ಹೆಸರು ಬದಲಿಸುವ ಭರದಲ್ಲಿದ್ದಾರೆ ಬಿಜೆಪಿ ನಾಯಕರು| ಜವಾಹರಲಾಲ್ ನೆಹರೂ ವಿವಿ ಹೆಸರು ಬದಲಿಸುವಂತೆ ಬಿಜೆಪಿ ಸಂಸದ ಆಗ್ರಹ| ಜೆಎನ್’ಯು ಬದಲು ಎಂಎನ್’ಯು ಎಂದು ಮರುನಾಮಕರಣಕ್ಕೆ ಹನ್ಸ್ ರಾಜ್ ಹನ್ಸ್ ಒತ್ತಾಯ| ಜೆಎನ್’ಯು ವಿವಿಗೆ ಪ್ರಧಾನಿ ನರೇಂದ್ರ ಮೋದಿ ಹೆಸರಿಡಲು ಹನ್ಸ್ ರಾಜ್ ಆಗ್ರಹ| ನೆಹರೂ-ಗಾಂಧಿ ಕುಟುಂಬದ ವಿರುದ್ಧ ಹರಿಹಾಯ್ದ ಬಿಜೆಪಿ ಸಂಸದ ಹನ್ಸ್ ರಾಜ್|

ನವದೆಹಲಿ(ಆ.18): ದೇಶದ ವಿವಿಧ ನಗರಗಳ, ಸ್ಥಳಗಳ, ಕಟ್ಟಡಗಳ ಹೆಸರು ಬದಲಾಯಿಸುವ ಭರದಲ್ಲಿರುವ ಬಿಜೆಪಿ ನಾಯಕರು, ಇದೀಗ ದೆಹಲಿಯ ಪ್ರತಿಷ್ಠಿತ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಹೆಸರು ಬದಲಿಸಲು ಸಜ್ಜಾಗಿದ್ದಾರೆ.

ಹೌದು, ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್’ಯು) ಹೆಸರು ಬದಲಿಸಿ ನರೇಂದ್ರ ಮೋದಿ ವಿಶ್ವವಿದ್ಯಾಲಯ(ಎಂಎನ್’ಯು) ಎಂದು ಮರುನಾಮಕರಣ ಮಾಡಬೇಕು ಎಂದು ಬಿಜೆಪಿ ಸಂಸದ ಹನ್ಸ್ ರಾಜ್ ಹನ್ಸ್ ಆಗ್ರಹಿಸಿದ್ದಾರೆ.

Scroll to load tweet…

ಜೆಎನ್’ಯು ಕ್ಯಾಂಪಸ್’ನಲ್ಲಿ ಏಕ್ ಶಾಮ್ ಶಹೀದೋಂನ್ ಕೆ ನಾಮ್(ಹುತಾತ್ಮರಿಗಾಗಿ ಒಂದು ಸಂಜೆ) ಕಾರ್ಯಕ್ರಮದಲ್ಲಿ ಮಾತನಾಡಿದ ದೆಹಲಿ ವಾಯವ್ಯ ಕ್ಷೇತ್ರದ ಸಂಸದ, ಕಾಶ್ಮೀರ ವಿವಾದದ ಕುರಿತು ಮಾತನಾಡುತ್ತಾ ನೆಹರೂ-ಗಾಂಧಿ ಕುಟುಂಬದ ವಿರುದ್ಧ ಹರಿಹಾಯ್ದರು.

ಭವಿಷ್ಯದಲ್ಲಿ ನಾವೆಲ್ಲಾ ಶಾಂತಿಯುತವಾಗಿ ಬದುಕಲು, ನಮ್ಮ ಮುಂದಿನ ಪೀಳಿಗೆ ಈ ದೇಶದ ನೈಜ ಇತಿಹಾಸ ಓದಲು ಜೆಎನ್’ಯು ಹೆಸರು ಬದಲಿಸಿ ಪ್ರಧಾನಿ ಮೋದಿ ಹೆಸರನ್ನು ಇಡಬೇಕು ಎಂದು ಹನ್ಸ್ ರಾಜ್ ಹನ್ಸ್ ಆಗ್ರಹಿಸಿದರು.