ರಾಮ ಮಂದಿರ ಪ್ರಾಣಪ್ರತಿಷ್ಠೆ ನೇರಪ್ರಸಾರಕ್ಕೆ ತಮಿಲುನಾಡು ಸರ್ಕಾರ ನಿರ್ಬಂಧ ವಿಧಿಸಿದೆ. ಜೊತೆಗೆ ಅನ್ನದಾನ ಸೇರಿದಂತೆ ಶ್ರೀರಾಮ ಹೆಸರಿನ ವಿಶೇಷ ಪೂಜೆಗಳಿಗೂ ಧಾರ್ಮಿಕ ದತ್ತಿ ಇಲಾಖೆ ದೇವಸ್ಥಾನಗಲ್ಲಿ ನಿರ್ಬಂಧ ವಿಧಿಸಲಾಗಿದೆ. ಈ ಕುರಿತು ಕೇಂದ್ರ ಹಣಕಾಸು ಸಚಿವೆ ವಿಡಿಯೋ ದಾಖಲೆ ನೀಡಿ, ಡಿಎಂಕೆ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಚೆನ್ನೈ(ಜ.22) ರಾಮ ಮಂದಿ ಪ್ರಾಣಪ್ರತಿಷ್ಠೆ ಸಂಭ್ರಮ ದೇಶದಲ್ಲೆಡೆ ಕಾಣುತ್ತಿದೆ. ದೇವಸ್ಥಾನಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ ಪ್ರಾಣಪ್ರತಿಷ್ಠೆ ನೇರಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಅನ್ನಸಂತರ್ಪಣೆ, ರಾಮ ಭಜನೆ, ರಾಮಕಥಾ, ವಿಶೇಷ ಪೂಜೆ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯುತ್ತಿದೆ. ಆದರೆ ತಮಿಳುನಾಡಿನ ರಾಮಭಕ್ತರು ಇವೆಲ್ಲದರಿಂದ ವಂಚಿತರಾಗಿದ್ದಾರೆ. ತಮಿಳುನಾಡಿನ ಧಾರ್ಮಿಕ ದತ್ತಿ ಹಾಗೂ ಖಾಸಗಿ ಆಡಳಿತ ಹೊಂದಿರುವ ದೇವಸ್ಥಾನದಲ್ಲಿ ರಾಮ ಮಂದಿರ ಪ್ರಾಣಪ್ರತಿಷ್ಠೆ ನೇರಪ್ರಸಾರಕ್ಕೆ ನಿರ್ಬಂಧ ವಿಧಿಸಿದೆ. ಅನ್ನದಾನಕ್ಕೂ ನಿರ್ಬಂಧ ಹೇರಿದೆ. ಯಾವುದೇ ಸಂಘಟನೆಗಳು ಪ್ರಾಣಪ್ರತಿಷ್ಠೆ ನೇರಪ್ರಸಾರಕ್ಕೆ ನಿರ್ಬಂಧಿಸಿದೆ. ಈ ಕುರಿತು ಗಂಭೀರ ಆರೋಪ ಮಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇದೀಗ ತಮಿಳುನಾಡು ಪೊಲೀಸರು ಎಲ್‌ಇಡಿ ಪರದೆಗಳನ್ನು ತೆಗೆದುಹಾಕುತ್ತಿರುವ ದೃಶ್ಯಗಳನ್ನು ಬಹಿರಂಗಪಡಿಸಿದ್ದಾರೆ.
ತಮಿಳುನಾಡಿನ ಡಿಎಂಕೆ ಸರ್ಕಾರದ ಹಿಂದೂ ವಿರೋಧಿ ನೀತಿಯನ್ನು ಖಂಡಿಸಿರುವ ನಿರ್ಮಲಾ ಸೀತಾರಾಮನ್, ರಾಮ ಭಕ್ತರ ಹಕ್ಕನ್ನು ಕಸಿದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮಿಳುನಾಡಿನಖಾಸಗಿ ಆಡಳಿತವಿರುವ ಕಾಮಾಕ್ಷಿ ದೇವಸ್ಥಾನದಲ್ಲಿ ಬೆಳಗ್ಗೆ 8 ಗಂಟೆಯಿಂದ ರಾಮಭಜನೆ ಆರಂಭಗೊಂಡಿದೆ. ಇತ್ತ ಪ್ರಾಣಪ್ರತಿಷ್ಠೆ ನೇರಪ್ರಸಾರಕ್ಕೆ ಎಲ್‌ಇಡಿ ಪರದೆ ಹಾಕಲಾಗಿತ್ತು. ಆದರೆ ಸಮವಸ್ತ್ರ ರಹಿತ ಪೊಲೀಸರು ಆಗಮಿಸಿ ಎಲ್‌ಇಡಿ ಪರದೆ ತೆಗೆದು ಹಾಕಿದ್ದಾರೆ. ಈ ಕುರಿತು ನಿರ್ಮಲಾ ಸೀತಾರಾಮನ್ ವಿಡಿಯೋ ದಾಖಲೆ ನೀಡಿದ್ದಾರೆ.
