ನವದೆಹಲಿ[ನ.15]: ಜವಹರಲಾಲ್‌ ನೆಹರೂ ವಿಶ್ವ ವಿದ್ಯಾಲಯದಲ್ಲಿ ಹಾಸ್ಟೆಲ್‌ ಶುಲ್ಕ ಏರಿಕೆ ವಿವಾದ ತಣ್ಣಗಾದ ಬೆನ್ನಲ್ಲೇ ಮತ್ತೊಂದು ವಿವಾದ ಹುಟ್ಟಿಕೊಂಡಿದೆ. ಜೆಎನ್‌ಯು ಕ್ಯಾಂಪಸ್‌ನಲ್ಲಿ ಉದ್ಘಾಟನೆಗೆ ಸಿದ್ಧವಾಗಿರುವ ಸ್ವಾಮಿ ವಿವೇಕಾನಂದ ಪ್ರತಿಮೆಯ ಪೀಠದ ಮೇಲೆ ದುಷ್ಕರ್ಮಿಗಳು ಆಕ್ಷೇಪಾರ್ಹ ಸಂಗತಿಗಳನ್ನು ಬರೆದಿದ್ದಾರೆ. ವಿಶ್ವವಿದ್ಯಾಲಯದ ಆಡಳಿತ ವಿಭಾಗದಲ್ಲಿ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು, ಆಕ್ಷೇಪಾರ್ಹ ಸಂಗತಿಗಳನ್ನು ಬರೆದಿರುವ ವಿಡಿಯೋ ವೈರಲ್‌ ಆದ ಬಳಿಕ ಗುರುವಾರ ಘಟನೆ ಬೆಳಕಿಗೆ ಬಂದಿದೆ.

ವಿದ್ಯಾರ್ಥಿ ಶಕ್ತಿಗೆ ಮಣಿದ ಜೆಎನ್‌ಯು: ಶುಲ್ಕ ಪ್ರಮಾಣ ಕಡಿತಕ್ಕೆ ಒಪ್ಪಿಗೆ!

ಬುಧವಾರದಂದು ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳು ಉಪ ಕುಲಪತಿ ಜಗದೇಶ್‌ ಕುಮಾರ್‌ ಅವರ ವಿರುದ್ಧ ವಿವಿಧ ಆಡಳಿತ ವಿಭಾಗದ ಒಳಗಡೆ ಹಲವಾರು ಸಂದೇಶಗಳನ್ನು ಬರೆದಿದ್ದರು. ಆದರೆ, ವಿವೇಕಾನಂದ ಪ್ರತಿಮೆಯ ಪೀಠದ ಮೇಲೆ ಆಕ್ಷೇಪಾರ್ಹ ಸಂದೇಶಗಳನ್ನು ಬರೆದಿರುವುದರ ಹಿಂದೆ ತಮ್ಮ ಪಾತ್ರವಿರುವುದನ್ನು ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಪ್ರತಿನಿಧಿಗಳು ನಿರಾಕರಿಸಿದ್ದಾರೆ.

ಜೆಎನ್’ಯು ಹೆಸರು ಬದಲಿಸಿ ಮೋದಿ ಹೆಸರಿಡಿ: ಹನ್ಸ್ ರಾಜ್ ಏಕಿಷ್ಟು ಗಡಿಬಿಡಿ?

ಪ್ರತಿಭಟನೆಗೆ 150 ವಿವಿಗಳ ಬೆಂಬಲ:

ಇದೇ ವೇಳೆ, ಹಾಸ್ಟೆಲ್‌ ಶುಲ್ಕ ಏರಿಕೆ ವಿರುದ್ಧದ ಪ್ರತಿಭಟನೆಗೆ 150ಕ್ಕಿಂತಲೂ ಹೆಚ್ಚಿನ ವಿದ್ಯಾಲಯಗಳು ಮತ್ತು ವಿಶ್ವದ ವಿವಿಧ ಶಿಕ್ಷಣ ಸಂಸ್ಥೆಗಳಿಂದ ಬೆಂಬಲ ವ್ಯಕ್ತವಾಗಿದೆ ಎಂದು ಜೆಎನ್‌ಯು ವಿದ್ಯಾರ್ಥಿ ಸಂಘಟನೆ (ಜೆಎನ್‌ಎಸ್‌ಯು) ತಿಳಿಸಿದೆ. ಏಷ್ಯಾ, ಆಫ್ರಿಕಾ, ಉತ್ತರ ಅಮೆರಿಕ, ಯುರೋಪ್‌ ಮತ್ತು ಆಸ್ಪ್ರೇಲಿಯಾದ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿವೆ ಎಂದು ಜೆಎನ್‌ಎಸ್‌ಯು ತಿಳಿಸಿದೆ.