ಸೂರತ್‌ನಲ್ಲಿ, ಪತ್ನಿಯ ಅನೈತಿಕ ಸಂಬಂಧವನ್ನು ಶಂಕಿಸಿದ ಪತಿಯೊಬ್ಬ ಆಕೆಯನ್ನು ಕೊಂದು, ಶವವನ್ನು ಮರದ ಪೆಟ್ಟಿಗೆಯಲ್ಲಿಟ್ಟು ಕಾಂಕ್ರೀಟ್‌ನಿಂದ ಮುಚ್ಚಿದ್ದಾನೆ. ನಾಪತ್ತೆ ಪ್ರಕರಣವೆಂದು ಭಾವಿಸಿದ್ದ ಪೊಲೀಸರಿಗೆ, ಆರೋಪಿ ಪತಿಯೇ ಬರೆದಿಟ್ಟ ಪತ್ರ ಮಗನ ಕೈಗೆ ಸಿಕ್ಕಿದ್ದರಿಂದ ಈ ಘೋರ ಕೃತ್ಯ ಬಯಲಾಗಿದೆ.

- ಮಗನಿಗೆ ಸಿಕ್ಕ ಚೀಟಿಯಿಂದ ಕೃತ್ಯ ಬಯಲಿಗೆ

ಸೂರತ್‌: ಗುಜರಾತ್‌ನ ಸೂರತ್‌ನಲ್ಲಿ ವ್ಯಕ್ತಿಯೊಬ್ಬ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಲ್ಲಿ ಆಕೆಯನ್ನು ಕೊಂದು ಮರದ ಪೆಟ್ಟಿಯೊಳಗೆ ತುಂಬಿ ಕಾಂಕ್ರೀಟ್‌ ಹಾಕಿ ಮುಚ್ಚಿಟ್ಟ ಆಘಾತಕಾರಿ ಘಟನೆ ನಡೆದಿದೆ. ಆದರೆ ಮಗನಿಗೆ ಸಿಕ್ಕ ಪತ್ರದಿಂದ ಪಾಪಿಯ ಕೃತ್ಯ ಬಯಲಿಗೆ ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಹಾರ ತಜ್ಞೆ ಶಿಲ್ಪಾ ನಾಪತ್ತೆಯಾಗಿದ್ದಾರೆ ಎಂದು ಆಕೆಯ ಪತಿ ವಿಶಾಲ್‌ ದಿನಗಳ ಹಿಂದೆ ಪೊಲೀಸರಿಗೆ ದೂರು ನೀಡಿದ್ದರು. ಆರಂಭದಲ್ಲಿ ಪೊಲೀಸರು ಇದೊಂದು ಸಾಮಾನ್ಯ ನಾಪತ್ತೆ ಪ್ರಕರಣ ಎಂದೇ ಭಾವಿಸಿದ್ದರು.

ಆಗಿದ್ದೇನು?: ದೂರು ನೀಡಿದ ಎರಡು ದಿನಗಳ ಬಳಿಕ ವಿಶಾಲ್‌ ಕೂಡಾ ನಾಪತ್ತೆಯಾಗಿದ್ದ. ಇದೇ ಮನೆಯಲ್ಲಿ ಪುತ್ರನಿಗೆ ವಿಶಾಲ್‌ ಬರೆದಿಟ್ಟ ಪತ್ರವೊಂದು ಸಿಕ್ಕಿತ್ತು. ಅದರಲ್ಲಿ ಆತ ಹತ್ಯೆ ಬಗ್ಗೆ ತಪ್ಪೊಪ್ಪಿಕೊಂಡಿದ್ದ. ಅದರಲ್ಲಿ ಸಿಕ್ಕ ಮಾಹಿತಿ ಅನ್ವಯ ಸಮೀಪದ ಪಾಳು ಬಿದ್ದ ಮನೆ ಹುಡುಕಿದಾಗ ಅಲ್ಲಿ ಮರದ ಶವದ ಮೇಲೆ ಕಾಂಕ್ರೀಟ್ ಹಾಕಿ ಮುಚ್ಚಿದ್ದ ಮರದ ಪೆಟ್ಟಿಗೆ ಸಿಕ್ಕಿದೆ. ಬಳಿಕ ಹುಡುಕಾಟ ನಡೆಸಿದ ವೇಳೆ ವಿಶಾಲ್‌ ಕೂಡಾ ಸಿಕ್ಕಿಬಿದ್ದಿದ್ದಾನೆ.