ತಮಿಳುನಾಡಿನಲ್ಲಿ ರಾಮಮಂದಿರ ಪ್ರಾಣಪ್ರತಿಷ್ಠೆ ನೇರಪ್ರಸಾರ ಬ್ಯಾನ್, ನಿರ್ಮಲಾ ಗಂಭೀರ ಆರೋಪ!
ತಮಿಳುನಾಡಿನ ಧಾರ್ಮಿಕ ದತ್ತಿ ಇಲಾಖೆ ಅಡಿಯಲ್ಲಿರುವ ಶ್ರೀಪೆರಂಬದೂರಿನ ಸೆಲ್ವ ವಿನಾಯಗರ ದೇವಸ್ಥಾನ , ಖಾಸಗಿ ಆಡಳಿತ ಹೊಂದಿರುವ ಮೊಳಚೂರು ಕರಿಮಾರಿಯಮ್ಮನ್ ದೇವಸ್ಥಾನ, ಸೆಲ್ವಿಝಾಮಂಗಲಂ ಜಾಮೋದೈ ಪೆರುಮಾಳ್ ದೇವಸ್ಥಾನದಲ್ಲಿ ಆಯೋಜಿಸಿದ್ದ ಅನ್ನದಾನಕ್ಕೂ ತಮಿಳುನಾಡು ಸರ್ಕಾರ ನಿರ್ಬಂಧ ವಿಧಿಸಿದೆ ಎಂದು ನಿರ್ಮಲಾ ಸೀತಾರಾಮ್ ಟ್ವೀಟ್ ಮಾಡಿದ್ದಾರೆ.
ಕರುನಿಲಂ ಜಿಲ್ಲೆಯ ಚೆಂಗಲ್ಪಟ್ಟು ಗ್ರಾಮದಲ್ಲಿರುವ 200 ರಾಮ ಭಕ್ತರ ಕುಟುಂಬ ಆಯೋಧ್ಯೆ ರಾಮ ಮಂದಿರ ಪ್ರಾಣಪ್ರತಿಷ್ಠೆ ನೇರಪ್ರಸಾರ ವೀಕ್ಷಿಸಲು ಬಯಸಿದ್ದರು. ಆದರೆ ಸರ್ಕಾರದ ನಿರ್ದೇಶನದಂತೆ ಎಲ್ಇಡಿ ಪರದೆ ಹಾಕಲು ಜಿಲ್ಲಾಧಿಕಾರಿ ಅನುಮತಿ ಕಡ್ಡಾಯವಾಗಿತ್ತು. ಆದರೆ ಇದುವರಿಗೂ ಅನುಮತಿ ಸಿಕ್ಕಿಲ್ಲ. ಹಿಂದೂ ವಿರೋಧಿ, ರಾಮ ವಿರೋಧಿ ಡಿಎಂಕೆ ಸರ್ಕಾರದ ನಡೆಗೆ ನಿರ್ಮಲಾ ಸೀತಾರಾಮನ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಶಾಲೆಯಲ್ಲಿ ಪ್ರಾಣಪ್ರತಿಷ್ಠೆ ಸಂಭ್ರಮಕ್ಕೆ ಬ್ರೇಕ್, ತಮಿಳುನಾಡು ಸರ್ಕಾರದ ವಿರುದ್ಧ ಅಣ್ಣಾಮಲೈ ಗರಂ!
ಕಾಂಚಿಪುರ ಜಿಲ್ಲೆಯಲ್ಲಿ ಪ್ರಾಣಪ್ರತಿಷ್ಠೆ ನೇರಪ್ರಸಾರಕ್ಕೆ 466 ಎಲ್‌ಇಡಿ ಪರದೆಗೆ ಸೂಚನೆ ನೀಡಲಾಗಿತ್ತು. ಆದರೆ ಪೊಲೀಸರ ಮಧ್ಯಪ್ರವೇಶ, ಜಿಲ್ಲಾಧಿಕಾರಿಗಳ ಅನುಮತಿ ಸಿಗದ ಕಾರಣ ಬಹುತೇಕ ಎಲ್‌ಇಡಿ ಪರದೆಗಳನ್ನು ಅಳವಡಿಸಿಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
