ಭೂಗಳ್ಳರಿಗೆ ರಕ್ಷಣೆ ಇಲ್ಲ: ಅರಾವಳಿ ಅರಣ್ಯದ 10 ಸಾವಿರ ಮನೆ ಧ್ವಂಸಕ್ಕೆ ಸುಪ್ರೀಂ ಸೂಚನೆ!

* ಭೂಗಳ್ಳರಿಗೆ ಕಾನೂನು ರಕ್ಷಣೆ ನೀಡಲಾಗದು

* ಅರಣ್ಯ ಅತಿಕ್ರಮಣ ತೆರವಿಗೆ ಸುಪ್ರೀಂ ಕೋರ್ಟ್‌ ಆದೇಶ

* ಅರಾವಳಿ ಅರಣ್ಯದ 10 ಸಾವಿರ ಮನೆ ಧ್ವಂಸಕ್ಕೆ ಸೂಚನೆ

Supreme Court orders removal of encroachments in Aravali forest land pod

ನವದೆಹಲಿ(ಜೂ.08): ಅರಾವಳಿ ಅರಣ್ಯ ಪ್ರದೇಶ ಅತಿಕ್ರಮಿಸಿಕೊಂಡು ಹರಾರ‍ಯಣದಲ್ಲಿ ನಿರ್ಮಾಣ ಮಾಡಲಾಗಿದ್ದ 10 ಸಾವಿರ ಮನೆಗಳ ತೆರವಿಗೆ ಸುಪ್ರೀಂ ಕೋರ್ಟ್‌ ಸೋಮವಾರ ಆದೇಶಿಸಿದೆ. ಕಾನೂನಿನ ನೆಪ ಹೇಳಿಕೊಂಡು ಅರಣ್ಯಭೂಮಿ ಅತಿಕ್ರಮಣ ಸಲ್ಲದು. ಭೂಗಳ್ಳರಿಗೆ ಕಾನೂನಿನ ರಕ್ಷಣೆ ಇಲ್ಲ ಎಂಬ ಮಹತ್ವದ ಅಭಿಪ್ರಾಯವನ್ನು ಈ ವೇಳೆ ಅದು ವ್ಯಕ್ತಪಡಿಸಿದೆ.

ಹರ್ಯಾಣದ ಫರೀದಾಬಾದ್‌ ಸಮೀಪದ ಲಕರ್‌ಪುರ ಖೋರಿ ಗ್ರಾಮದ ಸನಿಹದ ಅರಣ್ಯದಲ್ಲಿ ಈ ಮನೆಗಳು ನಿರ್ಮಾಣ ಆಗಿದ್ದವು. 2020ರ ಫೆಬ್ರವರಿಯಲ್ಲೇ ಸುಪ್ರೀಂ ಕೋರ್ಟ್‌ ಇವುಗಳ ತೆರವಿಗೆ ಆದೇಶಿಸಿತ್ತು. ಆದರೆ ಮನೆ ತೆರವು ಪ್ರಶ್ನಿಸಿ ಕೆಲವು ಅತಿಕ್ರಮಣಕಾರರು ಕೋರ್ಟ್‌ ಕದ ಬಡಿದಿದ್ದರು.

13 ಲಕ್ಷ ಹೆಕ್ಟೇರ್‌ ಅರಣ್ಯ ಭೂಮಿ ಒತ್ತುವರಿ, ಕರ್ನಾಟಕ ನಂ.7!

ಇದರ ವಿಚಾರಣೆ ನಡೆಸಿದ ನ್ಯಾ| ಎ.ಎಂ. ಖಾನ್ವಿಲ್ಕರ್‌ ಹಾಗೂ ನ್ಯಾ| ದಿನೇಶ್‌ ಮಹೇಶ್ವರಿ ಅವರ ಪೀಠ, ‘ನೀವು ಕೋರ್ಟಿಗೆ ಬಂದಾಗ ಅಮಾಯಕರಂತೆ ವರ್ತಿಸುತ್ತೀರಿ. ಆದರೆ ಸ್ಥಳದಲ್ಲಿ ನೀವು ಕಾನೂನಿಗೆ ಮನ್ನಣೆ ಕೊಡದೇ ಅರಣ್ಯ ನಿಯಮ ಗಾಳಿಗೆ ತೂರಿ ಮನೆ ಕಟ್ಟಿಕೊಂಡಿದ್ದೀರಿ. ಕಾನೂನಿನ ನೆಪ ಹೇಳಿಕೊಂಡು ಅರಣ್ಯಭೂಮಿ ಅತಿಕ್ರಮಣ ಸಲ್ಲದು. ಭೂಗಳ್ಳರಿಗೆ ಕಾನೂನಿನ ರಕ್ಷಣೆ ನೀಡಲಾಗದು’ ಎಂದು ಕಿಡಿಕಾರಿತು.

ಬಿಜೆಪಿ ಶಾಸಕನ ಒಡೆತನದ ರೆಸಾರ್ಟ್‌ ನೆಲಸಮ!

‘ಈ ಹಿನ್ನೆಲೆಯಲ್ಲಿ ನಿವಾಸಿಗಳು ತಾವಾಗೇ ಮನೆ ತೆರವು ಮಾಡಬೇಕು. ಇಲ್ಲದಿದ್ದರೆ ಫರೀದಾಬಾದ್‌ ಆಡಳಿತವು ಕೂಡಲೇ ಅತಿಕ್ರಮಣ ತೆರವುಗೊಳಿಸಬೇಕು. ಆದರೆ ಮನೆ ಹೊಂದುವ ಹಕ್ಕು ಎಲ್ಲರಿಗೂ ಇದೆ. ಹೀಗಾಗಿ ನಿರ್ವಸಿತರಾಗಲಿರುವ ಅಲ್ಲಿನ ಜನರಿಗೆ ಪರಾರ‍ಯಯ ವಸತಿ ಕಲ್ಪಿಸಬೇಕು. ಆದರೆ ಪೊಲೀಸ್‌ ರಕ್ಷಣೆಯಲ್ಲಿ ಕೂಡಲೇ ಮನೆ ಧ್ವಂಸ ಕೆಲಸ ಆರಂಭಿಸಬೇಕು’ ಎಂದು ನ್ಯಾಯಪೀಠ ಸೂಚಿಸಿತು.

Latest Videos
Follow Us:
Download App:
  • android
  • ios