Asianet Suvarna News Asianet Suvarna News

ತಬ್ಲಿಘಿಗಳಿಂದ ಎಷ್ಟು ಜನರಿಗೆ ಕೊರೋನಾ ಹರಡಿತು? ಲೆಕ್ಕ ಕೊಟ್ಟ ಕೇಂದ್ರ!

ತಬ್ಲಿಘಿ ಜಮಾತ್ ಅಸಲಿತನ ತಿಳಿಸಿದ ಕೇಂದ್ರ ಸಚಿವ/ ಹಲವರಿಗೆ ಕೊರೋನಾ ಹರಡಲು ಕಾರಣವಾದ ಸಭೆ/ ಮಾರ್ಚ್ ವೇಳೆ ಸುದ್ದಿ ಮಾಡಿದ್ದ ತಬ್ಲಿಘಿ ಜಮಾತ್/ ಕೇಂದ್ರ ಗೃಹ ಇಲಾಖೆಯಿಂದ ವರದಿ ಸಲ್ಲಿಕೆ

Tablighi Jamaat Caused COVID Spread Among Many Says Union Govt mah
Author
Bengaluru, First Published Sep 21, 2020, 4:32 PM IST

ನವದೆಹಲಿ(ಸೆ. 21) 'ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದಿದ್ದ ತಬ್ಲಿಘಿ ಜಮಾತ್ ಸಮಾವೇಶ ಸಾಕಷ್ಟು ಜನರಿಗೆ ಕೊರೋನಾ ಹರಡಲು ಕಾರಣವಾಯಿತು ಎಂದು ಕೇಂದ್ರ ಗೃಹ ಇಲಾಖೆ ಸ್ಪಷ್ಟಪಡಿಸಿದೆ.

ರಾಜ್ಯಸಭೆಗೆ ವಿವರ ನೀಡಿರುವ ಕೇಂದ್ರ ಸಚಿವ ಕಿಶನ್ ರೆಡ್ಡಿ, ದೆಹಲಿ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿ 233 ಜಮಾತ್ ಸದಸ್ಯರನ್ನು ಬಂಧಿಸಿಸದ್ದಾರೆ. ಮಾರ್ಚ್ 29 ರಿಂದ ಲೆಕ್ಕ ಹೇಳುವುದಾದರೆ  2,361  ಜನರು ನವದೆಹಲಿಯಿಂದ ಜಾಗ ಖಾಲಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.  ತನಿಖೆ ಈಗಲೂ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.

ತಬ್ಲಿಘಿಗಳಿಗೆ ಹತ್ತು ವರ್ಷ ಭಾರತ ಪ್ರವೇಶ ಇಲ್ಲ

ಕೊರೋನಾ ಆರಂಭಿಕ ಹಂತದಲ್ಲಿ ಇದ್ದಾಗ ದೆಹಲಿಯ ಮಸೀದಿಯೊಂದರಲ್ಲಿ ನಡೆದ ಧಾರ್ಮಿಕ ಸಭೆ ದೊಡ್ಡ  ಸುದ್ದಿ ಹುಟ್ಟಿಹಾಕಿತ್ತು. ಮಸೀದಿಯ ಸಭೆಯಲ್ಲಿ ಭಾಗವಹಿಸಿದ್ದವರಿಗೆ ಕೊರೋನಾ ಇದ್ದು ಅವರು ದೇಶದ ಮೂಲೆ ಮೂಲೆಗೆ ಸಂಚರಿಸಿದ್ದರು. ಈ ಕಾರಣದಿಂದ ವೈರಸ್ ಹರಡಲು ಕಾರಣವಾಗಿತ್ತು. 

ಕರ್ನಾಟಕ, ಮಹಾರಾಷ್ಟ್ರ, ಕೇರಳ, ಆಂಧ್ರ ಪ್ರದೇಶ ಸೇರಿದಂತರೆ ದಕ್ಷಿಣ ಭಾರತದ ರಾಜ್ಯಗಳಿಗೂ ಈ ಸಮಾವೇಶದಲ್ಲಿ ಭಾಗವಹಿಸಿದ್ದವರು ಬಂದಿದ್ದರು.  ವಿದೇಶಿ ಪ್ರಜೆಗಳು ಭಾಗವಹಿಸಿದ್ದು ವರದಿಯಾಗಿತ್ತು. 

 

Follow Us:
Download App:
  • android
  • ios