ತಮಿಳುನಾಡು ಸರ್ಕಾರಕ್ಕೆ ಹಿನ್ನಡೆ, ಪ್ರಾಣಪ್ರತಿಷ್ಠೆ ನೇರಪ್ರಸಾರಕ್ಕೆ ಅಡ್ಡಿಮಾಡದಂತೆ ಸುಪ್ರೀಂ ವಾರ್ನಿಂಗ್!
ರಾಮ ಮಂದಿರ ಪ್ರಾಣಪ್ರತಿಷ್ಠೆ ನೇರಪ್ರಸಾರ, ಅನ್ನದಾನಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಕೋರ್ಟ್ ಮೆಟ್ಟಿಲೇರಿದ್ದ ರಾಮ ಭಕ್ತರಿಗೆ ಗೆಲುವಾಗಿದೆ. ರಾಮ ಮಂದಿರ ಪ್ರಾಣಪ್ರತಿಷ್ಠೆ ನೇರಪ್ರಸಾರಕ್ಕೆ ಸರ್ಕಾರ ಅಡ್ಡಿಪಡಿಸಬಾರದು ಎಂದು ಸುಪ್ರೀಂ ಕೋರ್ಟ್ ಖಡಕ್ ವಾರ್ನಿಂಗ್ ನೀಡಿದೆ.
ನವದೆಹಲಿ(ಜ.22) ಆಯೋಧ್ಯೆ ರಾಮ ಮಂದಿರ ಪ್ರಾಣಪ್ರತಿಷ್ಠೆ ಸಂಭ್ರಮ ತಮಿಳುನಾಡಿನಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ತಮಿಳುನಾಡಿನ ಡಿಎಂಕೆ ಸರ್ಕಾರ ತಮಿಳುನಾಡಿನಲ್ಲಿ ಪ್ರಾಣಪ್ರತಿಷ್ಠೆ ನೇರಪ್ರಸಾರಕ್ಕೆ ನಿರ್ಭಂಧ ಹೇರಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿತ್ತು. ಇದಕ್ಕೆ ಪೂರಕ ಸಾಕ್ಷ್ಯಗಳನ್ನು ಒದಗಿಸಿತ್ತು. ಹಲೆವೆಡೆ ತಮಿಳುನಾಡು ಪೊಲೀಸರು ದೇವಸ್ಥಾನದಲ್ಲಿ ಅಳವಡಿಸಿದ್ದ ಎಲ್‌ಇಡಿ ಸ್ಕ್ರೀನ್ ತೆಗೆದುಹಾಕಿದ ಘಟನೆ ನಡೆದಿದೆ. ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ತುರ್ತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಇದೀಗ ತಮಿಳುನಾಡು ಸರ್ಕಾರಕ್ಕೆ ಖಡಕ್ ವಾರ್ನಿಂಗ್ ನೀಡಿದೆ. ಕೋಮು ಸೌಹಾರ್ಧತೆ, ಸಾಮರಸ್ಯ ಹೆಸರಿನಲ್ಲಿ ರಾಮಮಂದಿ ಪ್ರಾಣಪ್ರತಿಷ್ಠೆಗೆ ಅಡ್ಡಿ ಮಾಡುವಂತಿಲ್ಲ ಎಂದು ಸೂಚಿಸಿದೆ.
ಅನ್ಯ ಸಮುದಾಯದ ಜನರಿದ್ದಾರೆ ಅನ್ನೋ ಕಾರಣಕ್ಕೆ ರಾಮ ಮಂದಿರ ಪ್ರಾಣಪ್ರತಿಷ್ಠೆಯ ನೇರಪ್ರಸಾರವನ್ನು ನಿರ್ಭಂದಿಸಲು ಸಾಧ್ಯವಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆದರೆ ಈ ಕಾರಣ ಮುಂದಿಟ್ಟುಕೊಂಡು ಧಾರ್ಮಿಕ ಸ್ವಾತಂತ್ರ್ಯ ಹರಣ ಸಾಧ್ಯವಿಲ್ಲ ಎಂದು ಖಡಕ್ ಸೂಚನೆ ನೀಡಿದೆ.
ಪ್ರಾಣಪ್ರತಿಷ್ಠೆ ನೇರಪ್ರಸಾರ LED ತೆಗೆದುಹಾಕಿದ ತಮಿಳುನಾಡು ಪೊಲೀಸ್, ದಾಖಲೆ ನೀಡಿದ ಸಚಿವೆ!
ಇದೇ ವೇಳೆ ತಮಿಳುನಾಡು ಸರ್ಕಾರ, ಎಲ್‌ಇಡಿ ಪರದೆ ಸೇರಿದಂತೆ ಶ್ರೀರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಕುರಿತು ಬಂದಿರುವ ಮನವಿ, ಅರ್ಜಿಗಳು ಹಾಗೂ ಈ ಕುರಿತು ತೆಗೆದುಕೊಂಡಿರುವ ನಿರ್ಧಾರಗಳ ವರದಿ ಕೇಳಿದೆ. ಇದೇ ವೇಳೆ ತಮಿಳುನಾಡಿನ ಯಾವುದೇ ಭಾಗದಲ್ಲಿ ರಾಮ ಮಂದಿರ ಪ್ರಾಣಪ್ರತಿಷ್ಠೆ ಎಲ್‌ಇಡಿ ನೇರಪ್ರಸಾರಕ್ಕೆ ನಿರ್ಬಂಧ ಮಾಡುವಂತಿಲ್ಲ ಎಂದಿದೆ.
ತಮಿಳುನಾಡು ಡಿಎಂಕೆ ಸರ್ಕಾರ ಮೌಖಿಕ ಆದೇಶ ನೀಡಿ ರಾಮ ಮಂದಿರ ಪ್ರಾಣಪ್ರತಿಷ್ಠೆ ನೇರಪ್ರಾಸಾರ, ದೇವಸ್ಥಾನದಲ್ಲಿ ಅನ್ನದಾನ, ರಾಮಕಥಾ, ರಾಮಜಪ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಿರುವ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಆಕ್ರೋಶ ವ್ಯಕ್ತಪಡಿಸಿದ್ದರು.
ಶಾಲೆಯಲ್ಲಿ ಪ್ರಾಣಪ್ರತಿಷ್ಠೆ ಸಂಭ್ರಮಕ್ಕೆ ಬ್ರೇಕ್, ತಮಿಳುನಾಡು ಸರ್ಕಾರದ ವಿರುದ್ಧ ಅಣ್ಣಾಮಲೈ ಗರಂ!
ಮೀನಾಕ್ಷಿ ದೇವಸ್ಥಾನ, ಶ್ರೀಪೆರಂಬದೂರು ಸೇರಿದಂತೆ ಹಲವು ದೇವಸ್ಥಾನದಲ್ಲಿನ ಘಟನೆಗಳನ್ನು ಬಿಜೆಪಿ ಬಹಿರಂಗಡಿಸಿತ್ತು. ಕೆಲ ವಿಡಿಯೋ ದಾಖಲೆಗಳನ್ನು ನೀಡಿತ್ತು. ಈ ಘಟನೆಗಳು ಡಿಎಂಕೆ ಸರ್ಕಾರದ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿತ್ತು.