನವದೆಹಲಿ(ಸೆ.22): ರಾಷ್ಟ್ರ ರಾಜಧಾನಿ ದೆಹಲಿಯ ನಿಜಾಮುದ್ದೀನ್ ಮರ್ಕಝ್‌ನಲ್ಲಿ ನಡೆದ ತಬ್ಲೀಘಿ ಜಮಾತ್ ಧರ್ಮಸಭೆಯಿಂದಾಗಿಯೇ ಹಲವು ಮಂದಿಗೆ ಕೊರೋನಾ ವ್ಯಾಪಿಸಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ಸೋಮವಾರ ತಿಳಿಸಿದೆ.
ತಬ್ಲಿಘಿಗಳಿಂದ ಎಷ್ಟು ಜನರಿಗೆ ಕೊರೋನಾ ಹರಡಿತು? ಲೆಕ್ಕ ಕೊಟ್ಟ ಕೇಂದ್ರ!
ಕೊರೋನಾಗೆ ಸಂಬಂಧಿಸಿದಂತೆ ವಿವಿಧ ಸರ್ಕಾರಿ ಸಂಸ್ಥೆಗಳು ಹಲವು ಮಾರ್ಗಸೂಚಿ ಹಾಗೂ ಆದೇಶಗಳನ್ನು ಹೊರಡಿಸಿದ್ದವು. ಆದಾಗ್ಯೂ ಸಾಮಾಜಿಕ ಅಂತರ ಪಾಲಿಸದೆ, ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಕೆ ಮಾಡದೆ ಒಳಾಂಗಣದಲ್ಲಿ ಭಾರಿ ಸಂಖ್ಯೆಯ ಜನ ಹೆಚ್ಚಿನ ಅವಧಿಗೆ ಸೇರಿದ್ದರು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಇದರಿಂದಾಗಿಯೇ ಹಲವು ಮಂದಿಗೆ ಕೊರೋನಾ ಹರಡಲು ಕಾರಣವಾಗಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಅವರು ರಾಜ್ಯಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ದೇಶದಿಂದ 9 ತಬ್ಲೀಘಿಗಳನ್ನ ಹೊರಹಾಕಿ: ಹೈಕೋರ್ಟ್
ದೆಹಲಿ ಪೊಲೀಸರು 233 ತಬ್ಲೀಘಿ ಜಮಾತ್ ಸದಸ್ಯರನ್ನು ಬಂಧಿಸಿದ್ದಾರೆ. ತಬ್ಲೀಘಿ ಜಮಾತ್‌ಗಳ ಕೇಂದ್ರ ಕಚೇರಿಯಿಂದ 2361 ಜನರನ್ನು ತೆರವುಗೊಳಿಸಲಾಗಿದೆ. ಜಮಾತ್ ಮುಖ್ಯಸ್ಥ ಮೌಲಾನಾ ಮೊಹಮದ್ ಸಾದ್ ವಿರುದ್ಧ ತನಿಖೆ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.